ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಡಗಿನಲ್ಲಿ ನಡೆಯದು ಜಾತಿ ರಾಜಕೀಯ’

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ಜೈನಿ ಪ್ರತಿಪಾದನೆ
Published 17 ಏಪ್ರಿಲ್ 2024, 5:46 IST
Last Updated 17 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ. ಇದು ಜಾತಿ ಕುರಿತ ಚುನಾವಣೆಯಲ್ಲ, ಇದು ದೇಶದ ಅಭಿವೃದ್ಧಿ ಮತ್ತು ಭದ್ರತೆ ಕುರಿತ ಚುನಾವಣೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ಜೈನಿ ಪ್ರತಿಪಾದಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಜಾತಿಯ ಮತಗಳನ್ನು ಕೇಳಿರುವುದು ಸರಿಯಲ್ಲ. ಅದಕ್ಕೆ ಪೂರಕವಾಗಿ ಕೆಲವರು ಜಾತಿಯ ಆಧಾರದ ಮೇಲೆ ಬೆಂಬಲಿಸಿ ಎಂದು ಕರೆ ನೀಡುತ್ತಿರುವುದೂ ಸರಿಯಲ್ಲ. ಲೋಕಸಭಾ ಚುನಾವಣೆಯಲ್ಲಿ ಜಾತಿ ಮುಖ್ಯವೇ ಅಲ್ಲ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನವರು ರೈತರಾಗಿದ್ದಾರೆ. ಪ್ರಧಾನಿಯವರು ರೈತರಿಗೆ ನೀಡುವ ಕೊಡುಗೆಗಳನ್ನು ಅವರು ಮರೆತಿಲ್ಲ ಎಂದೂ ಅವರು ಹೇಳಿದರು.

ಪಕ್ಷದ ಜಿಲ್ಲಾ ವಕ್ತಾರ ತಳೂರು ಕಿಶೋರ್‌ಕುಮಾರ್ ಮಾತನಾಡಿ, ‘ಪ್ರತಾಪಸಿಂಹ ಅವರನ್ನೇ ಟೀಕಿಸಿದ್ದ ಲಕ್ಷ್ಮಣ್‌ ಅವರಿಗೆ ಆಗ ಜಾತಿಪ್ರೇಮ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದರು.

ಮುಖಂಡರಾದ ಕಾಂಗೀರ ಸತೀಶ್, ಕವನ್ ಕಾವೇರಪ್ಪ, ವಿಜಯ್ ಹಾಗೂ ಬೆಪ್ಪುರನ ಮೇದಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT