ಶನಿವಾರ, ಜನವರಿ 18, 2020
20 °C
ಸಮಯೋಚಿತವಾಗಿ ಸಿದ್ಧತೆ ನಡೆಸಿದ ಸ್ವಯಂ ಸೇವಕ ಮತ್ತು ನಿರ್ವಹಣಾ ಸಮಿತಿ, 40 ಕಾಲೇಜುಗಳ ವಿದ್ಯಾರ್ಥಿಗಳು ಭಾಗಿ

ಕಲಬುರ್ಗಿ: ಸಮ್ಮೇಳನಕ್ಕೆ 2,000 ಯುವಜನರ ಪಡೆ ಸನ್ನದ್ಧ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತೊಗರಿ ಸಾಮ್ರಾಜ್ಯದಲ್ಲಿ ಕನ್ನಡಮ್ಮನ ಜಾತ್ರೆಯನ್ನು ಅತ್ಯಂತ ಶಿಸ್ತಿನಿಂದ ನಡೆಸಲು 2,000 ಸ್ವಯಂ ಸೇವಕರ ಪಡೆ ಸನ್ನದ್ಧವಾಗಿದೆ. ಸಮ್ಮೇಳನದ ಅಂಗವಾಗಿ ನೇಮಿಸಿರುವ ಸ್ವಯಂ ಸೇವಕ ಮತ್ತು ನಿರ್ವಹಣಾ ಸಮಿತಿಯ ಮುಖಂಡರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ, ಪ‍ಟ್ಟಿ ಅಂತಿಮಗೊಳಿಸಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಹಾಗೂ ಎನ್‌ಸಿಸಿ ಶಿಬಿರಾರ್ಥಿಗಳನ್ನು ಒಳಗೊಂಡ ಈ ಪಡೆ ಇನ್ನೊಂದು ವಾರದಲ್ಲಿ ತಾಲೀಮು ಕೂಡ ನಡೆಸಲಿದೆ.

ಫೆ. 5, 6 ಹಾಗೂ 7ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಸ್ತು, ಸ್ವಚ್ಛತೆ, ಸಹಾಯ, ಮಾಹಿತಿ ವಿನಿಮಯ ಸೇರಿದಂತೆ ಅತಿ ಮುಖ್ಯ ಜವಾಬ್ದಾರಿಗಳನ್ನು ಹೊರಲು ಈ ಯುವಜನರ ತಂಡ ಸನ್ನದ್ಧವಾಗಿದೆ. ಈಗಾಗಲೇ ಪ್ರತಿಯೊಬ್ಬ ಸದಸ್ಯರ ಹೆಸರನ್ನೂ ನೋಂದಾಯಿಸಿಕೊಂಡಿದ್ದು, ಎಲ್ಲರಿಗೂ ಮಾಹಿತಿ ರವಾನಿಸಲಾಗಿದೆ.

‌ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ 40 ಕಾಲೇಜುಗಳು ನಗರದಲ್ಲಿ ಇವೆ. ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಎನ್‌ಎಸ್‌ಎಸ್‌ ಘಟಕಗಳನ್ನು ಸೇರಿಸಿ ಒಟ್ಟು 2,000 ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಇದರಲ್ಲಿ 300 ಯುವತಿಯರೂ ಇದ್ದಾರೆ. ಜತೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಎಸ್‌ಎಸ್ಎಸ್‌ ಘಟಕದಿಂದ ಕೂಡ 300 ಯುವಕ/ ಯುವತಿಯರು ಪಾಲ್ಗೊಳ್ಳಲಿದ್ದಾರೆ.

ಈ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಶಿವಶರಣಪ್ಪ ಮಟ್ಟೂರು ಅವರ ನೇತೃತ್ವದಲ್ಲಿ ಗುರುವಾರ (ಜನವರಿ 9) ಎರಡನೇ ಸಭೆ ನಡೆಯಲಿದೆ. ಯಾರ್‍ಯಾರು, ಎಲ್ಲೆಲ್ಲಿ ಭಾಗವಹಿಸಬೇಕು? ಏನೆಲ್ಲ ಜವಾಬ್ದಾರಿ ನಿರ್ವಹಿಸಬೇಕು? ಎಂಬುದೂ ಸೇರಿದಂತೆ ಗುಂಪು ನಿರ್ವಹಣೆ ಹಾಗೂ ವೈಯಕ್ತಿಕ ಪಾಲ್ಗೊಳ್ಳುವಿಕೆ ಹೇಗೆ ಇರಬೇಕು ಎಂಬ ಬಗ್ಗೆಯೂ ರೂಪುರೇಶೆ ಸಿದ್ಧಪಡಿಸಲಾಗುತ್ತಿದೆ.

16 ಸಮಿತಿಗಳಿಗೂ ಸೇವಕರ ಹಂಚಿಕೆ

ಸಮ್ಮೇಳನಕ್ಕಾಗಿ ರಚಿಸಲಾಗಿರುವ ಎಲ್ಲ 16 ಸಮಿತಿಗಳಿಗೂ ಈ ಸ್ವಯಂವಕರನ್ನು ಹಂಚಲಾಗುತ್ತಿದೆ.‌

50 ವಿದ್ಯಾರ್ಥಿಗಳ ಒಂದು ಘಟಕದಂತೆ ಒಟ್ಟು 40 ಘಟಕಗಳನ್ನು ರಚಿಸಲಾಗಿದೆ. ಪ್ರತಿ ಘಟಕಕ್ಕೂ ಒಬ್ಬ ಕಾಲೇಜು ಉಪನ್ಯಾಸಕರನ್ನು ಮೇಲುಸ್ತುವಾರಿ ಆಗಿರುತ್ತಾರೆ. 

ಎಸ್‌ಸಿಸಿನಲ್ಲಿ 50 ಮಂದಿ ಮಾತ್ರ ಇದ್ದು, ಅವರನ್ನು ಶಿಸ್ತು ನಿರ್ವಹಣಾ ಸಮಿತಿಗೆ ನೀಯೋಜಿಸಲು ಯೋಚಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು