ಶುಕ್ರವಾರ, ಮೇ 7, 2021
25 °C

ಕಲಬುರ್ಗಿ ನಗರಕ್ಕೆ ತಂಪೆರೆದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ತುಂತುರು ಮಳೆ ಸುರಿಯಿತು.

ಬೆಳಿಗ್ಗೆ 10ರಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಆದರೆ, ಮಧ್ಯಾಹ್ನ 2ರ ಸುಮಾರಿಗೆ ಮೋಡ ಕವಿದು, 3 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತು. ಇಲ್ಲಿನ ಶಕ್ತಿನಗರ, ಶಾಸ್ತ್ರೀನಗರ, ಮಹಾವೀರ ನಗರ, ವೆಂಕಟೇಶ್ವರ ನಗರ, ಜಿಲ್ಲಾಧಿಕಾರಿ ಕಚೇರಿ, ಗುಲಬರ್ಗಾ ವಿಶ್ವವಿದ್ಯಾಲಯ‍ ಪ್ರದೇಶ, ಹೈಕೋರ್ಟ್‌ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಅಲ್ಲಲ್ಲಿ ತುಂತುರು ಉದುರಿತು. 

ಕಳೆದ ಒಂದು ವಾರದಿಂದ ನಗರದ ಗರಿಷ್ಠ ಉಷ್ಣಾಂಶ 40ರಿಂದ 42 ಡಿಗ್ರಿ ದಾಟಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು