ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ: ಮಾದನ ಹಿಪ್ಪರಗಿ ರಸ್ತೆ ತಡೆದು ಪ್ರತಿಭಟನೆ

ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯ
Published : 25 ಜುಲೈ 2023, 13:43 IST
Last Updated : 25 ಜುಲೈ 2023, 13:43 IST
ಫಾಲೋ ಮಾಡಿ
Comments

ಆಳಂದ: ಈಚೆಗೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮದ ವಿವಿಧ ಸಂಘಟನೆ ಪ್ರಮುಖರು ಮಂಗಳವಾರ ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮದ ಬಸ್‌ ನಿಲ್ದಾಣದ ಮುಂಭಾಗದ ಆಳಂದ-ಅಕ್ಕಲಕೋಟ ಮಾರ್ಗದ ರಾಜ್ಯ ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿದರು. ಆರೋಪಿ ದುಷ್ಕೃತ್ಯಕ್ಕೆ  ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯಿಸಲಾಯಿತು. ಹೋರಾಟಗಾರರಾದ ಮಹಿಬೂಬ ಫಣಿಬಂಧ, ಮಲ್ಲಯ್ಯ ಸ್ವಾಮಿ ಮಾತನಾಡಿ, ‘ಆಳಂದ ತಾಲ್ಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಈ ವರ್ಷದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ದುಷ್ಟರಿಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಬೇಕು. ಅಂದಾಗ ಮಾತ್ರ ಇಂತಹ ಘಟನೆಗಳು ಪುನರಾರ್ವತನೆ ಆಗುವುದನ್ನು ತಡೆಗಟ್ಟಲು ಸಾಧ್ಯವಿದೆ‘ ಎಂದರು.

ಪ್ರಮುಖರಾದ ಸಿದ್ದರಾಮ ಅರಳಿಮರ, ಧರ್ಮಣ್ಣಾ ಕೌಲಗಿ, ಮಲ್ಲಿನಾಥ ಪಟ್ನೆ, ರಾಹುಲ ಜಿಡ್ಡಿಮನಿ, ಶಿವಪುತ್ರಪ್ಪ ಬುಕ್ಕಾ, ಮಲ್ಲಿನಾಥ ಏಲಿಕೇರಿ, ಗಣೇಶ ಓಂನಾಮಶೆಟ್ಟಿ ಇದ್ದರು. ಉಪತಹಶೀಲ್ದಾರ್‌ ರವೀಂದ್ರ ಶೇರಿಕಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾಮದ ಸರ್ಕಾರಿ ಪಿಯು ಕಾಲೇಜು, ಪ್ರೌಢ ಶಾಲೆ ಹಾಗೂ ಶಿವಲಿಂಗೇಶ್ವರ ಪ್ರೌಢಶಾಲೆ, ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ಕೈಗೊಳ್ಳಲಾಯಿತು.
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT