ಮಡಿಕೇರಿ: ಜಯ ಜಯ ಹನುಮ ಜಯ ಹನುಮ, ಬಾರೋ ಪಾಂಡುರಂಗ ನೀನೆ ಗತಿ, ದುರ್ಗೆ ದುರ್ಗೆ ಜಯ ಜಯ ದುರ್ಗೆ... ಹೀಗೆ ಹಲವು ಭಜನೆಗಳು ಭಾನುವಾರ ಇಡೀ ದಿನ ಇಲ್ಲಿನ ಆಂಜನೇಯಸ್ವಾಮಿ ದೇಗುಲದಲ್ಲಿ ಕೇಳಿ ಬಂತು. ಮುಂಜಾನೆಯ ಸೂರ್ಯೋದಯದಿಂದ ಆರಂಭವಾದ ಭಜನೆಗಳು ಸೂರ್ಯಾಸ್ತದವರೆಗೂ ನಡೆದವು. ಆನಂತರವೂ ಕತ್ತಲಾದ ಮೇಲೂ ಭಜನೆಗಳ ನಿರಂತರ ಗಾಯನವು ಸೂಜಿಗಲ್ಲಿನಂತೆ ಸೆಳೆಯಿತು.

ಕೆಲವು ಭಜನಾ ತಂಡಗಳ ಸದಸ್ಯರು ಭಜನಾ ಪದಗಳನ್ನು ಹಾಡುತ್ತಲೇ ನರ್ತಿಸಿ ಭಕ್ತಿಭಾವ ಮೆರೆದರು.
ಇಲ್ಲಿನ ಶ್ರೀರಾಮಾಂಜನೇಯ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವದ ಇಲ್ಲಿ ಹಮ್ಮಿಕೊಂಡಿದ್ದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಒಟ್ಟು 18 ಭಜನಾ ತಂಡಗಳು ಭಾಗಿಯಾಗಿದ್ದವು. 3 ತಂಡಗಳಿಂದ ಕುಣಿತ ಭಜನೆಯೂ ನಡೆಯಿತು. ಸುಮಾರು 400ಕ್ಕೂ ಅಧಿಕ ಮಂದಿ ಭಜನೆ ಹಾಡಿದ್ದು, ಇದಕ್ಕೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಮಾರು ಸಾವಿರ ಮಂದಿ ಕಿವಿಯಾಗಿದ್ದು ವಿಶೇಷ ಎನಿಸಿತು.

ನಗರ ಸಭೆಯ ಅಧ್ಯಕ್ಷೆ ಕಲಾವತಿ ಅವರು ಭದ್ರದೀಪ ಜ್ವಲನ ಮಾಡಿ ಅಪರೂಪದ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಶ್ರೀರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಮಡಿಕೇರಿಯಶ್ರೀ ಸತ್ಯಸಾಯಿ ಭಜನಾ ಸಮಿತಿ, ಭಕ್ತಿಲಹರಿ ತಂಡ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಶ್ರೀಶೖತಿ ಲಯ ಭಜನಾ ಮಂಡಳಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಇಸ್ಕಾನ್ ತಂಡ, ಶ್ರೀ ಕೋದಂಡ ರಾಮ ಭಜನಾ ಮಂಡಳಿ, ಮಂಗಳಾದೇವಿ ನಗರದ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಮದೆ ಗ್ರಾಮದ ಮದೆಮಹೇಶ್ವರ ಭಜನಾ ಮಂಡಳಿ, ಕಗ್ಗೋಡ್ಲುವಿನಶ್ರೀ ಸನಾತನ ಭಜನಾ ಮಂಡಳಿ, ಜೋಡುಪಾಲದ ಶ್ರೀದೇವಿ ಭಜನಾ ಮಂಡಳಿ, ಎರಡನೇ ಮೊಣ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಉಡೋತ್ನ ಆದಿಶಕ್ತಿ ವಿನಾಯಕ ಭಜನಾ ಮಂಡಳಿ, ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್, ದೇವರಕೊಲ್ಲಿಯ ಚಾಮುಂಡೇಶ್ವರಿ ಭಜನಾ ಮಂಡಳಿ, ಮದೆನಾಡುವಿನ ಮದೆ ಮಧುರಪ್ಪ ಕುಣಿತ ಭಜನಾ ತಂಡಗಳು ಭಾಗಿಯಾದವು.

ದಾರಿ ಯಾವುದಯ್ಯ ವೈಕುಂಠಕ್ಕೆ... ಎಂಬಂತಹ ಅಧ್ಯಾತ್ಮದ ವಿಚಾರಗಳಿರುವ ಭಜನೆಗಳು, ರಾಮ, ಕೃಷ್ಞ, ಹನುಮ, ದುರ್ಗಿ, ಶಿವ ಹೀಗೆ ವಿವಿಧ ದೇವರುಗಳ ಕುರಿತಾದ ಭಜನೆಗಳು, ಗುರುವಿನ ಮಹತ್ವ ಸಾರುವ ಹಾಗೂ ಗುರುಭಕ್ತಿಯ ಭಜನೆಗಳನ್ನು ವಿವಿಧ ತಂಡಗಳ ಸದಸ್ಯರು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.