ಕಲಬುರಗಿ: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶುರುವಾಗಿ ನಾಲ್ಕು ದಿನಗಳು ಕಳೆದರೂ ಸಮೀಕ್ಷಕರು ಎದುರಿಸುತ್ತಿರುವ ಆ್ಯಪ್ನ ತಾಂತ್ರಿಕ ತೊಂದರೆಗಳು ನೀಗಿಲ್ಲ. 60 ಪ್ರಶ್ನೆಗಳೊಂದಿಗೆ ಸಮೀಕ್ಷಕರು ಪ್ರವೇಶಿಸುವ ಪ್ರತಿ ಮನೆಯಲ್ಲೂ ತಾಂತ್ರಿಕ ಅಡ್ಡಿಗಳು ಎದುರಾಗುತ್ತಿವೆ.

‘ಮನೆಗೆ ಸಮೀಕ್ಷೆಗೆ ಹೋದರೆ, ನಾಲ್ಕ್–ನಾಲ್ಕು ಯುಎಚ್ಐಡಿಗಳು ಸಿಗುತ್ತಿವೆ. ಯುಎಚ್ಐಡಿಗೂ ನಮ್ಮ ಲೊಕೇಷನ್ಗೂ ತಾಳೆಯೇ ಆಗುತ್ತಿಲ್ಲ. ಆ್ಯಪ್ ಕೂಡ ಓಪನ್ ಆಗುತ್ತಿಲ್ಲ. ಅದು ಓಪನ್ ಆದರೂ, ನಾವು ಸಮೀಕ್ಷೆ ಮಾಡಬೇಕಾದ ಯುಎಚ್ಐಡಿ ತೋರಿಸುತ್ತಿಲ್ಲ. ಮೂರು ದಿನಗಳಿಂದ ಪ್ರಯತ್ನಿಸಿದರೂ ಒಂದೇ ಒಂದೂ ಮನೆಯ ಸಮೀಕ್ಷೆ ಮುಗಿದಿಲ್ಲ’ ಎಂದು ಸಮೀಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

‘ಸಮೀಕ್ಷೆಯಲ್ಲಿ ಒಬ್ಬೊಬ್ಬರಿಗೆ ಮೊದಲ ಪ್ರಶ್ನೆಗೆ ಸಮಸ್ಯೆ ಕಾಡಿದರೆ, ಮತ್ತೊಬ್ಬರಿಗೆ ಚಿತ್ರ ಅಪ್ಲೋಡ್ಗೆ ಸಮಸ್ಯೆಯಾಗುತ್ತಿದೆ. ಮಗದೊಬ್ಬರಿಗೆ ಕೊನೆಯ ಹಂತದಲ್ಲಿ ಸಬ್ಮಿಷನ್ಗೆ ತೊಂದರೆ ಆಗುತ್ತಿದೆ. ಒಬ್ಬರು ನಾಲ್ಕೈದು ಸಮೀಕ್ಷೆ ಮಾಡಿದರೂ, ಆ್ಯಪ್ನಲ್ಲಿ ಶೂನ್ಯ ಎಂದು ತೋರಿಸುತ್ತಿದೆ. ಹಾಗಾದರೆ ಅವರು ಮಾಡಿದ್ದ ಎಲ್ಲ ಪ್ರಯತ್ನ ವ್ಯರ್ಥವೇ? ಇಂಥ ಆ್ಯಪ್ ಬದಲಿಗೆ ಪೇಪರ್–ಪೆನ್ನು ಕೊಟ್ಟಿದ್ದರೆ ಹತ್ತಾರು ಮನೆಗಳ ಮಾಹಿತಿ ಬರೆದುಕೊಂಡಾದರೂ ಬರ್ತಿದ್ದೆ’ ಎಂದು ಮಹಿಳಾ ಸಮೀಕ್ಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ್ಯಪ್ ಸತತ ಪರಿಷ್ಕರಣೆ

‘ಸಮೀಕ್ಷೆಗೆ ಬಳಸುತ್ತಿರುವ ಆ್ಯಪ್ ಅನ್ನು ತಾಂತ್ರಿಕ ತಂಡ ಬಹುತೇಕ ನಿತ್ಯವೂ ಪರಿಷ್ಕರಿಸುತ್ತಿದೆ. ಸೆ.22ರಂದು ಸಮೀಕ್ಷೆ ಆರಂಭಿಸಿದಾಗ ‘ಕೆಎಸ್ಸಿಬಿಸಿ ವಿ–0.3.2’ ಆ್ಯಪ್ ನೀಡಲಾಗಿತ್ತು. ಕಳೆದ ನಾಲ್ಕು ದಿನಗಳಲ್ಲಿ ಸತತ ಮೂರು ಬಾರಿ ಪರಿಷ್ಕರಿಸಿ ಸೆ.25ರಂದು ‘ಕೆಎಸ್ಸಿಬಿಸಿ ವಿ–0.3.4’ ಆ್ಯಪ್ ನೀಡಲಾಗಿದೆ. ಆದರೂ ಸುಲಲಿತವಾಗಿ ಸಮೀಕ್ಷೆ ಸಾಧ್ಯವಾಗುತ್ತಿಲ್ಲ’ ಎಂಬುದು ಸಮೀಕ್ಷಕರ ಆರೋಪ.

ಆದರೆ, ಸಮೀಕ್ಷೆಯ ಆ್ಯಪ್ನಲ್ಲಿ ತೊಂದರೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಗುರುವಾರವೂ ರಾಜ್ಯಮಟ್ಟದ ತಾಂತ್ರಿಕ ತಂಡದಿಂದ ಆನ್ಲೈನ್ ಮೂಲಕ ಆ್ಯಪ್ಗಳ ಅಪ್ಡೇಟ್ಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಯಾವ ಎರರ್ ಬಂದರೆ ಹೇಗೆ ಪರಿಹರಿಸಿಕೊಳ್ಳಬೇಕು. ತಾಂತ್ರಿಕ ಅಡಚಣೆ ಹೇಗೆ ಮೀರಬೇಕು. ಸೆಟಿಂಗ್ಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು 50 ಬಗೆಯ ಸಿದ್ಧ ಮಾದರಿಯ ಪ್ರಶ್ನೆಗಳಿಗೆ ಸ್ಕ್ರೀನ್ಶಾಟ್ ಜೊತೆಗೆ ವಿಡಿಯೊದಲ್ಲಿ ವಿವರಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ವೇಗ ಪಡೆದ ಸಮೀಕ್ಷೆ...’

‘ಜಿಲ್ಲೆಯಲ್ಲಿ ಸಮೀಕ್ಷೆ ಗುರುವಾರದಿಂದ ವೇಗ ಪಡೆದಿದೆ. ಗುರುವಾರ ಒಂದೇ ದಿನ 6 ಸಾವಿರದಷ್ಟು ಮನೆಗಳ ಸಮೀಕ್ಷೆ ಮಾಡಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 15 ಸಾವಿರದಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷಕಕರಿಗೆ ತಾಂತ್ರಿಕ ಅಧಿಕಾರಿಗಳ ಸಲಹೆ

*ಮೊಬೈಲ್ ಆ್ಯಂಡ್ರಾಯ್ಡ್ ವರ್ಷನ್ 8.1 ಅಥವಾ ಅದಕ್ಕಿಂತಲೂ ಮೇಲ್ಪಟ್ಟದ್ದು ಇರಬೇಕು *ಸಮೀಕ್ಷೆಯ ಹೊಸ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವ ಮುನ್ನ ಮೊಬೈಲ್ನಲ್ಲಿ ಈಗಾಗಲೇ ಇನ್ಸ್ಟಾಲ್ ಮಾಡಲಾದ ಕೆಎಸ್ಸಿಬಿಸಿ ಸರ್ವೆ ಆ್ಯಪ್ ಅನ್ನು ಅನ್ಇನ್ಸ್ಟಾಲ್ ಮಾಡಬೇಕು. ಬಳಿಕ ಮೊಬೈಲ್ ಫೈಲ್ ಮ್ಯಾನೇಜರ್/ ಮೈ ಫೈಲ್ಸ್ ಫೋಲ್ಡರ್ನಲ್ಲಿರುವ ಎಪಿಕೆ ಫೈಲ್ ಡಿಲಿಟ್ ಮಾಡಬೇಕು. *ನಂತರ ಕೆಎಸ್ಸಿಬಿಸಿ ಸರ್ವೆ ಹೊಸ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆ್ಯಪ್ ಇನ್ಫೋದಲ್ಲಿ ಕ್ಯಾಮೆರಾ ಮತ್ತು ಲೊಕೇಷನ್ ಪರ್ಮಿಷನ್ ಎನೇಬಲ್ ಮಾಡಬೇಕು. *ಆಧಾರ್ ಎಫ್ಆರ್ಸಿ ಬಳಸಿ ಇ–ಕೆವೈಸಿ ಮಾಡಲು ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ ‘ಆಧಾರ್ ಫೇಸ್ ಆರ್ಡಿ ಆ್ಯಪ್’ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ಸಮೀಕ್ಷೆಗೆ ಸಂಬಂಧಿತ ವಾಟ್ಸ್ಆ್ಯಪ್ ಹಾಕಲಾದ ‘ಸಿಇಜಿ ಇ–ಕೆವೈಸಿ ಆ್ಯಪ್’ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕು. *ನಾವಿಗೇಷನ್ ಆ್ಯಪ್ ಅಳವಡಿಸಿಕೊಳ್ಳಲು ವಾಟ್ಸ್ಆ್ಯಪ್ನಲ್ಲಿ ಹಂಚಿಕೊಳ್ಳಲಾದ PruthaV1Prod.apk ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. *ಸಹಜವಾಗಿಯೇ ಮೊಬೈಲ್ ಸೆಟಿಂಗ್ನಲ್ಲಿ ಹೋಗಿ ಡಿಸ್ಲೇ ಅಂಡ್ ಫಾಂಟ್ ಸೆಟಿಂಗ್ಗೆ ಹೋಗಿ ಫಾಂಟ್ ಹಾಗೂ ಡಿಸ್ಲೇ ಗಾತ್ರ ಸ್ಮಾಲರ್ ಸೆಟ್ ಮಾಡಬೇಕು. *ಮೊಬೈಲ್ನಲ್ಲಿರುವ ಅನಗತ್ಯ ಚಿತ್ರಗಳು ವಿಡಿಯೊಗಳು ಜಂಕ್ ಫೈಲ್ಗಳು ಡಿಲಿಟ್ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.