ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಗಮನ ಸೆಳೆದ ಸೈಕ್ಲೋಥಾನ್

Last Updated 27 ಸೆಪ್ಟೆಂಬರ್ 2020, 7:57 IST
ಅಕ್ಷರ ಗಾತ್ರ

ಕಲಬುರ್ಗಿ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರವಿವಾರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ‌ ನಗರದ ಐವಾನ್-ಇ-ಶಾಹಿ ಅತಿಥಿಗೃಹದಿಂದ ಕಲಬುರ್ಗಿ ಕೋಟೆವರೆಗೆ ಬೆಳಿಗ್ಗೆ ಆಯೋಜಿಸಿದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ್ ಎಸ್. ತಳಕೇರಿ ಅವರು ಚಾಲನೆ ನೀಡಿದರು.

ಐವಾನ್-ಎ-ಶಾಹಿಯಿಂದ ಕಲಬುರ್ಗಿ ಕೋಟೆವರೆಗೆ ನಡೆದ ಸೈಕ್ಲೋಥಾನ್‌ನಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳು, ಮಹಿಳೆಯರು, ವಯಸ್ಕರು, ಯುವಕ-ಯುವತಿಯರು ಸೇರಿದಂತೆ ಸುಮಾರು 100 ಜನ ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.

ತದನಂತರ ಕೋಟೆಯ ಅವರಣದಲ್ಲಿ ಸ್ವಚ್ಛತಾ ಪಕ್ವಾಡ ಅಭಿಯಾನ ಯೋಜನೆಯಡಿ ಕೋಟೆಯ ಮಸೀದಿ ಅವರಣ ಸ್ವಚ್ಛತಾ ಕಾರ್ಯಕ್ರಮ ಸಹ ನಡೆಯಿತು. ಸುಮಾರು 150 ಜನ ಶ್ರಮದಾನದಲ್ಲಿ‌ ಪಾಲ್ಗೊಂಡರು.

ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಇಂಟ್ಯಾಕ್ ಸಂಸ್ಥೆಯ ಡಾ.ಶಂಭುಲಿಂಗ ವಾಣಿ, ಕಲಬುರ್ಗಿ ಸೈಕ್ಲಿಂಗ್ ಕ್ಲಬ್ ಸದಸ್ಯರಾದ ವೈಭವ ರೆಡ್ಡಿ, ಡಾ.ಶರಣು ಹತ್ತಿ, ಶಂಭುಲಿಂಗ, ಜೆಸ್ಟ್ ಕ್ಲಬ್ ಮಾಲೀಕ ನಿಜು ಉಪ್ಪಿನ್, ಕಲಬುರಗಿ ಕೋಟೆಯ ಮುತಾವಲಿ ರಿಜ್ವಾನ್ ಉರ್ ರೆಹಮಾನ್ ಸಿದ್ಧಿಕ್ಕಿ, ಪ್ರವಾಸಿ ಸಮಾಲೋಚಕ ಸಂದೀಪ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT