ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ | ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಶೇ 74.47ರಷ್ಟು ಮತದಾನ

Published 3 ಜೂನ್ 2024, 15:51 IST
Last Updated 3 ಜೂನ್ 2024, 15:51 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ 4 ಮತಗಟ್ಟೆಗಳಲ್ಲಿ ಸೋಮವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಫಜಲಪುರ ತಾಲೂಕಿನಲ್ಲಿ ಶೇ 74.47ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಹಾಗೂ ಚುನಾವಣೆ ಅಧಿಕಾರಿ ಸಂಜುಕುಮಾರ ದಾಸರ ತಿಳಿಸಿದರು.

ಪಟ್ಟಣದ ತಹಶೀಲ್ದಾರರ ಕಚೇರಿ ಮತಗಟ್ಟೆ ಶೇ 76.16, ಚೌಡಾಪುರ ಗ್ರಾ.ಪಂ ಮತಗಟ್ಟೆ ಶೇ 70.90ರಷ್ಟು, ಕರಜಗಿ ಗ್ರಾ.ಪಂ ಮತಗಟ್ಟೆ ಶೇ 73.64 ಹಾಗೂ ಮಲ್ಲಾಬಾದ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಗದಗಟ್ಟೆಯಲ್ಲಿ ಶೇ 77.46 ರಷ್ಟು ಮತದಾನವಾಗಿದೆ. 4 ಮತಗಟ್ಟೆಗಳಲ್ಲಿ ಒಟ್ಟು ಶೇ 74.47 ರಷ್ಟು ಮತದಾನವಾಗಿದೆ.

ಭಾನುವಾರ ರಾತ್ರಿ ಮಳೆಯಾಗಿದ್ದರಿಂದ ಸಂಚಾರಕ್ಕೆ ತೊಂದರೆ ಆಯಿತು. ರಸ್ತೆ ವಿಸ್ತರಣೆ ಕಾಮಗಾರಿ ನಡೆದಿರುವುದರಿಂದ ತಗ್ಗು–ಗುಂಡಿಗಳಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ತೊಂದರೆ ಆಯಿತು.

ಶಾಸಕ ಎಂ.ವೈ. ಪಾಟೀಲ್, ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ. ಪಾಟೀಲ, ಅವರ ಪತ್ನಿ ಹಾಗೂ ಬಿಜೆಪಿ ಮುಖಂಡ ನಿತಿನ ಗುತ್ತೇದಾರ ಅವರ ಸಂಗಡಿಗರು ಮತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT