ಆಳಂದ: ತಾಲ್ಲೂಕಿನ ನಿರಗುಡಿ ಗ್ರಾಮಕ್ಕೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿ ಕಾಯಕ ಗ್ರಾಮ ಯೋಜನೆಯಡಿ ನಿರಗುಡಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗಾಗಿ ದತ್ತು ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಯಿತು.

ಗ್ರಾ.ಪಂ ಅಧ್ಯಕ್ಷೆ ಕಾಂತಾಬಾಯಿ ಕಾಂಬಳೆ, ಉಪಾಧ್ಯಕ್ಷ ಲಾಯಕಲಿ ದಖನೆ ಹಾಗೂ ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಅವರೊಂದಿಗೆ ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ನಂತರ ಗ್ರಾಮದಲ್ಲಿನ ಚರಂಡಿ, ಮುಖ್ಯರಸ್ತೆ, ಸಾರ್ವಜನಿಕ ಶೌಚಾಲಯ, ಕೂಸಿನ ಮನೆ, ಅರಿವು ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು.

ಈ ವೇಳೆ ಸಿಇಒ ಭನ್ವರ್ ಸಿಂಗ್ ಮೀನಾ ಮಾತನಾಡಿ, ‘ನಿರಗುಡಿ ಗ್ರಾ.ಪಂ ವ್ಯಾಪ್ತಿಯಲ್ಲಿನ ನಿರಗುಡಿ, ಮಟಕಿ, ತೀರ್ಥ ಗ್ರಾಮಗಳಿಗೆ ಮೂಲಸೌಕರ್ಯ ಒದುಗಿಸಲು ಜಿ.ಪಂ ವಿಶೇಷ ಅನುದಾನದ ಜತೆಗೆ ಗ್ರಾ.ಪಂ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು’ ಎಂದರು.

‘ಗ್ರಾ.ಪಂ.ನ ಸಮಗ್ರ ಅಭಿವೃದ್ಧಿಗಾಗಿ ನರೇಗಾ, ಸ್ವಚ್ಛ ಭಾರತ ಮಿಷನ್, ಜಲ ಜೀವನ್ ಮಿಷನ್ ಹಾಗೂ ವಿಶೇಷ ಅನುದಾನವು ಸದ್ಬಳಕೆ ಮಾಡಿಕೊಳ್ಳಲಾಗುವುದು, ತಾವೂ ಹಾಗೂ ಜಿ.ಪಂ, ತಾ.ಪಂ ಅಧಿಕಾರಿಗಳು ಸತತ ಭೇಟಿ, ಮೇಲ್ವಿಚಾರಣೆಯಲ್ಲಿ ಮಾದರಿ ಕಾರ್ಯಗಳು ಜನರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಮಾತನಾಡಿ, ‘ನಿರಗುಡಿ ಪಂಚಾಯಿತಿಯು ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಸಭೆ ನಡೆಸಿ, ಯೋಜನೆ ರೂಪಿಸಲಾಗುವುದು‘ ಎಂದರು.

₹4 ಲಕ್ಷ ಅನುದಾನ ಬಿಡುಗಡೆ:

ಗ್ರಾಮದಲ್ಲಿನ ಅರಿವು ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಿಇಒ ಅವರು ₹4 ಲಕ್ಷ ಅನುದಾನ ನೀಡಿ, ತುರ್ತು ಕಾಮಗಾರಿ ಆರಂಭಿಸಲು ತಿಳಿಸಿದರು. ಅಗತ್ಯ ಪುಸ್ತಕಗಳು ಸಹ ಗ್ರಂಥಾಲಯಕ್ಕೆನೀಡಿದರು.

ಪಿಡಿಒ ಶಿವಲಿಂಗಯ್ಯ ಮಠಪತಿ, ಗ್ರಾ.ಪಂ ಸದಸ್ಯರಾದ ಬಾಬುರಾವ ಬಿರಾದಾರ, ರಾಜು ಗಾಡೇಕರ್, ಪರಮೇಶ್ವರ ಹತ್ತಿಕಾಳೆ, ಗುರು ವಾಡಿ, ಅಲ್ಲಾ ಭಕ್ಷಾ, ಯಶ್ವಂತರಾವ ಪಾಟೀಲ, ದಯಾನಂದ ತೀರ್ಥ, ವಿಜಯಕುಮಾರ ಇಟಗಾರ್, ಸಿದ್ದಣ್ಣರಾವ ದೇಶಮುಖ, ರಾಹುಲ ಮುಲಗೆ, ರೇವಪ್ಪ ಮುಲಗೆ, ದಯಾನಂದ ಕೆಂಪೆ, ಮಂಜುನಾಥ ಬಿರಾದಾರ ಉಪಸ್ಥಿತರಿದ್ದರು.

ಜಿಪಂ ಸಿಇಒ ಅವರು ನಿರಗುಡಿ ಗ್ರಾಮವನ್ನು ದತ್ತು ಪಡೆದಿರುವದು ಸಂತಸ ತಂದಿದೆ ಮುಖ್ಯವಾಗಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದರೆ ಸ್ವಚ್ಚತೆ ಕಾಪಾಡಲು ಸಾಧ್ಯವಾಗಲಿದೆ.
ಲಾಯಕಲಿ ದಖನ್, ಗ್ರಾಪಂ ನಿರಗುಡಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.