ಕಲಬುರಗಿ: ಎಲ್ ಅಂಡ್ ಟಿ ಕಂಪನಿಯವರು ಅಗೆದಿರುವ ರಸ್ತೆಗಳನ್ನು ದುರಸ್ತಿ ಮಾಡಿ ಜನರ ಪ್ರಾಣ ಹಾನಿಯಾಗುವುದನ್ನು ತಪ್ಪಿಸಿ, ನಗರದ ನಾಗರಿಕರ ಉಪಯೋಗಕ್ಕೆಂದು ಇರುವ ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ, ನಗರದ ಹೃದಯ ಭಾಗದಲ್ಲಿರುವ ಪಬ್ಲಿಕ್ ಗಾರ್ಡನ್ನಲ್ಲಿ 24 ಗಂಟೆಯೂ ತೆರೆದಿರುವ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ವಾರ್ಡ್ನಲ್ಲಿ ಸಂಪರ್ಕ ಕಚೇರಿ ಆರಂಭಿಸಬೇಕು. ಇದು ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಕೇಳಿ ಬಂದ ಬೇಡಿಕೆಗಳು.

ಪಾಲಿಕೆಯು ಗುರುವಾರ ಆಯೋಜಿಸಿದ್ದ ಬಜೆಟ್ ಪೂರ್ವ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಹಲವು ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಮಹಾನಗರ ಪಾಲಿಕೆಯ ಮೇಯರ್ ವರ್ಷಾ ಜಾನೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ಕಮಕನೂರ, ಆಯುಕ್ತ ಅವಿನಾಶ್ ಶಿಂಧೆ ಅವರ ಎದುರು ಮಂಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿ, ‘ಪ್ರತಿ ವಾರ್ಡ್ಗಳಲ್ಲಿ ಜನರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಪಾಲಿಕೆ ಸದಸ್ಯರ ಸಂಪರ್ಕ ಕಚೇರಿಯನ್ನು ಆರಂಭಿಸಬೇಕು. ವಿದ್ಯಾನಗರ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಬಿ.ಎಂ. ರಾವೂರ ಮಾತನಾಡಿ, ‘ಕಲಬುರಗಿ ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ವಿಶ್ವವಿದ್ಯಾಲಯಗಳು, ಮೆಡಿಕಲ್, ಫಾರ್ಮಸಿ, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ವಿದ್ಯೆಗಾಗಿ ಬರುತ್ತಿರುವ ವಿದ್ಯಾರ್ಥಿನಿಯರು, ಖರೀದಿಗಾಗಿ ಗ್ರಾಮಗಳಿಂದ ಬರುವ ಮಹಿಳೆಯರು ನಗರದಲ್ಲಿ ಶೌಚಾಲಯಕ್ಕಾಗಿ ಪರದಾಡಬೇಕಿದೆ. ಆದ್ದರಿಂದ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಬಜೆಟ್ನ ಗಾತ್ರ ಎಷ್ಟು ಎಂಬ ಬಗ್ಗೆ ತಿಂಗಳ ಮುಂಚೆಯೇ ನಾಗರಿಕರಿಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ನಿವೃತ್ತ ಸರ್ಕಾರಿ ಅಧಿಕಾರಿ ನಾಗೇಂದ್ರಪ್ಪ ಮಾತನಾಡಿ, ‘2020ರಲ್ಲಿ ನಾನು ಕೊಟ್ಟಿದ್ದ ಮನವಿಗಳು ಇನ್ನೂ ಈಡೇರಿಲ್ಲ. ಸಂತ್ರಾಸವಾಡಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಉದ್ಯಾನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಬೇಕು. ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದರು.

ಆರ್ಟಿಐ ಕಾರ್ಯಕರ್ತ ಸಿದ್ದು ಹಿರೇಮಠ ಮಾತನಾಡಿ, ‘ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ವಲಯಗಳ ಪೈಕಿ ವಲಯ–1ರಿಂದ ಪ್ರತಿ ವರ್ಷ ₹ 20 ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಉಳಿದ ಎರಡು ವಲಯಗಳಿಂದ ನಿರೀಕ್ಷೆಯಷ್ಟು ತೆರಿಗೆ ಸಂಗ್ರಹವಾಗುವುದಿಲ್ಲ. ಈ ಬಗ್ಗೆ ಎಲ್ಲ ಕಟ್ಟಡಗಳ ಸಮೀಕ್ಷೆ ನಡೆಸಿ ತೆರಿಗೆ ವಸೂಲಿ ಮಾಡಲು ತನಿಖಾ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.

ಗುರುಶಾಂತ ಟೆಂಗಳಿ, ಬಸವರಾಜ ಬಿರಾದಾರ ಸೇರಿದಂತೆ ಹಲವರು ಪಾಲಿಕೆಯ ಬಜೆಟ್ನಲ್ಲಿ ಏನಿರಬೇಕು ಎಂಬ ಬೇಡಿಕೆಗಳನ್ನು ಇಟ್ಟರು.

ಕಲಬುರಗಿ ನಗರದ ಏಳು ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಪೂರ್ಣಗೊಂಡಿದೆ. ಬಹಮನಿ ಕೋಟೆಯ ಪಕ್ಕದ ಕಂದಕಕ್ಕೆ ಶುದ್ಧೀಕರಿಸಿದ ನೀರನ್ನು ಬಿಡಲಾಗುವುದು. ರಾಮಮಂದಿರ ಬಳಿ ಬಸ್ ತಂಗುದಾಣಕ್ಕೆ ₹ 14 ಲಕ್ಷ ಮೀಸಲಿಡಲಾಗಿದೆ.
ಅವಿನಾಶ್ ಶಿಂಧೆ ಮಹಾನಗರ ಪಾಲಿಕೆ ಆಯುಕ್ತ

ಸಭೆಯ ಮಧ್ಯೆಯೇ ನಿರ್ಗಮಿಸಿದ ಮೇಯರ್ ಬಜೆಟ್ ಪೂರ್ವ ನಾಗರಿಕರ ಅಹವಾಲು ಆಲಿಸುವ ಸಭೆಗೆ ತಡವಾಗಿ ಬಂದ ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ ಅವರು ಸುಮಾರು 40 ನಿಮಿಷ ಮಾತ್ರ ಇದ್ದು ಅಲ್ಲಿಂದ ನಿರ್ಗಮಿಸಿದ್ದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಮೇಯರ್ ಅವರೇ ಖುದ್ದಾಗಿ ಹಾಜರಿದ್ದು ನಗರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆಯಬೇಕಿತ್ತು. ಆದರೆ ಕಾಟಾಚಾರಕ್ಕೆಂಬಂತೆ ಬಂದು ಸಭೆ ಮಧ್ಯೆಯೇ ಎದ್ದು ಹೋಗುವುದಾದರೆ ಏನು ಪ್ರಯೋಜನ ಎಂದು ಬೇಡಿಕೆ ಮಂಡಿಸಲು ಬಂದಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ ಬಳಿ ಬೇಸರ ಹೊರಹಾಕಿದರು. ಪಾಲಿಕೆ ಸದಸ್ಯೆ ರೇಣುಕಾ ಹೋಳ್ಕರ್ ಸಭೆ ಮಧ್ಯೆಯೇ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.