ಸುಂಟಿಕೊಪ್ಪ: ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ವಿವಿಧ ಪೂಜೆ, ಆರಾಧನೆ ನಡೆಯಿತು.

ಸಮೀಪದ ಪನ್ಯದ ಮಳ್ಳೂರು ಬೆಳ್ಳಾರಿಕಮ್ಮ ದೇವಾಲಯದಲ್ಲಿ ವಿಶೇಷ ಪೂಜೆಗಳು, ನಾಗ ಪೂಜೆ ಅಭಿಷೇಕ ಪೂಜೆ, ಅರಸಿನ, ಕುಂಕುಮಾರ್ಚನೆ ಪೂಜೆಯನ್ನು ಪ್ರಧಾನ ಅರ್ಚಕ ಮಂಜುನಾಥ್ ಉಡುಪ ನೆರವೇರಿಸಿದರು. ಮದ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯ ಸಮಿತಿಯ ಪಟ್ಟೆಮನೆ ಉದಯಕುಮಾರ್, ಮಾಗಲು ವಸಂತ, ಪಟ್ಟೆಮನೆ ಅನಿಲ್ ಕುಮಾರ್ ಇದ್ದರು. ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು, ಅಭಿಷೇಕ, ಹರಕೆ ಒಪ್ಪಿಸುವುದು, ವಿಶೇಷ ಪೂಜೆ ಮಾಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಮದ್ಯಾಹ್ನ ದೀಪರಾಧನೆ, ಮಹಾಪೂಜೆ ನೆರವೇರಿತು.
ಸುಂಟಿಕೊಪ್ಪ, ಬೋಯಿಕೇರಿ, ಕೆದಕಲ್, ಮಡಿಕೇರಿ, ಹಾಲೇರಿ ಸೇರಿದಂತೆ ಇತರೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು. ನೆರೆದವರಿಗೆ ಅನ್ನದಾನ ಏರ್ಪಾಡಿಸಲಾಗಿತ್ತು.
ಇಲ್ಲಿನ ಮಧುರಮ್ಮ ಬಡಾವಣೆಯಲ್ಲಿ ನಾಗದೇವರ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ನಾಗದೇವರ 32ನೇ ವರ್ಷದ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ. ಬುಧವಾರ ನಡೆಯಿತು.
ಬೆಳಿಗ್ಗೆ ನಾಗ ದೇವರಿಗೆ ಕ್ಷೀರಾಭಿಷೇಕ, ಮದ್ಯಾಹ್ನ ವಿವಿಧ ಬಗೆಯ ಹೂವಿನ ಅಲಂಕಾರ ಪೂಜೆ ನಡೆದವು. ಮದ್ಯಾಹ್ನದ ನಂತರ ಮಹಾಪೂಜೆ, ಆರಾಧನಾ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
ದೇವಾಲಯದ ಎ.ಎಂ.ರಘು,ರಾಣಿ,ಧನುಕಾವೇರಪ್ಪ ಇದ್ದರು.
ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ನಾಗ ದೇವರಿಗೆ ಷಷ್ಠಿ ಪ್ರಯುಕ್ತ ವಿಶೇಷ ಪೂಜೆಣ ಅಲಂಕಾರ ಮತ್ತು ದೀಪರಾಧನೆ ನಡೆಯಿತು.
ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ನಾಗದೇವರಿಗೆ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ವಿಶೇಷ ಅಭಿಷೇಕ ಪೂಜೆಯನ್ನು ನೆರವೇರಸಲಾಯಿತು.
ಟ್ರಸ್ಟಿ ಎ.ಲೋಕೇಶ್ ಕುಮಾರ್, ದೇವಾಲಯ ಸಮಿತಿಯ ಸದಾಶಿವ ರೈ, ಸುನಿಲ್ ಕುಮಾರ್, ದಿವಾಕರ್, ಮಂಜುನಾಥ್ ಇತರರು ಇದ್ದರು.
ಕೊಡಗರಹಳ್ಳಿ ಬೈತೂರಪ್ಪ, ಪೊವ್ಚದಿ, ಬಸವೇಶ್ವರ ದೇವಾಲಯದಲ್ಲೂ ಷಷ್ಟಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ, ಅರಸಿನ, ಕುಂಕುಮ ಅಲಂಕಾರ, ಅರ್ಚನೆ ನಡೆಯಿತು.

ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ನಾಗ ದೇವತಾ ಗುಡಿಯಲ್ಲಿ ಶ್ರೀ ನಾಗದೇವರಿಗೆ ತನುತಂಬಿಲ, ಪಂಚಾಮೃತ ಅಭಿಷೇೆಕ, ಎಳನೀರುಅಭಿಷೇಕ, ಹರಿದ್ರಾರ್ಣವ ಅಭಿಷೇಕ, ಕ್ಷೀರಾಭಿಷೇಕ ಸೇವೆಗಳೊಂದಿಗೆ ವಿಶೇಷ ಕೈಂಕರ್ಯವನ್ನು ನೆರವೇರಿಸಲಾಯಿತು.
ಈ ಸಂದರ್ಭ ದೇವಾಲಯದ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣ್ಣಚ್ಚ, ಕಾರ್ಯದರ್ಶಿ ಬಿ.ಸಿ.ದಿನೇಶ್, ಕೋಶಾಧಿಕಾರಿ ಡಾ.ಬಿ.ತಮ್ಮಯ್ಯ, ಪ್ರಧಾನ ಟ್ರಸ್ಟಿಗಳಾದ ಕೆ.ಎಸ್.ಮಂಜುನಾಥ್, ದತ್ತ ಸೋಮಣ್ಣ ಇದ್ದರು.
ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಅನ್ನದಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.