ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ | ಮರಿಯಮ್ಮ ಜನ್ಮದಿನ, ತೆನೆಹಬ್ಬ ಸಂಭ್ರಮ

Published : 9 ಸೆಪ್ಟೆಂಬರ್ 2024, 5:24 IST
Last Updated : 9 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments

ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ಚರ್ಚ್‌ನಲ್ಲಿ ಕ್ಯಾಥೋಲಿಕ್ ಕ್ರೈಸ್ತರ ಕನ್ಯಾಮಾತೆ ಮರಿಯಮ್ಮನ ಜನ್ಮ ದಿನೋತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಭತ್ತದ ತೆನೆಗಳನ್ನು ಹಾಗೂ ದಿವ್ಯ ಆಡಂಬರ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ. ವಿಜಯಕುಮಾರ್ ನೆರವೇರಿಸಿದರು.

ನೂರಾರು ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಹಾಗೂ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಚರ್ಚ್‌ನಿಂದ ಮಾತೆ ಮರಿಯಮ್ಮನ ಮೂರ್ತಿಯನ್ನು ಸಂತ ಮೇರಿ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ತಂದು ಅಲ್ಲಿ ಭಕ್ತರು ಪುಷ್ಪನಮನ ಸಲ್ಲಿಸಿದರು.

ಮೇರಿ ಮಾತೆಯ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿ ಫೆಸ್ಟ್) ಪೂರ್ವಭಾವಿಯಾಗಿ ನಡೆಯುವ 9 ದಿನಗಳ ಬಲಿಪೂಜೆ, ಪ್ರಭೋದನೆ ಹಾಗೂ ನೊವೇನಾ ಪ್ರಾರ್ಥನೆ ಭಾನುವಾರದವರೆಗೂ ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.

ವಿಶೇಷವಾಗಿ ಕನ್ಯಾಮಾತೆ ಮರಿಯಮ್ಮಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಯಿತು. ಮಕ್ಕಳು, ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ವಿಶೇಷ ಪ್ರಾರ್ಥನೆ, ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ಹೂವುಗಳನ್ನು ಸಮರ್ಪಿಸಿದರು‌.

ನಂತರ ಚರ್ಚ್‌ನಲ್ಲಿ ನೀಡಲಾದ ಭತ್ತದ ತೆನೆಯನ್ನು ಮನೆ ಮನೆಗಳಲ್ಲಿ ತಾವು ತಯಾರಿಸುವ ಭೋಜನಗಳೊಂದಿಗೆ ಸೇರಿಸಿದರು.

ಇದೇ ವೇಳೆ 60 ವರ್ಷ ಮೇಲ್ಪಟ್ಟವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮೀಪದ 7ನೇ ಹೊಸಕೋಟೆ ಸಂತ ಸೆಬಾಸ್ಟೀನ್ ಚರ್ಚ್‌ನ ಧರ್ಮಗುರು ಸೆಬಾಸ್ಟೀನ್ (ಸುನಿಲ್), ರೇ.ಫಾ.ಸುನಿಲ್ ಪೂವತ್ತಂಗಲ್ ಕನ್ಯಾಮಾತೆ ಮರಿಯಮ್ಮನ ಜನ್ಮ ದಿನೋತ್ಸವದ ಅಂಗವಾಗಿ ದಿವ್ಯ ಅಡಂಬರ ಬಲಿಪೂಜೆಯನ್ನು ಸಮರ್ಪಿಸಿದರು. 

ಮಾದಾಪುರ ಸಮೀಪದ ಕುಂಬೂರುವಿನ ಚರ್ಚ್‌ನಲ್ಲೂ ಕನ್ಯಾಮಾತೆ ಮರಿಯಮ್ಮನ ಜನ್ಮ ದಿನೋತ್ಸವ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT