ಸೋಮವಾರ, ಫೆಬ್ರವರಿ 17, 2020
29 °C

ಅಮಾಯಕರ ಗುಡಿಸಲು ‌ಕೆಡವಿದ ಬಿಜೆಪಿ ಸರ್ಕಾರ: ಎಚ್‌.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

HD Kumaraswamy

ಕಲಬುರ್ಗಿ: ಬಾಂಗ್ಲಾದೇಶಿಯರು ಎಂದುಕೊಂಡು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ‌ಬಡವರು ವಾಸಿಸುವ ಗುಡಿಸಲುಗಳನ್ನು ಬಿಜೆಪಿ ಸರ್ಕಾರ‌ ಕೆಡವಿ ಅವರ ಹೊಟ್ಟೆಯ‌ ಮೇಲೆ ಬರೆ ಹಾಕಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ‌ಟೀಕಿಸಿದರು.

ನಗರದಲ್ಲಿ ‌ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ (ಸಿಎಎ) ರಾಷ್ಟ್ರೀಯ ‌ಸಮಾವೇಶದಲ್ಲಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ  ಮಾತನಾಡಿದ ಅವರು, ಪೂರ್ವಾಪರ ವಿಚಾರಿಸದೇ ಗುಡಿಸಲು ನೆಲಸಮಗೊಳಿಸುವ ಮನಸ್ಸಾದರೂ ಹೇಗೆ ಬಂತು ಎಂದು ಪ್ರಶ್ನಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿಲ್ಲ. ಬದಲಾಗಿ ಪೊಲೀಸರೇ ಅಣಕು ಪ್ರದರ್ಶನ ‌ಮಾಡಿದ್ದಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ. ನನ್ನ ಹೇಳಿಕೆ ಟೀಕಿಸಿ ದೇಶದ್ರೋಹಿ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಪ್ರಧಾನಿ ನರೇಂದ್ರ ‌ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ‌ ಮುಸ್ಲಿಮರನ್ನು ಕೊಲೆ ಮಾಡಲಾಗಿದೆ. ಮುಸ್ಲಿಂ ಹೆಣ್ಣುಮಕ್ಕಳ ಹೊಟ್ಟೆ ‌ಸೀಳಿ ಭ್ರೂಣ ಹೊರತೆಗೆದು ಕೊಂದಿದ್ದೀರಿ. ಇದನ್ನು ‌ಇಡೀ‌ ದೇಶ ಮರೆಯುವುದಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು