ಭಾನುವಾರ, ಮೇ 22, 2022
25 °C

‘ಅರ್ಹ ನಾಯಕನ ಆಯ್ಕೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಬದಲಾವಣೆ ತರಲು ಸಮರ್ಥನೆಂದು ಭರವಸೆ ನೀಡುವ ವ್ಯಕ್ತಿಯನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ನಾವು ಮುಂದೆ ಬಂದು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಉಪನ್ಯಾಸಕ ಸತೀಶ ನಿಲಂಗೆ ತಿಳಿಸಿದರು.

ಇಲ್ಲಿನ ವಿರೇಂದ್ರ ಪಾಟೀಲ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂಲಸೌಕರ್ಯಗಳ ದೊಡ್ಡ ಯೋಜನೆಗಳು ಮತ್ತು ಹಲವಾರು ವಿಷಯಗಳನ್ನು ನಿರ್ಧರಿಸುವ ದೇಶದ ನಾಯಕ, ಮೂಲ ಸೌಕರ್ಯ ವ್ಯವಸ್ಥೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದಿದ್ದರೆ ಅದರಿಂದ ಹಲವಾರು ಸಮಸ್ಯೆಗಳು ಉದ್ಭವಗೊಳ್ಳುತ್ತವೆ ಎಂದರು.

ಪ್ರಾಚಾರ್ಯ ಮಲ್ಲಿಕಾರ್ಜುನಯ್ಯ ಗಣಾಚಾರಿ ಮಾತನಾಡಿ, ಚುನಾವಣಾ ಆಯೋಗವು ಪ್ರತಿ 5 ವರ್ಷಗಳಿಗೊಮ್ಮೆ ಮತ್ತು ಚುನಾವಣೆಯ ಮೊದಲು ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಮತದಾನದ ಸಮಯದಲ್ಲಿ, ವೋಟರ್ ಐಡಿಯನ್ನು ಕೊಂಡೊಯ್ಯುವ ಅಗತ್ಯವಿಲ್ಲ, ನಿಮ್ಮ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಒಯ್ಯಬಹುದು ಎಂದು ತಿಳಿಸಿದರು.

ಉಪನ್ಯಾಸಕ ಕೆ. ನಾರಾಯಣ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಡಾ.ರಾಜೇಶ್ ಆಲಮೇಲಕರ, ಎಚ್.ಬಿ.ಕೊಳೆಕರ, ಬಿ.ಎಚ್.ಬಿರಾದಾರ, ಅರವಿಂದ ಜೋಶಿ, ರಮೇಶ್, ಪವನಕುಮಾರ ಇದ್ದರು.

ಉಪನ್ಯಾಸಕ ಎಸ್.ಎನ್.ಗುಡಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.