ವಾಡಿ: ‘ನಮ್ಮ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಚುನಾವಣೆಯನ್ನು ಹೋರಾಟದ ಒಂದು ಭಾಗವಾಗಿ ಸ್ವೀಕರಿಸಿದೆ. ಸೋತರೂ ಗೆದ್ದರೂ ಜನರ ಜತೆ ನಿಲ್ಲುತ್ತೇವೆ. ಗೆದ್ದರೆ ಜನರ ಸಮಸ್ಯೆಗಳು ತೆಗೆದುಕೊಂಡು ಹೋರಾಟ ಮಾಡುತ್ತೇವೆ’ ಎಂದು ಪಕ್ಷದ ಅಭ್ಯರ್ಥಿ ಎಸ್.ಎಂ.ಶರ್ಮಾ ಹೇಳಿದರು.

ಹಲಕರ್ಟಿ ಗ್ರಾಮದಲ್ಲಿ ಈಚೆಗೆ ನರೇಗಾ ಕಾರ್ಮಿಕರ ಮಧ್ಯ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ದುಡಿಯುವ ವರ್ಗದ ವಿಮೋಚನೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ದೇಶದಲ್ಲಿ ಪ್ರಬಲ ಕ್ರಾಂತಿಕಾರಿ ಹೋರಾಟಗಳನ್ನು ಕಟ್ಟುತ್ತಿದೆ. ಚುನಾವಣೆಯನ್ನೂ ಸಹ ನಾವು ಹೋರಾಟದ ಭಾಗವಾಗಿ ಸ್ವೀಕರಿಸಿದ್ದೇವೆ. ಕೂಲಿ ಕಾರ್ಮಿಕರ ಮತಗಳೇ ನನಗೆ ಶ್ರೀರಕ್ಷೆಯಾಗಿವೆ’ ಎಂದರು.

ಪಕ್ಷದ ನಾಯಕರೊಂದಿಗೆ ಚಿತ್ತಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಎಸ್ಯುಸಿಐ ಪಕ್ಷದ ಜಿಲ್ಲಾ ನಾಯಕ ವೀರಭದ್ರಪ್ಪ ಆರ್.ಕೆ, ಮುಖಂಡರಾದ ಗೌತಮ ಪರ್ತೂರಕರ, ಶಿವುಕುಮಾರ ಆಂದೋಲಾ, ವೆಂಕಟೇಶ ದೇವದುರ್ಗ, ದತ್ತಾತ್ರೇಯ ಹುಡೆಕರ, ಸಿದ್ದರಾಜ ಮದ್ರಿ, ಸಿದ್ದಾರ್ಥ ತಿಪ್ಪನೋರ, ಕಾರ್ಮಿಕರಾದ ವೀರೇಶ ನಾಲವಾರ, ಮಾಂತೇಶ ಉಳಗೋಳ, ಸಾಬಣ್ಣಾ ಬೆಳಗುಂಪಿ, ಕರಣಪ್ಪ ಆಂದೋಲ, ಭಾಗಮ್ಮ ಪರ್ತೂರ, ಮಹಾದೇವಿ ಹುಳಗೋಳ, ಶಿವಮ್ಮ ತಳಕಿ, ರಮಾಬಾಯಿ ತಿಪ್ಪನೊರ, ಲಲಿತಾಬಾಯಿ ಮಾವಿನ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.