ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ವತಿಯಿಂದ ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯಲ್ಲಿ ಚಿಂತಕ ಪ್ರೊ.ಆರ್.ಕೆ. ಹುಡಗಿ ಪ್ರತಿಜ್ಞಾವಿಧಿ ಬೋಧಿಸಿದರು
ಪ್ರಜಾವಾಣಿ ಚಿತ್ರ
ಭಾರತೀಯ ಸಂವಿಧಾನದ 51ಎ (ಎಚ್) ಕಲಂನಲ್ಲಿ ಹೇಳಿದಂತೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಸಂವಿಧಾನ ಬದ್ಧ ಕರ್ತವ್ಯವನ್ನು ಹುತಾತ್ಮರೆಲ್ಲರ ಸಾಕ್ಷಿಯಾಗಿ ನಿರ್ವಹಿಸೋಣ
ಪ್ರೊ.ಆರ್.ಕೆ. ಹುಡಗಿ ಚಿಂತಕ
‘ಧರ್ಮ ದೇವರ ವಿರೋಧಿಯಲ್ಲ’
‘ವಿಚಾರವಾದವನ್ನು ಬೆಳೆಸುವಂಥ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವವರ ಬಗ್ಗೆ ದೇವರು ಧರ್ಮದ ವಿರೋಧಿಗಳೆಂದು ಅಪ್ರಚಾರ ಮಾಡಲಾಗುತ್ತಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿಯಾಗಲಿ ದೇಶದ ವೈಜ್ಞಾನಿಕ ಮನೋವೃತ್ತಿಯನ್ನು ಪ್ರಚಾರ ಮಾಡುವಂಥ ಎಲ್ಲ ಸಂಘಟನೆಗಳಾಗಲಿ ಯಾವುದೇ ಧರ್ಮ ದೇವರ ವಿರೋಧಿಯಲ್ಲ. ಆದರೆ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವಂಥ ಅವೈಜ್ಞಾನಿಕ ಆಚರಣೆಗಳ ವಿರೋಧ ಇದೆ’ ಎಂದು ಶಿವಶರಣಪ್ಪ ಮೂಳೆಗಾಂವ ಸ್ಪಷ್ಟಪಡಿಸಿದರು.