ಕಲಬುರ್ಗಿ: ಸೇಡಂ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಯಾನಾಗುಂದಿಯಲ್ಲಿ ಮಾತೆ ಮಾಣಿಕೇಶ್ವರಿ ಅಮ್ಮನವರು ಶುಕ್ರವಾರ ಭಕ್ತರಿಗೆ ದರ್ಶನ ನೀಡಿದರು.

ಮಾತೆ ಮಾಣಿಕೇಶ್ಬರಿ ಅವರುಈ ಹುಣ್ಣಿಮೆಯ ದಿನದಂದು(ಜುಲೈ 27) ದರ್ಶನ ಕೊಡುತ್ತಾರೆ. ಇಂದುಚಂದ್ರ ಗ್ರಹಣ ನಿಮಿತ್ತ ಬೇಗ ದರ್ಶನ ನೀಡುತ್ತಾರೆಂದು ಬೆಳಿಗ್ಗೆಯಿಂದಲೇ ಮಾಣಿಕ್ಯಗಿರಿಯಲ್ಲಿ ಸಾಕಷ್ಟು ಸಂಖ್ಯೆಯಭಕ್ತರು ಬಂದಿಸೇರಿದ್ದರು. ಹೂವು, ಹಣ್ಣು–ಕಾಯಿಯಿಂದ ದೂರವಿರುವ ಅವರು,ದರ್ಶನ ವೇಳೆ ‘ಪ್ರಾಣಿಗಳ ಹಿಂಸೆ ಮಾಡಬಾರದು. ಪ್ರಾಣಿಗಳ ಬಗ್ಗೆ ದಯೆ ಇರಬೇಕು’ ಎಂಬ ಸಂದೇಶವನ್ನು ಭಕ್ತರಿಗೆ ನೀಡುತ್ತಾ ಬಂದಿದ್ದಾರೆ.

ತಾಲ್ಲೂಕಿನಿಂದ 40 ಕಿ.ಮೀ ದೂರದಲ್ಲಿರುವ ಮಾಣಿಕ್ಯ ಗಿರಿಯಲ್ಲಿ ಸಾಮಾನ್ಯ ಯುವತಿಯೊಬ್ಬರು ಲೋಕ ಕಲ್ಯಾಣಕ್ಕಾಗಿ ಧ್ಯಾನಾಸಕ್ತರಾಗಿದ್ದರು. ಅವರೇ ಇಂದಿನ ಮಾತೆ ಮಾಣಿಕೇಶ್ವರಿಯಾಗಿದ್ದಾರೆ. 84 ವರ್ಷದ ಅಮ್ಮನವರು ಲೋಕಕಲ್ಯಾಣಕ್ಕಾಗಿ ನಿತ್ಯ ಧ್ಯಾನ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ತಮ್ಮ ದೈವಿ ಶಕ್ತಿ ಮತ್ತು ಭಕ್ತಿಯಿಂದ ಎಲ್ಲರ ಹೃದಯವನ್ನೇ ಗೆದ್ದಿದ್ದಾರೆ. ಅಂದಿನ ದಟ್ಟ ಕಾನನ ಮಾಣಿಕ್ಯಗಿರಿಯೇ ಇಂದು ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.

ಏನೂ ಇಲ್ಲದ ಜಾಗದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವುದರ ಮೂಲಕ ಯಾನಾಗುಂದಿ ಕ್ಷೇತ್ರ ಪ್ರಸಿದ್ಧಿ ಪಡೆಯಲು ಕಾರಣೀಕೃತರಾದವರು ಮಾತೆ ಮಾಣಿಕೇಶ್ವರಿ ಅಮ್ಮನವರು. ಅನ್ನ, ನೀರು ಬಿಟ್ಟು ಗುಹೆಯೊಳಗೆ ಧ್ಯಾನಾಸಕ್ತರಾದರೆ ಹೊರಬರಲು ಸುಮಾರು ತಿಂಗಳುಗಳೇ ಆಗುತ್ತವೆ. ವರ್ಷದಲ್ಲಿ ಎರಡು ದಿನ ಅಮ್ಮನವರು ದರ್ಶನ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ತಾಲ್ಲೂಕು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಮಾಣಿಕ್ಯಗಿರಿಯಲ್ಲಿ ತ್ರಿಕೂಟ, ವೆಂಕಟೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ಪಾರ್ವತಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಹನುಮಾನ ದೇವಸ್ಥಾನ, ಕೆಳಗಡೆ ಗಣಪತಿ ದೇವಸ್ಥಾನ, ಮೌಲಾಲಿ ದರ್ಗಾ ಇವೆ.

ಹಚ್ಚ ಹಸಿರಿನ ಸೊಬಗಿನಿಂದ ಕಂಗೋಳಿಸುತ್ತಿರುವ ಗಿರಿಯಲ್ಲಿ ಬಿಳಿ ಬಟ್ಟೆಯ ಧರಿಸಿದ ಭಕ್ತರ ಭಕ್ತಿಯ ಭಾವೈಕ್ಯ ಇಮ್ಮಡಿಗೊಳ್ಳುತ್ತಿದೆ. ತಾಲ್ಲೂಕು, ಜಿಲ್ಲೆ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ. ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದ್ದಾರೆ. ಭಕ್ತರ ರಕ್ಷಣೆಗಾಗಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಯಾರೀ ಮಾಣಿಕೇಶ್ವರಿ ಮಾತೆ?
ಅದೊಂದು ಅದ್ಭುತ ಬೆಟ್ಟ. ಅಲ್ಲಿ ನೆಲೆಸಿರುವ ಮಾತೆಯ ದರ್ಶನಕ್ಕೆ ಲಕ್ಷಾಂತರ ಹೃದಯಗಳು ತನ್ಮಯತೆಯಿಂದ ಕಾಯುತ್ತವೆ. ಗುರು ಪೌರ್ಣಿಮೆ, ಶಿವರಾತ್ರಿ ಬಂತೆಂದರೆ, ಬೆಟ್ಟದ ತಪ್ಪಲಿನಲ್ಲಿ ಭಕ್ತರ ದಂಡೇ ಸೇರುತ್ತದೆ. ನೆಟ್ಟ ಕಣ್ಣುಗಳು ಮಾತೆಯ ಆಗಮನಕ್ಕಾಗಿ ಹಾತೊರೆಯುತ್ತವೆ.

ಇದುವೇ ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಯಾನಾಗುಂದಿಯ ಸೂರ್ಯ ನಂದಿ ಕ್ಷೇತ್ರ. ಯಾದಗಿರಿಯಿಂದ 48 ಕಿ.ಮೀ. ದೂರದಲ್ಲಿದೆ. ಜೀವಂತ ದೇವತೆ ಎಂದೇ ಭಕ್ತರು ತಿಳಿದಿರುವ ಮಾತಾ ಮಾಣಿಕೇಶ್ವರಿ ದೇವಿ ನೆಲೆವೀಡು ಇದು.
ಶ್ರೀರಾಮಚಂದ್ರನು ಲಕ್ಷ್ಮಣನೊಡನೆ ಕೆಲವು ದಿನ ಇಲ್ಲಿದ್ದು, ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಅದೇ ಶ್ರೀರಾಮೇಶ್ವರ ಮಂದಿರ. ರಾಮ ಮಂದಿರದ ಹಿಂದೆ ಒಂದು ಸುಂದರ ಗುಂಡವಿದ್ದು, ಅದನ್ನು `ಪ್ರದೋಷ ತೀರ್ಥಂ, `ಪ್ರಯೋಗ ಮಾಧವಂ’ ಎಂದು ಕರೆಯಲಾಗುತ್ತದೆ.

ಮಾತಾ ಮಾಣಿಕೇಶ್ವರಿ ಅವರು 1949ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಯಾನಾಗುಂದಿಗೆ ಆಗಮಿಸಿದರು. 1953ರಲ್ಲಿ ಕಾಶಿ ಕ್ಷೇತ್ರದಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು. 1953ರ ಡಿಸೆಂಬರ್ 21ರಂದು ಮಾತೆ ಶಿವಾಲಯದ ಹಿಂದಿನ ಕೋಣೆಯಲ್ಲಿ ಅಘೋರ ತಪಸ್ಸು ಆರಂಭಿಸಿದರು. 1954ರ ಮಾರ್ಚ್ 3ರಂದು ತಪಸ್ಸು ಮುಗಿಸಿ ಭಕ್ತರಿಗೆ ದರ್ಶನ ನೀಡಿದರು ಎಂದು ಅನೇಕ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ವರ್ಷಕ್ಕೆ ಎರಡು ಬಾರಿ ಮಾತ್ರ ಮಾತಾ ಮಾಣಿಕೇಶ್ವರಿ ದೇವಿ ದರ್ಶನ ನೀಡುತ್ತಾರೆ. ಇದಕ್ಕಾಗಿ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಆಂಧ್ರದಿಂದಲೂ ಲಕ್ಷಾಂತರ ಭಕ್ತರ ದಂಡೇ ಸೇರುತ್ತದೆ.

ವರ್ಷದಲ್ಲಿ ಎರಡು ಬಾರಿ ದರ್ಶನ
ಶಿವರಾತ್ರಿಯಂದು ದರ್ಶನ ನೀಡುವ ಮಾತಾ ಮಾಣಿಕೇಶ್ವರಿ ದೇವಿ ಅವರು, ಗುರು ಪೌರ್ಣಿಮೆಯವರೆಗೂ ದರ್ಶನ ಕೊಡುವುದಿಲ್ಲ. ಅಲ್ಲಿಯವರೆಗೆ ತಮ್ಮ ಧ್ಯಾನ ಮಂದಿರದಲ್ಲಿಯೇ ಧ್ಯಾನ ಮಾಡುತ್ತಾರೆ. ವಿಶೇಷ ದರ್ಶನ, ವಿಶೇಷ ಪೂಜೆ ಎಂಬಿತ್ಯಾದಿಗಳಿಗೆ ಇಲ್ಲಿ ಅವಕಾಶವಿಲ್ಲ. ಎಷ್ಟೇ ದೊಡ್ಡ ವ್ಯಕ್ತಿ ಬಂದರೂ, ಮಾತಾಜಿ ಬಯಸಿದರೆ ಮಾತ್ರ ದರ್ಶನ. ಅನೇಕ ರಾಜಕಾರಣಿಗಳು, ಮುಖ್ಯಂತ್ರಿಗಳು ಏಳೆಂಟು ಗಂಟೆ ಕಾಯ್ದು, ದರ್ಶನ ಇಲ್ಲದೇ ಮರಳಿದ ಉದಾಹರಣೆಗಳೂ ಇವೆ.

ಹೂವು, ಹಣ್ಣುಗಳಿಂದ ದೂರ; ಪ್ರಾಣಿ ಹಿಂಸೆ ಸಲ್ಲ
ಹೂವು, ಹಣ್ಣು, ಕಾಯಿಗಳಿಂದ ಮಾತಾಜಿ ಬಲು ದೂರು. ಭಕ್ತರು ತೆಗೆದುಕೊಂಡು ಹೋಗುವ ಹೂವು, ಹಣ್ಣು, ಕಾಯಿಗಳನ್ನು ಸೂರ್ಯನಂದಿ ಕ್ಷೇತ್ರದಲ್ಲಿರುವ ದೇವಾಲಯಗಳಿಗೇ ಅರ್ಪಿಸಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೇ, ಪ್ರಾಣಿಗಳ ಹಿಂಸೆಯನ್ನು ತಡೆಯುವುದಕ್ಕಾಗಿಯೇ ಮಾತಾಜಿ ಕಾರ್ಯಮಗ್ನರಾಗಿದ್ದಾರೆ.

ದರ್ಶನದ ಸಮಯದಲ್ಲಿ ಪ್ರಾಣಿಗಳ ಹಿಂಸೆ ಮಾಡಬಾರದು. ಪ್ರಾಣಿಗಳ ಬಗ್ಗೆ ದಯೆ ಇರಬೇಕು ಎಂಬುದನ್ನೇ ಮಾತಾಜಿ ಭಕ್ತರಿಗೆ ಹೇಳುತ್ತಾರೆ. ಅದರಂತೆ ಕ್ಷೇತ್ರಕ್ಕೆ ಬರುವ ಅನೇಕ ಭಕ್ತರು, ಮಾಂಸಾಹಾರದ ಸೇವನೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಯೂ ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.