ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ರಾಮ್‌ಕುಮಾರ್ ಲಗ್ಗೆ

ಜಪಾನ್‌ ಜೋಡಿಗೆ ಡಬಲ್ಸ್ ಗರಿ
Published 2 ಡಿಸೆಂಬರ್ 2023, 18:57 IST
Last Updated 2 ಡಿಸೆಂಬರ್ 2023, 18:57 IST
ಅಕ್ಷರ ಗಾತ್ರ

ಕಲಬುರಗಿ: ನಮ್ಮ ನ್ಯೂಸ್ ಕಂಪೆನಿಯ ಸೀನಿಯರ್ ರೈಟರ್ ಆಗಿ, ನಿಮ್ಮ ಪ್ರಮುಖ ಪಾತ್ರವೆಂದರೆ ಸಂಪ್ರದಾಯಗಳನ್ನು ಪಾಲಿಸುವ ಉತ್ತಮ ವಿಷಯಗಳನ್ನು ನಿರ್ಮಿಸುವುದು. ಭವಿಷ್ಯದ ಪ್ರಶ್ನೆಗಳಿಗೆ ಅನುಗುಣಅಧಿಕಾರಯುತ ಪ್ರದರ್ಶನ ನೀಡಿದ ರಾಮಕುಮಾರ್ ರಾಮನಾಥನ್‌ ಅವರು ಐಟಿಎಫ್‌ ಕಲಬುರಗಿ ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಆಟಗಾರ 6–2, 6–1ರಿಂದ ಜಪಾನ್‌ನ ರಿಯೊತಾರೊ ತಗುಚಿ ಅವರನ್ನು ಮಣಿಸಿದರು. ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಐದನೇ ಶ್ರೇಯಾಂಕದ ರಾಮಕುಮಾರ್ ಅವರಿಗೆ ಏಳನೇ ಶ್ರೇಯಾಂಕದ, ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಸವಾಲು ಎದುರಾಗಿದೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ಪಿಚ್ಲರ್ ಅವರಿಗೆ 6–2, 6–4ರಿಂದ ಜಪಾನ್‌ನ ರೂಕಿ ಮತ್ಸುದಾ ಎದುರು ಗೆಲುವು ಒಲಿಯಿತು.

ಸುಲಭ ಗೆಲುವು: ತಗುಚಿ ಪಂದ್ಯದಲ್ಲಿ ರಾಮಕುಮಾರ್ ಅವರಿಗೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿತ್ತು. ಮೊದಲ ಸೆಟ್‌ನ ನಾಲ್ಕನೇ ಗೇಮ್‌ವರೆಗೆ ಇಬ್ಬರ ಮಧ್ಯೆ ಸಮಬಲದ ಹೋರಾಟವೂ ಕಂಡುಬಂತು.
ಸ್ಕೋರ್ 2–2ಕ್ಕೆ ತಲುಪಿತ್ತು. ಫೋರ್‌ಹ್ಯಾಂಡ್‌ ಹೊಡೆತಗಳಲ್ಲಿ ಉಭಯ ಆಟಗಾರರು ಪಾರಮ್ಯ ಮೆರೆದರು.

ಐದನೇ ಗೇಮ್‌ ಜಯಿಸಿದ ರಾಮ್‌ ಬಳಿಕ ತಿರುಗಿ ನೋಡಲಿಲ್ಲ. ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಆರನೇ ಗೇಮ್‌ ಗೆದ್ದ ಅವರು ಸಂಪೂರ್ಣ ಹಿಡಿತ ಸಾಧಿಸಿದರು. ಮತ್ತೆ ಸತತ ಎರಡು ಗೇಮ್‌ ಗೆದ್ದು ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲಿ ರಾಮ್‌ ಮತ್ತಷ್ಟು ಆಕ್ರಮಣಕಾರಿಯಾದರು. ಕೇವಲ ಎರಡನೇ ಗೇಮ್‌ ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿಯೂ ಭಾರತದ ಆಟಗಾರನ ರ‍್ಯಾಕೆಟ್‌ನಿಂದ ಏಳು ಏಸ್‌ಗಳು ಸಿಡಿದವು.

ಜಪಾನ್‌ ಜೋಡಿಗೆ ಡಬಲ್ಸ್ ಪ್ರಶಸ್ತಿ: ಜಪಾನ್‌ನ ರಿಯೊತಾರೊ ತಗುಚಿ– ರೂಕಿ ಮತ್ಸುದಾ ಜೋಡಿ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಶನಿವಾರ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ತಗುಚಿ–ಮತ್ಸುದಾ 6–4, 2–6, 10–7ರಿಂದ ಭಾರತದ ನಿತಿನ್‌ ಕುಮಾರ್ ಸಿನ್ಹಾ– ಆಸ್ಟ್ರಿಯಾದ ಡೇವಿಡ್‌ ಪಿಚ್ಲರ್ ಎದುರು ಗೆದ್ದು ಬೀಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT