18 ಜನರಿಗೆ ಅನುಕಂಪದ ನೇಮಕಾತಿ
‘ಸೇವಾ ಅವಧಿಯಲ್ಲಿ ನಿಧನರಾದ ನೌಕರರ ಅವಲಂಬಿತ 18 ಜನರಿಗೆ ಅನುಕಂಪದ ಆಧಾರದ ಮೇಲೆ ನಿಗಮದ ಕಾನ್‌ಸ್ಟೆಬಲ್ ಹುದ್ದೆಗೆ ನೇಮಕಾತಿ ಮಾಡಲಾಗಿದೆ. ಇವರಿಗೆ ನ.18ರಂದು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು ಈಗ ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ’ ಎಂದು ಅರುಣಕುಮಾರ ಎಂ.ವೈ.ಪಾಟೀಲ ತಿಳಿಸಿದರು. ಅಭ್ಯರ್ಥಿಗಳ ವಿವರ: ಕಲಬುರಗಿ ವಿಭಾಗ–1ರಲ್ಲಿ ಸುಧಾರಾಣಿ ಸುದೀಪ ಶಿವಲೀಲಾ ಕಲಬುರಗಿ ವಿಭಾಗ–2ರಲ್ಲಿ ಮಾರುತಿ ಕೊಪ್ಪಳ ವಿಭಾಗದಲ್ಲಿ ಗುರುದೇವಿ ರಮ್ಯಾ ಬಿ. ಬೀದರ್ ವಿಭಾಗದಲ್ಲಿ ಸಾಯಿನಾಥ ಶಿವಲಿಂಗ ರೇಖಾ ಅಲಿಯಾಸ ಭುವನೇಶ್ವರಿ ವಸಂತಕುಮಾರ ಮಹೇಶ ಅಂಬಿಕಾ ಪ್ರಫುಲ್ ಗುರುಪ್ರಸಾದ ಅನ್ನಪೂರ್ಣ ರಾಯಚೂರು ವಿಭಾಗದಲ್ಲಿ ಕೃಷ್ಣ ಬಡಿಗೇರ ವಿಜಯಪುರ ವಿಭಾಗದಲ್ಲಿ ಓಂಕಾರ ಸೈನಜಾ ಅವರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.