ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 6,483 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಚಿರಂಜೀವಿ ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್ ಪಡೆಯಲು ಸಿಇಟಿ
Published 11 ಫೆಬ್ರುವರಿ 2024, 16:01 IST
Last Updated 11 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ಪ್ರವೇಶ ಬಯಸುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ವಿವಿಧ ಜಿಲ್ಲೆಗಳ 6,483 ಮಕ್ಕಳು ಹಾಜರಾಗಿದ್ದರು.

ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ ತನಕ ನಡೆದ ಪರೀಕ್ಷೆಯಲ್ಲಿ ಬೀದರ್‌, ಭಾಲ್ಕಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಸಾವಿರಾರು ಮಕ್ಕಳು ಪರೀಕ್ಷೆ ಬರೆದರು.

ಈ ಪರೀಕ್ಷೆಯಲಿ ಗರಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾಭಂಡಾರಿ ಶರಣಬಸವಪ್ಪ ಅಪ್ಪ ಅವರು ಮಹಾದಾಸೋಹ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹೆಸರಲ್ಲಿ ಸ್ಕಾಲರ್‌ಶಿಪ್ ರೂಪದಲ್ಲಿ ₹2.5 ಕೋಟಿ ನೀಡುತ್ತಿದ್ದಾರೆ.

ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್. ಪಿ.ಯು ಕಾಲೇಜು, ಮುಕ್ತಾಂಬಿಕಾ ಪಿ.ಯು ಕಾಲೇಜು, ದೊಡ್ಡಪ್ಪ ಅಪ್ಪ ಪಿ.ಯು ಕಾಲೇಜು, ಅಪ್ಪಾ ಪಬ್ಲಿಕ್ ಶಾಲೆ, ಎಸ್.ಬಿ.ಆರ್ ಪಬ್ಲಿಕ್ ಶಾಲೆ, ಅಪ್ಪಾ ಎಂಜಿನಿಯರಿಂಗ್ ಕಾಲೇಜಿನ ಸಿಎಸ್ ವಿಭಾಗ, ಮೆಕ್ಯಾನಿಕಲ್ ವಿಭಾಗ, ಕಾಲೇಜಿನ ಫಸ್ಟ್-ಇಯರ್ ಬ್ಲಾಕ್ ಹೀಗೆ ಸಂಸ್ಥೆಯ 9 ಶಾಲಾ–ಕಾಲೇಜುಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

10ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಆಧಾರವಾಗಿಟ್ಟುಕೊಂಡು 100 ಅಂಕಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿತ್ತು. 16 ಆವೃತ್ತಿಗಳಿಂದ ಕೂಡಿದ ಪ್ರಶ್ನೆ ಪತ್ರಿಕೆಯು ಋಣಾತ್ಮಕ ಅಂಕಗಳನ್ನೂ ಒಳಗೊಂಡಿತ್ತು.

ವಿದ್ಯಾರ್ಥಿಗಳಿಗೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನ ಮಾಡಲು ಕ್ಯಾಂಪಸ್‌ನಲ್ಲಿ ಹೆಲ್ಪ್‌ ಡೆಸ್ಕ್‌ ವ್ಯವಸ್ಥೆ ಮಾಡಲಾಗಿತ್ತು. ಮುಂಚಿತವಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಸದೇ ಬಂದವರಿಗೆ ಸ್ಥಳದಲ್ಲೇ ನೋಂದಣಿಸಿಕೊಂಡು, ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯ ಎನ್.ಎಸ್.ದೇವರಕಲ್ ಮಾರ್ಗದರ್ಶನದಲ್ಲಿ ಕಾಲೇಜಿನ ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪರೀಕ್ಷೆ ಸುಗಮವಾಗಿ ನಡೆಯುವಂತೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT