ಅಂಬೇಡ್ಕರ್ ವೃತ್ತದಲ್ಲೇ ನಿಲ್ಲುವ ಬಸ್‌ಗಳು | ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಲು ಆಗ್ರಹ
ಕಾಳಗಿ ಮತ್ತು ಸುತ್ತಲಿನ ಜನರು ಕಲಬುರಗಿ ಚಿಂಚೋಳಿ ಕಡೆಗೆ ಸಂಚರಿಸುವುದು ಸಹಜ. ಆದರೆ ಕೆಲ ತಡೆರಹಿತ ಬಸ್ಸುಗಳು ಅಂಬೇಡ್ಕರ್ ವೃತ್ತದಿಂದಲೇ ಹೊರ ಹೋಗುತ್ತಿದ್ದು ಪ್ರಯಾಣಿಕರಿಗೆ ಬಸ್ಸಿನ ಬಗ್ಗೆ ತಿಳಿಯದಾಗಿದೆ
ಮಹ್ಮದ್ ಗುಡುಸಾಬ ಕಮಲಾಪುರ ನಿವೃತ್ತ ಶಿಕ್ಷಕ
ಕಾಳಗಿ ತಾಲ್ಲೂಕಾಗಿದ್ದರಿಂದ ಸುತ್ತಲಿನ ಹಳ್ಳಿಗಳ ಜನರು ಕೆಲಸಕ್ಕಾಗಿ ನಿತ್ಯ ಇಲ್ಲಿಗೆ ಬರುತ್ತಾರೆ. ಕೆಲ ತಡೆರಹಿತ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರದೆ ಇರುವುದರಿಂದ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ
ಮಲ್ಲಪ್ಪ ಚಿಂತಕುಂಟಾ ಗ್ರಾ.ಪಂ ಸದಸ್ಯ ಕೋಡ್ಲಿ
ಸೀಟುಗಳ ಸಾಮರ್ಥ್ಯ ಮೀರಿ ಪ್ರಯಾಣಿಕರು ಬಸ್ಸಿನಲ್ಲಿದ್ದರೆ ಆ ವೇಳೆ ಕಾಳಗಿ ಬಸ್ ನಿಲ್ದಾಣಕ್ಕೆ ಹೋಗದಿರುವುದು ನಡೆಯುತ್ತದೆ. ಒಂದು ವೇಳೆ ಅಷ್ಟೊಂದು ಪ್ರಯಾಣಿಕರು ಬಸ್ಸಿನಲ್ಲಿ ಇಲ್ಲದೇ ಇರುವಾಗ ಆ ಬಸ್ಸು ನಿಲ್ದಾಣಕ್ಕೆ ಹೋಗಿ ಬರಲೇಬೇಕು. ಈ ಕುರಿತು ಸಿಬ್ಬಂದಿಗೆ ಮನವರಿಕೆ ಮಾಡಿದ್ದೇನೆ