ಶನಿವಾರಸಂತೆ: ‘ತಮ್ಮ ಮನೆ ಮಾರಾಟ ಮಾಡಿ ಹಿತಚಿಂತಕ ಮುದ್ರಣಾಲಯ ಆರಂಭಿಸಿ ಆ ಮೂಲಕ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅದನ್ನು ಮುದ್ರಿಸಿ ಕನ್ನಡ ನಾಡಿಗೆ ಅಮೂಲ್ಯ ಕೊಡುಗೆ ಕೊಟ್ಟವರು ಫ.ಗು.ಹಳಕಟ್ಟಿ’ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕವು ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಕಿರುಕೊಡ್ಲಿ ಮಠದ ಶಾಲಾ ಆವರಣದಲ್ಲಿನ ಶ್ರೀಮತಿ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಿದ್ದ ‘ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಜಯಂತಿ ಮತ್ತು ಹೆಮ್ಮನೆ ಪುಟ್ಟಬಸಪ್ಪ ಅವರ ಸಂಸ್ಕರಣಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದು.

ವಚನ ಸಾಹಿತ್ಯದಲ್ಲಿನ ಶರಣರ ಸಂಸ್ಕೃತಿ, ಕಾಯಕವೇ ಕೈಲಾಸ, ಕಾಯಕವೇ ಪೂಜೆ ಎನ್ನುವ ದೃಷ್ಟಿಕೋನ, ಸ್ತ್ರೀ, ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದ ವಚನಕಾರರಲ್ಲಿನ ಶಿವಶರಣರ ಶ್ರೇಷ್ಠತೆಯನ್ನು ತಿಳಿಸಿಕೊಟ್ಟವರು ಫ.ಗು.ಹಳಕಟ್ಟಿ ಎಂದು ಹೇಳಿದರು.

ಬಡತನದಿಂದ ಬಂದರೂ ಜ್ಞಾನ ಪ್ರಸಾರವನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ಅವರ ಅವರ ಅಧ್ಯಯನಶೀಲತೆ, ಜನಹಿತಾಕಾಂಕ್ಷೆಯ ದೃಷ್ಟಿ, ಜನಸೇವೆಯೇ ಜನಾರ್ದನ ಸೇವೆ ಎನ್ನುವ ಮನೋಧರ್ಮ ದೊಡ್ಡದು ಎಂದರು.

12ನೇ ಶತಮಾನದ ವಚನಗಳ ಸಾರಸಂಗ್ರಹವನ್ನು ಸಂಗ್ರಹಿಸಿ ವಿಶ್ಲೇಷಿಸಿ ಪ್ರಕಟ ಮಾಡಿದವರು ಫ.ಗು.ಹಳಕಟ್ಟಿ. ಮಾತ್ರವಲ್ಲ, ಕರ್ನಾಟಕದ ಏಕೀಕರಣದ ಚಳವಳಿಗೆ ಚಾಲನೆ ನೀಡಿದವರಲ್ಲಿ ಅವರು ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮುದಾಯದ ನಾಯಕರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ ಬಲಿದಾನಗಳನ್ನು ನೀಡಿದ್ದಾರೆ. ಇದನ್ನು ದಾಖಲಿಸುವ ಕೆಲಸ ಮಾಡುವೆ ಎಂದು ಅವರು ಭರವಸೆ ನೀಡಿದರು.

ಹಿರಿಯ ಮುಖಂಡ ಚಂದ್ರಮೌಳಿ ಮಾತನಾಡಿ, ‘ಮಠಗಳು ಶೈಕ್ಷಣಿಕವಾಗಿ ಸಹಾಯ ಮಾಡದೇ ಇದ್ದರೆ ನಾವು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ನಿಲುವಾಗಿಲಿನ ಉಪನ್ಯಾಸಕ ಎನ್.ಎಂ.ಚಂದ್ರಶೇಖರ್ ಉಪನ್ಯಾಸ ನೀಡಿದರು. ಕೊಡ್ಲಿಪೇಟೆಯ ಸ್ವಾತಂತ್ರ್ಯ ಹೋರಾಟಗಾರ ಕಾಶಿ ವಿಶ್ವನಾಥ್ ಅವರನ್ನು ಕುರಿತು ಬಿ.ಕೆ.ಯತೀಶ್ ಉಪನ್ಯಾಸ ನೀಡಿದರು.

ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಪೀಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಜೆ.ಪ್ರವೀಣ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಸೋಮವಾರಪೇಟೆ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜ್, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೋಮವಾರಪೇಟೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಬಿ.ಹಾಲಪ್ಪ, ಮುಖಂಡರಾದ ಯು.ಎಸ್.ಸುರೇಶ್, ಎ.ಆರ್.ಪಾಲಾಕ್ಷ, ಬಿ.ಕೆ.ಯತೀಶ್ ಭಾಗವಹಿಸಿದ್ದರು.

ಬಡತನದಿಂದ ಬಂದರೂ ಜ್ಞಾನ ಪ್ರಸಾರ ಫ.ಗು.ಹಳಕಟ್ಟಿ ಮನೆ ಮಾರಾಟ ಮಾಡಿ ಮುದ್ರಣಾಲಯ ಆರಂಭಿಸಿದ ಸಾಧಕ ಹಲವು ಮುಖಂಡರು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.