ಕಲಬುರ್ಗಿ: ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿರುವ ನಗರ ಪೊಲೀಸರು, ಶುಕ್ರವಾರ ಆರೋಪಿಯನ್ನು ಬಂಧಿಸಿ ಒಂದು ಪಿಸ್ತೂಲ್ ಹಾಗೂ ಕಳವು ಮಾಡಿದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ವಿವೇಕಾನಂದ ಅಲಿಯಾಸ್ ಉಮೇಶ ಮಲ್ಲೆ ಖಾನಾಪುರ (23) ಬಂಧಿತ ಯುವಕ. ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ. ಆರೋಪಿಯಿಂದ ₹ 1.20 ಲಕ್ಷ ಮೌಲ್ಯದ ಪಿಸ್ತೂಲ್, ಎರಡು ಜೀವಂತ ಗುಂಡುಗಳು, ₹ 5.7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಇಲ್ಲಿನ ಶಹಾ ಬಜಾರ್ನಲ್ಲಿರುವ ಮಲ್ಲಿಕಾರ್ಜುನ ಖೇಮಜಿ ಎಂಬುವವರ ಮನೆಯಲ್ಲಿ ಈಚೆಗೆ ಕಳ್ಳತನ ಮಾಡಲಾಗಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಬೆಳಮಗಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ನಗರ ಪೊಲೀಸ್ ಕಮಿಷನರ್ ಸತೀಶಕುಮಾರ, ಡಿಸಿಪಿಗಳಾದ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಗಿರೀಶ ಎಸ್.ಬಿ ಮಾರ್ಗದರ್ಶನಲ್ಲಿ ಚೌಕ್ ಠಾಣೆಯ ಇನ್ಸ್ಪೆಕ್ಟರ್
ಎಸ್.ಆರ್.ನಾಯಕ ಮತ್ತು ಸಿಬ್ಬಂದಿ ಕೇಶುರಾಯ, ಸಿದ್ರಾಮಯ್ಯ, ಅಶೋಕ, ಉಮೇಶ ಅವರು ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.