ಹಳಿ ದಾಟುವಾಗ ರೈಲು ಬಡಿದು ಸಾವು

ವಾಡಿ (ಕಲಬುರ್ಗಿ ಜಿಲ್ಲೆ): ಚಿತ್ತಾಪುರ ಬಳಿಯ ಇಟಗಿ ಗ್ರಾಮದ ಹೊರವಲಯದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಕರಿಬಸಪ್ಪ ಪಾಟೀಲ ಕೂಗನೂರ ಅವರು (64) ಶನಿವಾರ ಮಧ್ಯಾಹ್ನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ದೂರದವರೆಗೂ ದೇಹದ ಅಂಗಗಳು ಬಿದ್ದಿವೆ. ಒಂದು ಕಾಲು ಸುಮಾರು 5 ಕಿ.ಮೀ ದೂರದಲ್ಲಿ ಬಿದ್ದಿದೆ.
ಇಟಗಿ ಸಮೀಪದ ರೈಲ್ವೆ ಹಳಿ ಬಳಿಯೇ ವ್ಯಕ್ತಿಯ ಜಮೀನು ಇದ್ದು, ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಾಡಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.