ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ
ಅಭಿವೃದ್ಧಿಯ ಹರಿಕಾರ
ಅಪ್ಪಟ ಕಾಂಗ್ರೆಸ್ಸಿಗರಾದ ಖರ್ಗೆ ಅವರು ಜವಹರಲಾಲ್ ನೆಹರೂ ಇಂದಿರಾಗಾಂಧಿ ರಾಜೀವ್ ಗಾಂಧಿ ಅವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದವರು. ರಾಜ್ಯದಲ್ಲಿ ಶಿಕ್ಷಣ ಕಂದಾಯ ಗೃಹ ಇಲಾಖೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿ ತಮ್ಮ ಸಚಿವ ಸ್ಥಾನದ ಬಲದಿಂದ ಹತ್ತು ಹಲವು ಯೋಜನೆಗಳನ್ನು ಕಲಬುರಗಿಗೆ ತಂದಿದ್ದಾರೆ. ಕೇಂದ್ರದ ಕಾರ್ಮಿಕ ಖಾತೆ ಸಚಿವರಾಗಿದ್ದಾಗ ₹ 1400 ಕೋಟಿ ಮೊತ್ತದ ಬೃಹತ್ ಇಎಸ್‌ಐ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯನ್ನು ನಿರ್ಮಿಸಿದರು. ಕೊರೊನಾ ಸಮಯದಲ್ಲಿ ಇಎಸ್‌ಐಸಿ ಇದ್ದುದಕ್ಕೆ ಸಾವಿರಾರು ಜನರು ಸಾವಿನ ದವಡೆಯಿಂದ ಪಾರಾದರು. ರೈಲ್ವೆ ಖಾತೆ ಸಚಿವರಾಗಿದ್ದಗಲೂ 27ಕ್ಕೂ ಅಧಿಕ ರೈಲುಗಳನ್ನು ಕಲಬುರಗಿ ಮೂಲಕ ಓಡಿಸಲು ಕ್ರಮ ಕೈಗೊಂಡರು. ಕಲಬುರಗಿಗೆ ರೈಲ್ವೆ ವಿಭಾಗೀಯ ಕೇಂದ್ರವನ್ನು ಘೋಷಿಸಿದ್ದರು. ರಾಜ್ಯ ಸರ್ಕಾರ ರೂಪಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆ ಇದೆ.