ಕುಶಾಲನಗರ: ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ 17 ವಯೋಮಿತಿಯ ಬಾಲಕರ ವಿಭಾಗದಲ್ಲಿ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ನೇತಾಜಿ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನಗಳಿದೆ. ಕುಶಾಲನಗರ ತಾಲ್ಲೂಕಿನ ಫಾತಿಮಾ ಶಾಲಾ ತಂಡವು ದ್ವಿತೀಯ ಸ್ಥಾನಗಳಿದೆ.

ಬಾಲಕಿಯ ವಿಭಾಗದಲ್ಲಿ ವಿರಾಜಪೇಟೆ ತಾಲ್ಲೂಕಿನ ಲಯನ್ಸ್ ವಿದ್ಯಾಸಂಸ್ಥೆ ಬಾಲಕಿಯರ ತಂಡ ಪ್ರಥಮ ಹಾಗೂ ಮಡಿಕೇರಿ ತಾಲ್ಲೂಕು ಸರ್ಕಾರಿ ಪಿಯು ಕಾಲೇಜು ಪ್ರೌಢಶಾಲಾ ತಂಡ ದ್ವಿತೀಯ ಪಡೆದಿದ್ದಾರೆ.

14ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆ ಅಪ್ಪಚ್ಚುಕವಿ ಪ್ರಾಥಮಿಕ ಶಾಲಾ ತಂಡ ಪ್ರಥಮ, ಮಡಿಕೇರಿ ತಾಲ್ಲೂಕು ಜಿಎಂಪಿ ಶಾಲಾ ತಂಡ ದ್ವಿತೀಯ, ಬಾಲಕರ ವಿಭಾಗದಲ್ಲಿ ವಿರಾಜಪೇಟೆ ಬಾರ್ಕಸ್ ಪ್ರಾಥಮಿಕ ಶಾಲಾ ತಂಡ ಹಾಗೂ ಸೆಕ್ರೇಟ್ ಹಾರ್ಟ್ ಪ್ರಾಥಮಿಕ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದವು. 3 ತಾಲ್ಲೂಕಿನ 12 ತಂಡಗಳು ಭಾಗವಹಿಸಿದ್ದವು.

ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಪ್ಪ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಮಹಮದ್ ಖಾನ್, ರಂಗಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಸದಾಶಿವಯ್ಯ ಎಸ್ ಪಲ್ಲೇದ್, ಪಿಯು ಕಾಲೇಜು ಪ್ರಾಂಶುಪಾಲ ಅಶೋಕ್, ಕ್ರೀಡಾಕೂಟ ಸಂಯೋಜಕ ಎಚ್.ವೈ.ಆದರ್ಶ್, ರಾಜೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.