ಜೇವರ್ಗಿ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್)ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 6 ಜನ ಕಾಂಗ್ರೆಸ್, 6 ಜನ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. ಈ ಮುಂಚೆ ಅಧಿಕಾರದಲ್ಲಿದ್ದ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.

ಅಂಕಲಗಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದ ಪ್ರತಾಪ ಚಿದಾನಂದ ಕಟ್ಟಿ ಸೇರಿದಂತೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ವಿಜಯ ಸಾಧಿಸುವ ಮೂಲಕ ಪಿಕಾರ್ಡ್ ಬ್ಯಾಂಕ್ನ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲವನ್ನು ಕಾಂಗ್ರೆಸ್ ದಕ್ಕಿಸಿಕೊಂಡಿದೆ.

ಸಾಲಗಾರರ ಕ್ಷೇತ್ರ ಸಾಮಾನ್ಯ ಹರವಾಳ: ಈಶ್ವರಗೌಡ ಅಣ್ಣಾರಾಯಗೌಡ 16 ಮತ ಪಡೆದು ಗೆಲುವು ಸಾಧಿಸಿದ್ದಾರೆ. ದೇವರೆಡ್ಡೆಪ್ಪ 9 ಮತ ಪಡೆದು ಸೋಲನ್ನನುಭವಿಸಿದರು. ಬಿಳವಾರ: ಇಂದಿರಾ ಚನ್ನಬಸಪ್ಪಗೌಡ ಬಿರಾದಾರ 20 ಮತಗಳ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಹಣಮಂತ್ರಾಯ ಗೌಡ 19 ಮತ ಪಡೆದು ಪರಾಭವಗೊಂಡರು.

ಜೇವರ್ಗಿ: ಶರಣಗೌಡ ಸಿದ್ರಾಮಪ್ಪಗೌಡ ಹರನೂರ 30 ಮತಗಳ ಪಡೆದು ಗೆಲುವು, ಪ್ರತಿಸ್ಪರ್ಧಿ ಶರಣಮ್ಮ ಬಸವರಾಜ 25 ಮತಗಳ ಪಡೆದು ಸೋಲು. ನೆಲೋಗಿ: ಬಸಲಿಂಗಪ್ಪಗೌಡ ಬಿರಾದಾರ 29 ಮತಗಳ ಪಡೆದು ಗೆಲುವು, ಪ್ರತಿಸ್ಪರ್ಧಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಶಿ 24 ಮತ ಪಡೆದು ಪರಾಭವಗೊಂಡರು.

ಆಂದೋಲಾ: ಸಿದ್ದಣ್ಣ ನಾನಾಗೌಡ 42 ಮತ ಪಡೆದು ಗೆಲುವು, ಹಂಪನಗೌಡ ಬಸನಗೌಡ 40 ಮತ ಪಡೆದು ಸೋಲು. ಮಳ್ಳಿ: ಸಾಂಬಸಿವ ಮಲ್ಲಯ್ಯ 22 ಮತಗಳ ಪಡೆದು ಗೆಲುವು, ಗೊಲ್ಲಾಳಪ್ಪಗೌಡ ಬಿರಾದಾರ 15 ಮತ ಪಡೆದು ಪರಾಭವಗೊಂಡರು.
ಅರಳಗುಂಡಗಿ (ಮಹಿಳಾ ಮೀಸಲು): ನಂದಮ್ಮ ಬಸವರಾಜ 17 ಮತ ಪಡೆದು ಗೆಲುವು, ನಾಗಮ್ಮ ಬಿರಾದಾರ 12 ಮತ ಪಡೆದು ಸೋಲು.

ಯಡ್ರಾಮಿ ಪ್ರ ವರ್ಗ : ಬಾಬುಗೌಡ ಸಿದ್ದನಗೌಡ 28 ಮತ ಪಡೆದು ಗೆಲುವು, ಪ್ರತಿಸ್ಪರ್ಧಿ ನಬಿಲಾಲ ಕುಕನೂರ 15 ಮತ ಪಡೆದು ಪರಾಭವಗೊಂಡರು. ಜೇರಟಗಿ ಪ್ರವರ್ಗ ಬ: ಅಮೃತ ಬಾಪುರಾಯ ಮಯೂರ 22 ಮತ ಪಡೆದು ಗೆಲುವು, ಸಿದ್ದಣ್ಣ ಜಾಗೀರದಾರ 7 ಮತ ಪಡೆದು ಸೋತಿದ್ದಾರೆ.

ಇಜೇರಿ ಪರಿಶಿಷ್ಟ ಪಂಗಡ: ಲಕ್ಷ್ಮಿ ಈರಣ್ಣ 38 ಮತ ಪಡೆದು ಗೆಲುವು, ಸಿದ್ದಪ್ಪ ಕವಲ್ದಾರ 12 ಮತಗಳನ್ನು ಪಡೆದಿದ್ದಾರೆ.

ಬಿನ್ ಸಾಲ ಪಡೆಯಲಾರದ ಕ್ಷೇತ್ರ: ಬಸವರಾಜ ಶಿವಲಿಂಗಪ್ಪ 78 ಮತಗಳನ್ನು ಪಡೆದು ಗೆಲುವು, ಷಣ್ಮುಖಪ್ಪಗೌಡ ಹಿರೇಗೌಡ 37 ಮತಗಳ ಪಡೆದು ಪರಾಭವಗೊಂಡರು.

ಲಾಟರಿಯ ಗೆಲುವು: ಕೋಳಕೂರ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮೀನಾಬೇಗಂ ಹಾಜಿಮಲಂಗ ಹಾಗೂ ಕಮಲಾಬಾಯಿ ಬಸವಣ್ಣಪ್ಪ ತಲಾ 6 ಮತಗಳನ್ನು ಪಡೆದಿದ್ದರಿಂದ ಲಾಟರಿ ಹಾಕಿದ್ದು ಲಾಟರಿಯಲ್ಲಿ ಕಾಂಗ್ರೆಸ್ನ ಅಮೀನಾಬೇಗಂಗೆ ವಿಜಯ ಒಲಿದು ಬಂದಿದೆ. ವಡಗೇರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ ಮಲರೆಡ್ಡೆಪ್ಪ ಹಾಗೂ ಜೆಡಿಎಸ್ನ ಚಂದ್ರಶೇಖರ ಅವರಾದ ತಲಾ 13 ಮತ ಪಡೆದಿದ್ದರು. ಲಾಟರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಅವರಾದ ಗೆಲುವು ಸಾಧಿಸಿದರು.

ಅಂಕಲಗಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳನ್ನೇ ಹಾಕದ್ದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರತಾಪ ಚಿದಾನಂದ ಕಟ್ಟಿ ಅವಿರೋಧವಾಗಿ ಆಯ್ಕೆಯಾಗುವಂತಾಯಿತು.

ವಿಜಯೋತ್ಸವ: ಭಾನುವಾರ ನಡೆದ ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ, ಕಾಂಗ್ರೆಸ್ ಬೆಂಬಲಿತರು ಹಿರಿಯ ಮುಖಂಡ ಕೇದಾರಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.