ಕಲಬುರಗಿ: ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಇಲಾಖೆಯು, ಕಳೆದೆರಡು ವರ್ಷಗಳಲ್ಲಿ ಕಳ್ಳಭಟ್ಟಿಗೆ ಸಂಬಂಧಿಸಿದಂತೆ 46 ಮತ್ತು ಅಕ್ರಮ ಸೇಂದಿ ಮಾರಾಟದ 94 ಪ್ರಕರಣಗಳನ್ನು ದಾಖಲಿಸಿದೆ.

2023-24 ಮತ್ತು 2024-25ರ ಅಬಕಾರಿ ವರ್ಷದಲ್ಲಿ(ಜುಲೈ-ಜೂನ್ ಅವಧಿ) ಗೋಪ್ಯ ಮಾಹಿತಿ ಆಧರಿಸಿ ಹಲವು ದಾಳಿ ನಡೆಸಿದ್ದು, 382 ಘೋರ ಪ್ರಕರಣಗಳು, ಒಂಬತ್ತು ಎನ್ಡಿಪಿಎಸ್ ಪ್ರಕರಣಗಳು, 846 ಸೌಮ್ಯ (ಬಿ.ಎಲ್.ಎಸ್) ಹಾಗೂ 936 ಕಲಂ (ಎ) ಪ್ರಕರಣಗಳು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ 10,363 ಲೀಟರ್ ಮದ್ಯ, 963 ಲೀಟರ್ ಹೊರ ರಾಜ್ಯದ ಮದ್ಯ, 38,182 ಲೀಟರ್ ಬೀಯರ್, 197 ಲೀಟರ್ ಕಳ್ಳಭಟ್ಟಿ, 4,646 ಲೀಟರ್ ಕಲಬೆರೆಕೆ ಸೇಂದಿ, 1,872 ಲೀಟರ್ ಬೆಲ್ಲದ ಕೊಳೆ, 8.08 ಕೆ.ಜಿ. ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಈ ಅಕ್ರಮಗಳಿಗೆ ಬಳಕೆಯಾದ 131 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಅಬಕಾರಿ ಕಾಯ್ದೆ 1965ರ ಕಲಂ 43ರಡಿ ಕಳೆದ ಎರಡು ವರ್ಷದಲ್ಲಿ 135 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇನ್ನು ಕಲಬುರಗಿ ಜಿಲ್ಲಾ ಗಡಿಯು ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಂದಿಕೊಂಡಿದ್ದು, ಗಡಿಯಲ್ಲಿನ ಅಬಕಾರಿ ಅಕ್ರಮ ತಡೆಗೆ ಆಳಂದ ತಾಲ್ಲೂಕಿನ ಖಜೂರಿ, ಸೇಡಂ ತಾಲ್ಲೂಕಿನ ರಿಬ್ಬನಪಲ್ಲಿ, ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಮತ್ತು ಕೊಂಚಾವರಂನಲ್ಲಿ ಅಬಕಾರಿ ತನಿಖಾ ಠಾಣೆ ಸ್ಥಾಪಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲೇ ಹೆಚ್ಚು:

ಕಳೆದ 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಅಬಕಾರಿ ಚಟುವಟಿಕೆಗಳನ್ನು ಗಮನಿಸಿದಾಗ ವಿಧಾನಸಭೆ ಚುನಾವಣೆಯಲ್ಲಿಯೇ ಹೆಚ್ಚು ಮದ್ಯ ವಶಕ್ಕೆ ಪಡೆದಿರುವುದು ವಿಶೇಷ. ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ 188 ಘೋರ, 72 ಸೌಮ್ಯ, ಕಲಂ 15ಎನಲ್ಲಿ 1,119 ಪ್ರಕರಣ ದಾಖಲಿಸಿಕೊಂಡು 16,075 ಲೀಟರ್ ಮದ್ಯ, 21,252 ಲೀಟರ್ ಬೀಯರ್, 92 ಲೀಟರ್ ಕಳ್ಳಭಟ್ಟಿ, 408 ಲೀಟರ್ ಕಲಬೆರೆಕೆ ಸೇಂದಿ ವಶಕ್ಕೆ ಪಡೆದು 129 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ 164 ಘೋರ, ಎನ್.ಡಿ.ಪಿ.ಎಸ್ 1, 159 ಸೌಮ್ಯ, ಕಲಂ 15ಎನಲ್ಲಿ 708 ಪ್ರಕರಣ ದಾಖಲಿಸಿಕೊಂಡು 3,410 ಲೀಟರ್ ಮದ್ಯ, 1,809 ಲೀಟರ್ ಬೀಯರ್, 330 ಲೀಟರ್ ಕಳ್ಳಭಟ್ಟಿ, 697 ಲೀಟರ್ ಕಲಬೆರೆಕೆ ಸೇಂದಿ ವಶಕ್ಕೆ ಪಡೆದು 101 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಇಂದಿನ ಯುವ ಪೀಳಿಗೆ ಮದ್ಯ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯನ್ನು ಕಳ್ಳಭಟ್ಟಿ ಮುಕ್ತಗೊಳಿಸಲು ನಿರಂತರ ಪ್ರಯತ್ನ
ಸಾಗಿದೆಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.