ಗುರುವಾರ , ಫೆಬ್ರವರಿ 20, 2020
18 °C
ಟೋಕರೆ ಕೋಲಿ- ಕಬ್ಬಲಿಗ ಹಾಗೂ ಅಂಬಿಗರ ಸಂಘದ ಕಚೇರಿ ಉದ್ಘಾಟಿಸಿದ ಸಂಸದ

ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಪ್ರಯತ್ನಿಸುವೆ: ಉಮೇಶ್‌ ಜಾದವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋಲಿ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿವೆ. ಇದನ್ನು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವೆ ಎಂದು ಸಂಸದ ಡಾ.ಉಮೇಶ ಜಾಧವ ಭರವಸೆ ನೀಡಿದರು.

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಗಣೇಶ ನಗರದಲ್ಲಿ ಬುಧವಾರ ಟೋಕರೆ ಸಮಾಜದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಟೋಕರೆ ಕೋಲಿ ಹಾಗೂ ಕಬ್ಬಲಿಗ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಹೇಳಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಹರವಾಳ ಮಾತನಾಡಿ, ‘ಕೋಲಿ ಸಮಾಜವನ್ನು ಸಂಘಟಿಸಿದ ದಿ.ವಿಠ್ಠಲ ಹೇರೂರರ ಜಯಂತಿ ಡಿಸೆಂಬರ್ 3ರಂದು ಆಚರಿಸುವ ಮೂಲಕ ಸಮಾಜದ ಸಂಘಟನೆಗೆ ಒತ್ತು ಕೊಡಲಾಗುವುದು. ಟೋಕರೆ ಕೋಲಿ, ತಳವಾರ, ಅಂಬಿಗ, ಕಬ್ಬೇರ, ಬೆಸ್ತ, ಸುಣಗಾರ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಸಂಘದ ಕಚೇರಿಗೆ ನಿವೇಶನ ನೀಡಬೇಕು’ ಎಂದು ಮನವಿ ಮಾಡಿದರು.

ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಕಾರ್ಯಾಧ್ಯಕ್ಷ ರೇವಣಸಿದ್ದಪ್ಪ ಹಲಚೇರಿಕರ್, ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕಳಸಿ, ತಿಪ್ಪಣ್ಣ ಸರಡಗಿ, ಬಾಬುರಾವ ಚೇಂಗಟಾ, ಬಸವರಾಜ ಬೂದಿಹಾಳ, ನಿಂಗಣ್ಣ ಭಂಗಿ, ಬಸವರಾಜ ಜಮಾದಾರ, ಬಸವರಾಜ ಹೇರೂರ, ಪರಮೇಶ್ವರ ಮಾಸ್ತರ, ಶಿವಶರಣಗೌಡ ಗೂಳನೂರ, ಬಸವರಾಜ ಮತ್ತಿಮಡು, ವಿಠ್ಠಲ ಧಮ್ವಾಡಿ, ಚಂದ್ರಶೇಖರ ಚಿಣಮಗೇರಾ, ಅರ್ಜುನ ಜಮಾದಾರ, ಯಲ್ಲಪ್ಪ ಕೋಲಕಾರ, ಸೂರ್ಯಕಾಮತ ಸುಣಗಾರ, ಸಂತೋಷ ತಳವಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು