ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾಲೆಸ್ಟೀನ್‌ ಧ್ವಜ ಹಿಡಿಯುವುದರಲ್ಲಿ ತಪ್ಪೇನಿಲ್ಲ: ಜಮೀರ್‌ ಅಹಮದ್

Published : 19 ಸೆಪ್ಟೆಂಬರ್ 2024, 15:51 IST
Last Updated : 19 ಸೆಪ್ಟೆಂಬರ್ 2024, 15:51 IST
ಫಾಲೋ ಮಾಡಿ
Comments

ಕಲಬುರಗಿ: ‘ಕೇಂದ್ರ ಸರ್ಕಾರವೇ ಪ್ಯಾಲೆಸ್ಟೀನ್‌ಗೆ ಬೆಂಬಲ ಘೋಷಿಸಿದೆ. ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದ್ದರಿಂದ ಧ್ವಜ (ಪ್ಯಾಲೆಸ್ಟೀನ್) ಹಿಡಿದುಕೊಂಡಿದ್ದಾರೆ. ಬೇರೆ ದೇಶಕ್ಕೆ ಜೈಕಾರ ಹಾಕಿದರೆ ತಪ್ಪು. ಅವರದ್ದೇ (ಕೇಂದ್ರ ಸರ್ಕಾರ) ಬೆಂಬಲ ಇದ್ದಾಗ ಧ್ವಜ ಹಿಡಿಯುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಚಿಕ್ಕಮಗಳೂರಿನಲ್ಲಿ ಯುವಕರು ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಡಿದ ಬಗ್ಗೆ ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬೇರೆ ಯಾವುದಾದರೂ ದೇಶಕ್ಕೆ ಜೈಕಾರ ಹಾಕಿದರೆ ದೇಶದ್ರೋಹ ಆಗುತ್ತದೆ. ಅಂತಹ ಘೋಷಣೆ ಕೂಗಿದವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಕೇಂದ್ರ ಸರ್ಕಾರ ಪ್ಯಾಲೆಸ್ಟೀನ್‌ಗೆ ಬೆಂಬಲಿಸದಿದ್ದರೆ ಯಾರು ಧ್ವಜ ಹಿಡಿದುಕೊಳ್ಳುತ್ತಿದ್ದರು? ಬೆಂಬಲ ಇದೆ ಎಂಬ ಕಾರಣಕ್ಕೆ ತಾನೇ ಅವರೂ ಧ್ವಜ ಹಿಡಿದಿದ್ದು’ ಎಂದು ಸಮರ್ಥಿಸಿಕೊಂಡರು.

‘ಯಾರೋ ಒಂದು ಧ್ವಜ ಹಿಡಿದಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯವರು ದೊಡ್ಡ ವಿವಾದ ಮಾಡುತ್ತಿದ್ದಾರೆ’ ಎಂದರು.

‘ಇಬ್ಬರು ಕೇರಳಿಗರು 50 ವರ್ಷಗಳಿಂದ ನಾಗಮಂಗಲದಲ್ಲೇ ವಾಸವಾಗಿದ್ದಾರೆ. ಬಿಪಿಎಲ್‌, ಮತದಾನದ ಗುರುತಿನ ಚೀಟಿ ಸಹ ಹೊಂದಿದ್ದಾರೆ. ಈಗ ಅವರು ಸ್ಥಳೀಯರಾಗಿ ಕನ್ನಡಿಗರೂ ಆಗಿದ್ದಾರೆ. ಬೇರೆ ಕೆಲಸ ಇಲ್ಲದೆ ಬಿಜೆಪಿಯವರು ನಾಗಮಂಗಲ ಪ್ರಕರಣದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT