ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳಪ್ಪನವರ ಅಧ್ಯಯನ ಪೀಠ ಸ್ಥಾಪಿಸಿ; ವೀರಸೋಮೇಶ್ವರ ಶಿವಾಚಾರ್ಯರ

Last Updated 26 ಏಪ್ರಿಲ್ 2022, 6:57 IST
ಅಕ್ಷರ ಗಾತ್ರ

ಯಡ್ರಾಮಿ: ‘ಕಡಕೋಳ ಮಡಿವಾಳಪ್ಪನವರ ಹೆಸರಿನಲ್ಲಿ ರಾಜ್ಯ ಸರ್ಕಾರ ಯಾವುದಾದರೂ ಒಂದು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದುಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯರ ಹೇಳಿದರು.

ತಾಲ್ಲೂಕಿನ ಕಡಕೋಳ ಮಡಿ ವಾಳಪ್ಪನವರ ಮಠದಲ್ಲಿ ನಡೆದ ಮಡಿವಾಳಪ್ಪನವರ ದ್ವಿಶತ ಮಾನೋತ್ಸವ, ರುದ್ರಮುನಿ ಶಿವ ಚಾರ್ಯರ ರಜತ ಮಹೋತ್ಸವ ಮತ್ತು ಮಠದ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಹಲವು ದಾರ್ಶನಿಕರ ವಿಚಾರಗಳ ಅಧ್ಯಯನಕ್ಕೆ ವಿಶ್ವವಿದ್ಯಾ ಲಯಗಳಲ್ಲಿ ಅಧ್ಯಾಯನ ಪೀಠ ಸ್ಥಾಪಿಸಲಾಗಿದೆ. ಆದರೆ, ಕಡಕೋಳ ಮಡಿವಾಳಪ್ಪನವರ ಹೆಸರಿನಲ್ಲಿ ಅಧ್ಯಾಯನ ಪೀಠ ಆರಂಭವಾಗಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು’ ಎಂದು ತಿಳಿಸಿದರು.

ಶಾಸಕ ಡಾ.ಅಜಯಸಿಂಗ್ ಮಾತ ನಾಡಿ, ‘ಕಡಕೋಳ ಮಡಿವಾಳಪ್ಪನವರ ಈ ನೆಲದಲ್ಲಿ ನಡೆದಾಡಿದ ದೇವರು. ಅವರ ತತ್ವಪದಗಳು ವಿಶ್ವಮಟ್ಟದಲ್ಲಿ ಸ್ಥಾನ ಪಡೆಯುವಂತಹವು’ ಎಂದರು.

ಕಡಕೋಳ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮಗಳ ಭಕ್ತರು ಮಠಕ್ಕೆ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರದ ಪವಿತ್ರತೆ ಹೆಚ್ಚಿಸಿದ್ದಾರೆ’ ಎಂದರು.

ಸಂಸದ ಉಮೇಶ ಜಾದವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಧಾರ್ಮಿಕ ರಾಷ್ಟ್ರವಾಗಿಸಲು ಯತ್ನಿಸುತ್ತಿದ್ದಾರೆ ಎಂದರು.

ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಸಂಜೆ ಯಡ್ರಾಮಿಯಿಂದ ಕಡಕೋಳ ಗ್ರಾಮದವರೆಗೆ ರುದ್ರಮುನಿ ಶಿವಾಚಾರ್ಯರ 101 ಭಜನಾ ಮಂಡಳಿಗಳಿಂದ ಮೆರವಣಿಗೆ ಮಾಡಲಾಯಿತು. ಕಡಕೋಳ ಸ್ವಾಮೀಜಿಗೆ ಬೆಳ್ಳಿ ಕಿರೀಟವನ್ನು ಸಿದ್ದಬಸವ ಕಬೀರ ಸ್ವಾಮೀಜಿ ಸಮರ್ಪಣೆ ಮಾಡಿದರು. 63 ವಧು–ವರರ ಸಾಮೂಹಿಕ ವಿವಾಹ ಜರುಗಿತು. ಇದೇ ವೇಳೆ ಮಹಾದ್ವಾರದ ಉದ್ಘಾಟನೆ ನಡೆಯಿತು.

ಶಿವಮೂರ್ತಿ ದೇವಾಪುರ, ಯಂಕಂಚಿ ಸ್ವಾಮೀಜಿ, ಚನ್ನಮಲ್ಲ ಕುಕನೂರ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅರವಿಂದ ಮನಗೂಳಿ ಸಿಂದಗಿ, ಶಿವಶರಣಪ್ಪ ಸಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT