ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | ಕರ್ನಾಟಕ ರಾಜ್ಯೋತ್ಸವ: ಅದ್ದೂರಿ ಮೆರವಣಿಗೆ

Published 1 ನವೆಂಬರ್ 2023, 14:07 IST
Last Updated 1 ನವೆಂಬರ್ 2023, 14:07 IST
ಅಕ್ಷರ ಗಾತ್ರ

ಕಾಳಗಿ: ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಸಂಭ್ರಮದ ನಿಮಿತ್ತ ತಾಲ್ಲೂಕು ಆಡಳಿತ ಪಟ್ಟಣದಲ್ಲಿ ಬುಧವಾರ ಕನ್ನಡಾಂಬೆ ಭುವನೇಶ್ವರಿದೇವಿ ಅದ್ದೂರಿ ಮೆರವಣಿಗೆ ನಡೆಸಿತು.

ತಹಶೀಲ್ದಾರ್‌ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದ ತಹಶೀಲ್ದಾರ್ ಘಮಾವತಿ ರಾಠೋಡ ಅವರು ‘ಕನ್ನಡ ನಾಡು-ನುಡಿ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ ಅತ್ಯಂತ ಮಹತ್ವದಾಗಿದೆ. ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೊಸ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಎಲ್ಲ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಶಾಸ್ತ್ರಿ, ಕಸಾಪ ನಿಕಟಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಪತಂಗೆ ಮಾತನಾಡಿದರು.

ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಸಾಗಿದ ಮೆರವಣಿಗೆಯಲ್ಲಿ ಶಾಲಾ ಮಕ್ಕಳು 50 ಮೀಟರ್ ಉದ್ದದ ನಾಡಧ್ವಜ ಹೊತ್ತು ಸಾಗಿದರು. ಆಳಂದ ತಾಲ್ಲೂಕಿನ ಯಳಸಂಗಿ ಮತ್ತು ತೀರ್ಥ ತಾಂಡಾದ ಮಹಿಳೆಯರ ಲಂಬಾಣಿ ನೃತ್ಯ, ಸ್ಥಳೀಯರ ಹಲಗೆ, ಡೊಳ್ಳು ಕುಣಿತ ಆಕರ್ಷಕವಾಗಿತ್ತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಕುಡಳ್ಳಿ, ಪ.ಪಂ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ್, ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್, ಜೆಸ್ಕಾಂ ಎಇಇ ಪ್ರಭುಲಿಂಗ ಮಡ್ಡಿತೋಟ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಗ್ರಾಮ ಆಡಳಿತಾಧಿಕಾರಿ ಸಂತೋಷ ಮಾನವಿಕರ್, ಮುಖಂಡ ಶಿವಶರಣಪ್ಪ ಗುತ್ತೇದಾರ, ನೀಲಕಂಠ ಮಡಿವಾಳ, ಇಬ್ರಾಹಿಂಪಾಶಾ ಗಿರಣಿಕರ್, ಪ್ರಾಚಾರ್ಯ ಡಾ.ಪಂಡಿತ ಬೆಳಮಗಿ, ಪಶುವೈದ್ಯ ಡಾ.ಗೌತಮ ಕಾಂಬಳೆ, ಸತೀಶ್ಚಂದ್ರ ಸುಲೇಪೇಟ, ರಾಜೇಂದ್ರಬಾಬು ಹೀರಾಪುರ, ಮಾಣಿಕ ರಾಠೋಡ, ಕನ್ನಡಪರ ಸಂಘಟನೆ ಅಧ್ಯಕ್ಷ ದತ್ತಾತ್ರೇಯ ಗುತ್ತೇದಾರ, ಬಾಬು ನಾಟೀಕಾರ, ಅನಿಲ್ ಗುತ್ತೇದಾರ, ಕಾಳು ಬೆಳಗುಂಪಿ, ಇಬ್ರಾಹಿಂ ಶಹಾ, ರೇವಣಸಿದ್ದ ಪೂಜಾರಿ, ಪರಮೇಶ್ವರ ಕಟ್ಟಿಮನಿ ಇದ್ದರು.

ಮೆರವಣಿಗೆಗೆ ಸೀಮಿತವಾದ ರಾಜ್ಯೋತ್ಸವ: ಕಾಳಗಿ ತಾಲ್ಲೂಕಾಗಿ 6 ವರ್ಷ ಪೂರೈಸುತ್ತಿದೆ. ತಾಲ್ಲೂಕು ಆಡಳಿತವು ಮೊದಮೊದಲು ನಾಡ, ರಾಷ್ಟ್ರ ಹಬ್ಬಗಳ ಆಚರಣೆಯಲ್ಲಿ ಎಲ್ಲ ಇಲಾಖೆ, ಶಾಲಾ–ಕಾಲೇಜು, ಗಣ್ಯರನ್ನು ಆಹ್ವಾನಿಸಿ, ವೇದಿಕೆ ರಚಿಸಿ ಸಾಧಕರನ್ನು ಸನ್ಮಾನಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸುತ್ತಿತ್ತು. ಈಚೆಗೆ ಸ್ವಾತಂತ್ರ್ಯ ದಿನಾಚರಣೆ, ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣಕ್ಕೆ ಸೀಮಿತಗೊಳಿಸಿ, ರಾಜ್ಯೋತ್ಸವ ಮೆರವಣಿಗೆಗೆ ಮಾತ್ರ ಮೀಸಲಿರಿಸಿ ಶಿಷ್ಟಾಚಾರ ಮರೆತಂತೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT