ಬುಧವಾರ, ಡಿಸೆಂಬರ್ 8, 2021
28 °C

ಕಲಬುರ್ಗಿಯಲ್ಲಿ ‌ಭಾರಿ ಮಳೆ: ಕಲ್ಯಾಣ ‌ಕರ್ನಾಟಕ ಉತ್ಸವದ ಮೇಲೆ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದಲ್ಲಿ ಬುಧವಾರ ‌ಬೆಳಿಗ್ಗೆಯಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಇದೇ 17ರಂದು ನಡೆಯುವ ಕಲ್ಯಾಣ ‌ಕರ್ನಾಟಕ ಉತ್ಸವ ದಿನಾಚರಣೆ ಅಸ್ತವ್ಯಸ್ತವಾಗುವ ಸಾಧ್ಯತೆ‌ ಇದೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜಿಟಿ ಜಿಟಿ ಸುರಿದ ಮಳೆ ಸಂಜೆಯ ಬಳಿಕ ಬಿರುಸು ಪಡೆದುಕೊಂಡಿತು.

ಹೀಗಾಗಿ ಪ್ರಧಾನ ಕಾರ್ಯಕ್ರಮ ನಡೆಯುವ ‌ಡಿಎಆರ್ ಮೈದಾನ‌ ಜಲಾವೃತವಾಗಿದ್ದು, ಶಾಮಿಯಾನ ಹಾಕುವ ಕಾರ್ಯಕ್ಕೂ ಅಡ್ಡಿಯಾಗಿದೆ.

ಇದೇ 17ರಂದು ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ಬರುವ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಅವರು ಬೆಳಿಗ್ಗೆ 9ಕ್ಕೆ ಮೈದಾನದಲ್ಲಿ ಧ್ವಜಾರೋಹಣ ‌ನೆರವೇರಿಸಲಿದ್ದಾರೆ. ಆದರೆ, ಭಾರಿ ಮಳೆಯಿಂದಾಗಿ ಮೈದಾನದಲ್ಲಿ ಸಭಿಕರಿಗೆ ಆಸನ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. 

ಉತ್ಸವದ ಅಂಗವಾಗಿ‌ ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಆದರೆ, ಕಮಾನಿಗೆ ಅಳವಡಿಸಿದ ‌ಬಟ್ಟೆಗಳೆಲ್ಲ ತೊಯ್ದು ತೊಪ್ಪೆಯಾಗಿವೆ.

ಮಂಗಳವಾರ ರಾತ್ರಿಯಿಡೀ ಸುರಿದ ಮಳೆ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿರುಸಿನಿಂದ ಸುರಿಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು