ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು | ಕುಸಿದ ಮನೆ: ಬೀದಿಗೆ ಬಂದ ಕಾರ್ಮಿಕ ಕುಟುಂಬ

Published 5 ಮಾರ್ಚ್ 2024, 5:02 IST
Last Updated 5 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಕೂಲಿ ಕಾರ್ಮಿಕ ಕುಟುಂಬ ವಾಸವಾಗಿದ್ದ ಮನೆಯೊಂದು ಭಾನುವಾರ ನೆಲಕ್ಕುರುಳಿ ಕಾರ್ಮಿಕ ಕುಟುಂಬ ನಿರ್ಗತಿಕವಾಗಿದೆ.

ಚೈಯಂಡಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಸುಮಾರು ಎಂಟು ವರ್ಷಗಳಿಂದ ಕೂಲಿ ಕಾರ್ಮಿಕ ಲೋಕೇಶ್ - ಭವಾನಿ ದಂಪತಿ ಕುಟುಂಬ ವಾಸವಾಗಿದ್ದರು. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಭವಾನಿ ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಆಕಸ್ಮಿಕವಾಗಿ ಮನೆ ಸಂಪೂರ್ಣ ಮುರಿದು ಬಿದ್ದು ಚಾವಣಿಗೆ ಅಳವಡಿಸಿದ ಹಂಚುಗಳು, ಮನೆಯಲ್ಲಿದ್ದ ಪಾತ್ರೆ, ಪಗಡಿ, ಸಾಮಗ್ರಿಗಳು ನುಜ್ಜುಗುಜ್ಜಾಗಿ ನಷ್ಟ ಸಂಭವಿಸಿದೆ.

ಈ ಸಂದರ್ಭ ಭವಾನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಲ್ಲೇ ಸಮೀಪದ ಬಂಧುಗಳ ಮನೆಯಲ್ಲಿ ಲೋಕೇಶ್ ಕುಟುಂಬ ಆಶ್ರಯ ಪಡೆದಿದೆ.

ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ದೂರನ್ನು ನೀಡಲಾಗಿದ್ದು ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಸ್ಪಂದಿಸಿ ನಿರ್ಗತಿಕ ಕುಟುಂಬಕ್ಕೆ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT