ಕಲಬುರಗಿ: ರಾಜ್ಯದ ಎಲ್ಲ ಜನರ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲು ಉದ್ದೇಶಿಸಿರುವ ಈ ಸಮೀಕ್ಷೆ ಸೆ.22ರಿಂದ ಅಕ್ಟೋಬರ್ 7ರತನಕ ಜರುಗಲಿದೆ.

5,297 ವಲಯ ಗುರುತು:

ಸಮೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 5,85,956 ಮನೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ತಂತ್ರಾಂಶದ ಮೂಲಕವೇ 5,297 ಬ್ಲಾಕ್ಗಳನ್ನು(ವಲಯ) ವಿಂಗಡಿಸಲಾಗಿದೆ. ಪ್ರತಿ ವಲಯಕ್ಕೆ ಒಬ್ಬರಂತೆ ಜಿಲ್ಲೆಯಲ್ಲಿ 5,297 ಗಣತಿದಾರರನ್ನು ನೇಮಿಸಲಾಗಿದೆ. ಅವರು ಪ್ರತಿಯೊಂದು ಮನೆಗಳ ಬಾಗಿಲಿಗೆ ಹೋಗಿ ಸಮೀಕ್ಷೆ ಮಾಡಲಿದ್ದಾರೆ. ಪ್ರತಿಯೊಬ್ಬ ಗಣತಿದಾರರಗಿಗೆ ವಿಸ್ತೀರ್ಣದ ಆಧಾರದಲ್ಲಿ 100ರಿಂದ 150 ಮನೆಗಳನ್ನು ಸಮೀಕ್ಷೆ ಮಾಡಲಿದ್ದಾರೆ.

ಶೇ95ರಷ್ಟು ಶಿಕ್ಷಕರು:

‘ಗಣತಿದಾರರಲ್ಲಿ ಶೇ95ರಷ್ಟು ಸರ್ಕಾರಿ ಶಿಕ್ಷಕರಿದ್ದಾರೆ. ಕಲಬುರಗಿ ತಾಲ್ಲೂಕಿನ ಕಲಬುರಗಿ ನಗರದಲ್ಲಿ ಮನೆಗಳು ಹೆಚ್ಚಿವೆ. ಸರ್ಕಾರಿ ಶಾಲೆ ಶಿಕ್ಷಕರು ಕಡಿಮೆ ಇದ್ದಾರೆ. ಅಂಥ ಕಡೆ ಅನುದಾನಿತ ಶಾಲಾ ಶಿಕ್ಷಕರನ್ನು ಬಳಸಲಾಗುತ್ತಿದೆ. ಶಿಕ್ಷಕರ ತೀವ್ರತರ ಕೊರೆತೆಯಿರುವ ಕಡೆಗೆ ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೂ ಬಳಸಲಾಗುತ್ತಿದೆ’ ಎಂದು ಸಮೀಕ್ಷೆಯ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ ವೈ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 6,143 ಮಂದಿಯನ್ನು ಗುರುತಿಸಲಾಗಿತ್ತು. ಜಿಲ್ಲೆಯ 240 ಸಿಬ್ಬಂದಿಗೆ ರಾಜ್ಯಮಟ್ಟದಲ್ಲಿ ತರಬೇತಿ ಕೊಡಲಾಗಿದೆ. ಪ್ರತಿಯೊಂದು ತಾಲ್ಲೂಕು ಹಂತದಲ್ಲಿ ಎರಡು ಹಂತದಲ್ಲಿ ತರಬೇತಿ ನೀಡಿದ್ದಾರೆ. ಪ್ರತಿ 50 ಗಣತಿದಾರರಿಗೆ ಒಬ್ಬರಂತೆ ಮಾಸ್ಟರ್ ಟ್ರೇನರ್ಗಳು ಮೊಬೈಲ್ ಆ್ಯಪ್ನಲ್ಲಿ ಸಮೀಕ್ಷೆ ಕುರಿತು ತರಬೇತಿ ನೀಡಿದ್ದಾರೆ. ಪ್ರತಿ 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರು ಇರಲಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಡಿ.ಸಿ ನೇತೃತ್ವದಲ್ಲಿ ಜಿಲ್ಲಾ ಸಮನ್ವಯ ಸಮಿತಿ ಮೇಲುಸ್ತುವಾರಿ ನಡೆಸಲಿದೆ’ ಎಂದು ವಿವರಿಸಿದರು.

60 ಪ್ರಶ್ನಾವಳಿ:

ಸಮೀಕ್ಷೆಯಲ್ಲಿ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಪೂರಕವಾದ ವಿವರ ಪಡೆಯಲು ಸುಮಾರು 60 ಪ್ರಶ್ನಾವಳಿಗಳ ಮಾದರಿಯನ್ನು ಮೊಬೈಲ್ ಆ್ಯಪ್ನಲ್ಲಿ ಅಳಡಿಸಲಾಗಿದೆ. ಕುಟುಂಬದ ಮುಖ್ಯಸ್ಥರು ಅಷ್ಟೂ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದು, ಇತರ ಸದಸ್ಯರು 40 ಪ್ರಶ್ನೆಗಳಿಗೆ, ಕೆಲವು ಸದಸ್ಯರು ತಮಗೆ ಅನ್ವಯಿಸುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಬಳಿಕ ಮಾಹಿತಿ ಕೊಟ್ಟವರಿಂದ ಸ್ವಯಂ ದೃಢೀಕರಣವನ್ನು ಗಣತಿದಾರರು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗೃತಿ:

ಸಮೀಕ್ಷೆಗೂ ಮುನ್ನವೇ ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿ ಮೂಡಿಸಲು ಯತ್ನಿಸಲಾಗಿದೆ. ಸ್ವಸಹಾಯ ಸಂಘಗಳ ಮೂಲಕ 60 ಪ್ರಶ್ನಾವಳಿಗಳ ಮಾದರಿಯ ನಮೂನೆಯನ್ನು ಸಾರ್ವಜನಿಕರಲ್ಲಿ ವಿತರಿಸಿ ಅರಿವು ಮೂಡಿಸಲಾಗಿದೆ. ಇದಲ್ಲದೇ ರಾಜ್ಯಮಟ್ಟದಲ್ಲಿ ನೀಡಿದ್ದ ಮುದ್ರಿತ ಧ್ವನಿ ಸಂದೇಶವನ್ನು ಗ್ರಾಮ ಪಂಚಾಯಿತಿ ಹಿಡಿದು ನಗರ ಪಾಲಿಕೆ ತನಕ ಸ್ವಚ್ಛವಾಹಿನಿ ಮೂಲಕ ಬಿತ್ತರಿಸಿ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.