ಕಲಬುರ್ಗಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ತಂಡ
ಕಲಬುರ್ಗಿ: ಪ್ರವಾಹ ಅಧ್ಯಯನಕ್ಕಾಗಿ ಬಂದಿರುವ ಕೇಂದ್ರ ತಂಡಕ್ಕೆ ಬೆಳೆಹಾನಿಗಾಗಿ ರೈತರಿಗೆ ಪರಿಹಾರ ನೀಡಲಾದ ವಿವರಗಳನ್ನು ನೀಡಲು ವಿಳಂಬ ಮಾಡಿದ ಅಧಿಕಾರಿಗಳನ್ನು ತಂಡದ ಮುಖ್ಯಸ್ಥ ರಮೇಶಕುಮಾರ್ ಘಂಟಾ ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿದ್ದ ರೈತರಿಬ್ಬರಿಗೆ ಪರಿಹಾರ ಸಿಕ್ಕಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಬಯಸಿದರು. ಆ ರೈತರ ಬದಲು ಬೇರೆಯವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ರಾಜಾ ಪಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಹಾಗೂ ಕಪನೂರ ಗ್ರಾಮದ ಪಿಡಿಓ ಮುಂದಾದರು. ನಮ್ಮ ಭೇಟಿಯ ಬಗ್ಗೆ ಮುಂಚೆಯೇ ನಿಮಗೆ ಮಾಹಿತಿ ಕೊಟ್ಟಿರುತ್ತೇವೆ. ಆದರೂ ನಾವು ಬಯಸಿದ ಮಾಹಿತಿ ಕೊಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸಹ ಮುಂದಿನ ಊರಿಗೆ ಹೋಗುವುದರೊಳಗಾಗಿ ಕೇಂದ್ರ ತಂಡದ ಮಾಹಿತಿ ಕೊಡಲು ಅಧಿಕಾರಿಗಳಿಗೆ ತಿಳಿಸಿ ಎಂದು ಸೂಗುರ ಅವರಿಗೆ ತಾಕೀತು ಮಾಡಿದರು.
ಕೇಂದ್ರ ತಂಡದ ಸದಸ್ಯ ಭರತೇಂದು ಸಿಂಗ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.