ಜೇವರ್ಗಿ: ತಾಲ್ಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದಿಂದ 2500 ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಉತ್ತರಾಖಂಡ್ ರಾಜ್ಯದ ಕೇದಾರನಾಥನ ದರ್ಶನ ಪಡೆದು ಹಿರಿಯರು ಪಾದಯಾತ್ರೆ ಸಮಾಪ್ತಿಗೊಳಿಸಿದ್ದಾರೆ.

ತಾಲ್ಲೂಕಿನ ಹಿಪ್ಪರಗಾ ಎಸ್. ಎನ್ ಗ್ರಾಮದ ನಿವಾಸಿಗಳಾದ ಮಡಿವಾಳಪ್ಪಗೌಡ ಪಾಟೀಲ, ಮಲ್ಲಣ್ಣ ನಾಗನೂರ, ಕಲ್ಯಾಣಿ ಕುರನಳ್ಳಿ, ಶರಣು ಹೊಸಮನಿ, ಮಹಾದೇವ ಪೂಜಾರಿ ಅವರು ಕಳೆದ ಮಾರ್ಚ್ 3ರಂದು ಪಾದಯಾತ್ರೆ ಮೂಲಕ ಕೇದಾರನಾಥಗೆ ಪ್ರಯಾಣ ಬೆಳೆಸಿದ್ದರು.

ಯಡ್ರಾಮಿ ತಾಲ್ಲೂಕಿನ ವಸ್ತಾರಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭಿಸಿದ ಅವರು, ಹಿಪ್ಪರಗಾ, ಜೇರಟಗಿ, ಅಫಜಲಪುರ, ದುಧನಿ, ಅಕ್ಕಲಕೋಟ್, ಸೋಲಾಪುರ, ಬೀಡ್ ಮಾರ್ಗದಿಂದ ಔರಂಗಾಬಾದ್ನಿಂದ ತೃಷೇಶ್ವರ, ಮಧ್ಯಪ್ರದೇಶದ ಓಂಕಾರೇಶ್ವರ ದರ್ಶನ ಪಡೆದು, ಉಜ್ಜಯಿನಿ ಮಹಾ ಕಾಳೇಶ್ವರನ ದರ್ಶನ ಪಡೆದಿದ್ದಾರೆ.

‘ಮಧ್ಯಪ್ರದೇಶದ ಕಾಲ ಭೈರವನ ದರ್ಶನ ಪಡೆದು, ಉತ್ತರಪ್ರದೇಶದ ಮಥುರಾ ಶ್ರೀಕೃಷ್ಣನ ದರ್ಶನ ಪಡೆದು ದೆಹಲಿಯಿಂದ ಹರಿದ್ವಾರ, ಹೃಷಿಕೇಶ ತಲುಪಿ ಕೇದಾರನಾಥ ದರ್ಶನ ಪಡೆದಿದ್ದಾರೆ. ಕೇದಾರನಾಥ ದರ್ಶನ ಬಳಿಕ ಇದೀಗ ನಾವು ಬದರಿನಾಥ್ ದರ್ಶನ ಮಾಡಲಿದ್ದೇವೆ. ತದ ನಂತರ ಮರಳಿ ಕಲಬುರಗಿಗೆ ವಾಪಸ್ ಆಗಲಿದ್ದೇವೆ ಎಂದು ಮಡಿವಾಳಪ್ಪಗೌಡ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.