ಕಲಬುರಗಿ: ‘ಸಾಧನೆಯ ಹಾದಿಯಲ್ಲಿ ಪ್ರಶಸ್ತಿಗಳು ಮುಖ್ಯ. ಆದರೆ, ಪ್ರಶಸ್ತಿ–ಪುರಸ್ಕಾರಗಳ ನಿರೀಕ್ಷೆಯಲ್ಲಿ ಸೃಷ್ಟಿಸುವ ಸಾಹಿತ್ಯ, ಮಾಡುವ ಕಲಾ ಸಾಧನೆಯು ಆ ಸಾಹಿತ್ಯ, ಕಲೆಗೆ ಮಾಡುವ ಅವಮಾನ’ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುಲಬರ್ಗಾ ವಿವಿ ಪ್ರಸಾರಾಂಗ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪ್ರಶಸ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸಾಹಿತ್ಯ ಬರೆಯಲು ಹೊರಟರೆ ಅದು ಒಳ್ಳೆಯ ಸೃಷ್ಟಿ ಆಗಲ್ಲ. ಸಾಧನೆ ಗುರುತಿಸಲು ನೀಡುವ ಪ್ರಶಸ್ತಿಗಳು, ಇನ್ನೊಬ್ಬರಿಗೆ ಪ್ರೇರಣೆ, ಸ್ಫೂರ್ತಿ ಆಗಬಲ್ಲವು. ಆದರೆ, ಪ್ರಶಸ್ತಿ ಗುಂಗು ಇಳಿದ ಬಳಿಕ ನಾವು ನಾವಾಗಿಯೇ ಉಳಿಯುತ್ತೇವೆ. ಪ್ರಶಸ್ತಿ ಬಂತು ಎಂದು ಕುಳಿತು ಬಿಟ್ಟರೆ, ಅದಕ್ಕೆ ಏನೂ ಬೆಲೆಯೂ ಇಲ್ಲ, ಸೃಜನಶೀಲ ಸಾಹಿತ್ಯ ಸೃಷ್ಟಿಯೂ ಸಾಧ್ಯವಿಲ್ಲ’ ಎಂದರು.

‘ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಾಹಿತ್ಯ ದಕ್ಷಿಣ ಕರ್ನಾಟಕ ಭಾಗಕ್ಕೆ ಸರಿಯಾಗಿ ತಲುಪುತ್ತಿಲ್ಲ. ಈ ಭಾಗದ ಹಿಂದೂಸ್ತಾನಿ ಸಂಗೀತವನ್ನು ಸಂಭ್ರಮಿಸಿದರೂ, ಸಾಹಿತ್ಯ ವಿಚಾರದಲ್ಲಿ ಹಿನ್ನಡೆ ಕಾಣುತ್ತೇವೆ. ಈ ಭಾಗದ ಸಾಹಿತ್ಯದಲ್ಲಿ ಗುಣಮಟ್ಟದ ಕೊರತೆಯಿಲ್ಲ. ಆದರೆ, ಅದಕ್ಕೊಂದು ಸೇತುವೆ ಇಲ್ಲದಂತಾಗಿದೆ. ಈ ನೆಲದ ಸಾಹಿತ್ಯಕ್ಕಿರುವ ಸ್ಥಳೀಯ ಸೊಗಡು, ಮಣ್ಣಿನ ಘಮದ ಪರಿಚಯ ನನಗಿರಲ್ಲ. ಹೀಗಾಗಿ ಈ ಭಾಗದವರೇ ಅದನ್ನು ಸಮರ್ಪಕವಾಗಿ ಇಂಗ್ಲಿಷ್, ಹಿಂದಿಗೆ ಅನುವಾದ ಮಾಡಿದರೆ, ಅದು ದಕ್ಷಿಣ ಕರ್ನಾಟಕದೊಂದಿಗೆ ರಾಜ್ಯದ ಗಡಿದಾಟಲು ಸಾಧ್ಯ’ ಎಂದರು.

ವಿಮರ್ಶಕ ಎಸ್.ಆರ್.ವಿಜಯಶಂಕರ ಮಾತನಾಡಿ, ‘ಜಗತ್ತಿನ ಎಲ್ಲ ಭಾಷೆ, ಜ್ಞಾನ, ಕಥೆ, ಕಾದಂಬರಿ ಮಾತ್ರವಲ್ಲದೇ ಎಲ್ಲವನ್ನೂ ಒಳಗೊಳ್ಳುವಂಥ ಗುಣ, ಶಕ್ತಿ ಕನ್ನಡಕ್ಕಿದೆ. ಕೇಂದ್ರ ಸರ್ಕಾರ ಹಿಂದಿಯನ್ನು ಮುಖಕ್ಕೆ ರಾಚಿದಂತೆ ಹೇರುತ್ತಿದೆ. ಹಿಂದಿಯನ್ನು ಭಾಷೆಯಾಗಿ ಕಲಿಯುವುದು ಬೇರೆ. ಆದರೆ, ಅದನ್ನು ಒತ್ತಾಯಪೂರ್ವಕ ಹೇರುವುದು ಸಲ್ಲ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗುಲಬರ್ಗಾ ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ‘ರಾಜ್ಯದಲ್ಲಿ 27 ಪ್ರತಿಷ್ಠಾನಗಳು ಸರ್ಕಾರದ ಅನುದಾನದಲ್ಲಿ ನಡೆಯುತ್ತಿವೆ. ವಡ್ಡಾರಾಧನೆ, ಸೂಫಿತತ್ವಗಳು, ತತ್ವಪದಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ದಲಿತ ಚಳವಳಿ ಸೇರಿದಂತೆ ಸಾಕಷ್ಟು ಸಾಹಿತ್ಯ ಪರಂಪರೆ ಇಲ್ಲಿಯೇ ಹುಟ್ಟಿದರೂ, ಈ ಪ್ರದೇಶದಲ್ಲಿ ಒಂದೂ ಪ್ರತಿಷ್ಠಾನ ಇಲ್ಲದಿರುವುದು ನೋವಿನ ಸಂಗತಿ’ ಎಂದು ಬೇಸರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ‘ಮುಂದಿನ ವರ್ಷದಿಂದ ಸಂಘ ಸಂಸ್ಥೆಗೂ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಹಾಗೂ ಭಾಷಾಂತರ ವಿಭಾಗ ಸ್ಥಾಪನೆಗೆ ಕ್ರಮವಹಿಸಲಾಗುವುದು’ ಎಂದರು.

ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಎಸ್.ಕಟ್ಟಿಮನಿ, ವಿದ್ಯಾವಿಷಯಕ ಪರಿಷತ್ ಸದಸ್ಯೆ ಪ್ರೊ.ಸಿ.ಸುಲೋಚನಾ, ಕುಲಸಚಿವರಾದ ಎನ್.ಜಿ.ಕಣ್ಣೂರ, ಪ್ರೊ.ರಮೇಶ ಲಂಡನಕರ್ ವೇದಿಕೆಯಲ್ಲಿದ್ದರು.

‘ಹುದ್ದೆಗಳ ಭರ್ತಿಗೆ ಚಳವಳಿ ಶೀಘ್ರ’

ಮುಖ್ಯ ಅತಿಥಿಯಾಗಿದ್ದ ದಲಿತ ಮುಖಂಡ ಡಿ.ಜಿ. ಸಾಗರ ಮಾತನಾಡಿ ‘ಈ ಭಾಗದ ಇಬ್ಬರು ಮುಖ್ಯಮಂತ್ರಿಗಳಾದರೂ ಗುಲಬರ್ಗಾ ವಿವಿ ಒಂದಿಷ್ಟು ಪ್ರಗತಿ ಕಂಡಿಲ್ಲ. ವಿವಿಯ ಒಂದು ಕಲ್ಲೂ ಬದಲಾಗಲಿಲ್ಲ. ಈಗಲೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿರುವುದು ನೋವಿನ ಸಂಗತಿ. ಈ ಹುದ್ದೆಗಳ ಭರ್ತಿಗೆ ಶೀಘ್ರವೇ ಚಳವಳಿ ರೂಪಿಸಲಾಗುವುದು’ ಎಂದು ಪ್ರಕಟಿಸಿದರು. ‘ಆಂಧ್ರದಲ್ಲಿ ಅಕ್ಕಿ ಲಾಬಿ ಮಹಾರಾಷ್ಟ್ರದಲ್ಲಿ ಸಕ್ಕರೆ ಲಾಬಿ ಇದ್ದಂತೆ ನಮ್ಮ ರಾಜ್ಯದಲ್ಲಿ ಮೊದಲು ಲಿಕ್ಕರ್ ಲಾಬಿ ಇತ್ತು. ಇದೀಗ ಶಿಕ್ಷಣ ಲಾಬಿ ಇದೆ. ಸರ್ಕಾರಿ ಶಿಕ್ಷಣ ಕುಸಿಯುತ್ತಿದ್ದು ಖಾಸಗಿ ಶಿಕ್ಷಣ ಕ್ಷೇತ್ರ ಬೆಳೆಯುತ್ತಿದೆ. ಈ ಭಾಗದ ಜನರು ಬರೀ ಬುದ್ಧಿವಂತರಾದರೆ ಸಾಲದು. ಹೋರಾಟಗಾರರೂ ಆಗಬೇಕು. ಇಲ್ಲದಿದ್ದರೆ ಸೌಲಭ್ಯಗಳು ದಕ್ಕಲ್ಲ’ ಎಂದರು. ‘ವಿವಿಯಲ್ಲಿ ಸಾಹಿತ್ಯದ ಅನುವಾದಕ್ಕೆ ಭಾಷಾಂತರ ವಿಭಾಗ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

26 ಮಂದಿಗೆ ಪ್ರಶಸ್ತಿ ಪ್ರದಾನ

ರಾಜಶೇಖರ ಹಳೆಮನಿ ಬಿ.ಜೆ.ಪಾರ್ವತಿ ಸೋನಾರೆ ಪರ್ವೀನ್ ಸುಲ್ತಾನಾ ಧರ್ಮಣ್ಣ ಎಚ್.ಧನ್ನಿ ರೇವಣಸಿದ್ಧಪ್ಪ ದುಕಾನ ಸುಧೀರ ಎಸ್.ಬಿರಾದಾರ ಪ್ರಭುಲಿಂಗ ನೀಲೂರೆ ಶ್ರೀನಿವಾಸ ಸಿರನೂರಕರ್ ಕರುಣಾ ಜಮದರಖಾನಿ ಪ್ರಕಾಶ ಎಚ್.ಸಂಗಮ ಗೋವಿಂದ ಬೀದರ್ನ ಹಣಮಂತ ಮೇಲಕೇರಿ ಕೊಪ್ಪಳದ ಸಂಗಮೇಶ ಬಾದವಾಡಗಿ ಚಿನ್ನ ಆಶಪ್ಪ ಶಿವಾನಂದ ಶಂಕರ ಖಮರುನ್ನಿಸಾ ಯಾದಗಿರಿಯ ಪ್ರಕಾಶ ಅಂಗಡಿ ಸೂರ್ಯಕಾಂತ ಬಿ.ಪೂಜಾರಿ ಬೆಳಕೋಟಾದ ಕಸ್ತೂರಿಬಾಯಿ ರಾಜಶೇಖರ ಬಡಿಗೇರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಿ.ನಾಗರಾಜ ಅವರಿಗೆ ದಿ.ಮಾಪಮ್ಮ ಹೊಸಮನಿ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಹಾ.ಮ.ನಾಗಾರ್ಜುನ ಅವರಿಗೆ ವಿಜ್ಞಾನ ಪುಸ್ತಕ ರಾಜ್ಯ ಪ್ರಶಸ್ತಿ ಕೊಟ್ಟ ಗೌರವಿಸಲಾಯಿತು. ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆ ಗೆದ್ದ ಪಿ.ನಂದಕುಮಾರ ಅವರಿಗೆ ಚಿನ್ನದ ಪದಕ ಶಶಿಕುಮಾರ ಅವರಿಗೆ ಬೆಳ್ಳಿ ಪದಕ ಶುಲಾಬಾಯಿ ಹಿತವಂತ ಹಾಗೂ ರಜನಿಕಾಂತ ವಿ.ಬರೂಡೆ ಅವರಿಗೆ ಕಂಚಿನ ಪದಕ ವಿತರಿಸಲಾಯಿತು. ಈ ಎಲ್ಲ ಪ್ರಶಸ್ತಿಗಳು ಪ್ರಶಸ್ತಿ ಸನ್ಮಾನದೊಂದಿಗೆ ಗೌರವಧನವನ್ನೂ ಒಳಗೊಂಡಿವೆ.

ರಾಜ್ಯದ ಬಹುತ್ವ ಹಾಗೂ ಸೌಹಾರ್ದ ಪರಂಪರೆಗೆ ಧಕ್ಕೆ ಬಂದರೆ ಅದರ ವಿರುದ್ಧ ಬರಹಗಳು ಮಾತು ವ್ಯಕ್ತಿತ್ವದ ಮೂಲಕ ಧ್ವನಿ ಎತ್ತುವ ಕೆಲಸ ಮಾಡುವೆ
ಪಿ.ನಂದಕುಮಾರ, ದಿ.ಜಯತೀರ್ಥ ರಾಜಪುರೋಹಿತ ದತ್ತಿ ಚಿನ್ನದ ಪದಕ ವಿಜೇತ ಕಥೆಗಾರ

ಕಲ್ಯಾಣ ಕರ್ನಾಟಕದ ಭಾಷೆ ಇಡೀ ಕರ್ನಾಟಕಕ್ಕೆ ಪರಿಚಯಿಸುವುದಕ್ಕಾಗಿಯೇ ಈ ನೆಲದ ಸೊಗಡಿನ ಭಾಷೆಯಲ್ಲೇ ನಾನು ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ.
ಪಾರ್ವತಿ ಸೋನಾರೆ, ಪ್ರಶಸ್ತಿ ಪುರಸ್ಕೃತರು

ಕನ್ನಡಕ್ಕಾಗಿ ಕಲ್ಯಾಣದ ಜೀವನಾಡಿಯಾಗಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೂ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮವಹಿಸಬೇಕು
ಸಂಗಮೇಶ ಬಾದವಾಡಗಿ, ಪ್ರಶಸ್ತಿ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.