ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ಸಚಿವ ಈಶ್ವರ ಖಂಡ್ರೆ

Published 3 ಮೇ 2024, 16:15 IST
Last Updated 3 ಮೇ 2024, 16:15 IST
ಅಕ್ಷರ ಗಾತ್ರ

ಆಳಂದ: ‘ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ರೈತರ ಒಟ್ಟು ₹3.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಿದೆ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೇಸ್‌ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಮತಯಾಚನೆ ಮಾಡಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಜನವಿರೋಧಿ ನೀತಿ ಹಾಗೂ ಸಂವಿಧಾನ ವಿರೋಧಿ ಆಡಳಿತಕ್ಕೆ ತಕ್ಕಪಾಠ ಕಲಿಸಬೇಕು’ ಎಂದರು.

ಶಾಸಕ, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರದ ಗ್ಯಾರಂಟಿಗಳು ಎಲ್ಲ ಕುಟುಂಬಕ್ಕೂ ತಲುಪಿವೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸುವ ಮೂಲಕ ನನಗೆ  ಶಕ್ತಿ ತುಂಬಿ’ ಎಂದು ಕೋರಿದರು. 

ಮಾಜಿ ಸಚಿವ ರಾಜಶೇಖರ ಬಿ.ಪಾಟೀಲ, ಸಿದ್ದರಾಮ ಪ್ಯಾಟಿ, ದಯಾನಂದ ಪಾಟೀಲ, ಅಶೋಕ ಸಾವಳೇಶ್ವರ ಮಾತನಾಡಿದರು. 

ಮುಖಂಡರಾದ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಸುಖಜೀತ ಸಿಂಗ್‌, ಶಂಕರರಾವ ದೇಶಮುಖ, ರಾಜಶೇಖರ ಪಾಟೀಲ, ಆಸೀಪ್‌ ಅನ್ಸಾರಿ, ತುಕರಾಮ ವಗ್ಗೆ, ದತ್ತಾರಾಜ ಗುತ್ತೇದಾರ, ಗುರುಶರಣ ಪಾಟೀಲ, ರವಿ ಪಾಟೀಲ, ಮೋಹನಗೌಡ ಪಾಟೀಲ, ಸುಭಾಷ ಚಿಚಕೋಟೆ, ರವಿಕಾಂತ ಪಾಟೀಲ, ಭೀಮರಾವ ಡಗೆ, ರವೀಂದ್ರ ಕೊರಳ್ಳಿ, ಶಾಂತಕುಮಾರ ಪಾಟೀಲ, ಸಿದ್ದು ವೇದಶೆಟ್ಟಿ, ಕನ್ನಿರಾಮ ರಾಠೋಡ, ಸತೀಶ ಕಡಗಂಚಿ, ಲಿಂಗರಾಜ ಪಾಟೀಲ, ಪ್ರತಾಪ ಕುಲಕರ್ಣಿ ಉಪಸ್ಥಿತರಿದ್ದರು.

ಗಡಿಗ್ರಾಮಗಳಾದ ತಡೋಳಾ, ಹೊದಲೂರು, ಬಬಲೇಶ್ವರ, ರುದ್ರವಾಡಿ, ತಲೆಕುಣಿ, ಸಾಲೇಗಾಂವ, ಅಳಂಗಾ, ತುಗಾಂವ, ಜವಳಗಾ, ಗದ್ಲೆಗಾಂವ , ಶಿರೂರು ಮತ್ತಿತರ ಗ್ರಾಮದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಾದನ ಹಿಪ್ಪರಗಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿ, ಮತಯಾಚನೆ ನಡೆಸಿದರು. ಸುತ್ತಲಿನ ವಿವಿಧ ಗ್ರಾಮದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT