ವಿರಾಜಪೇಟೆ: ಜಿಲ್ಲೆಯಮಟ್ಟಿಗೆ ದಸರೆಗೆ ಮಡಿಕೇರಿ ಹೇಗೊ ಹಾಗೆ ಗೌರಿ-ಗಣೇಶೋತ್ಸವ ಆಚರಣೆಗೆ ವಿರಾಜಪೇಟೆ ಪ್ರಸಿದ್ಧವಾಗಿದೆ. ಅಂತೆಯೇ ಈ ಬಾರಿಯೂ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಪಟ್ಟಣದಲ್ಲಿ ಗೌರಿಗಣೇಶೋತ್ಸವವು ಕೇವಲ ಒಂದು ವರ್ಗ ಇಲ್ಲವೇ ಒಂದು ಪಂಗಡದ ಹಬ್ಬವಾಗಿ ಉಳಿದುಕೊಂಡಿಲ್ಲ, ಬದಲಾಗಿ ಊರ ಹಬ್ಬವೆನಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೂ ಉತ್ಸವದ ಅದ್ದೂರಿತನ, ಸಂಪ್ರದಾಯ ಹಾಗೂ ಜನತೆಯ ಶ್ರದ್ಧಾ-ಭಕ್ತಿಗೆ ಧಕ್ಕೆಯಾಗಿಲ್ಲ.

ಪ್ರತಿವರ್ಷದಂತೆ ಈ ಬಾರಿಯೂ ಗೌರಿಗಣೇಶೋತ್ಸವಕ್ಕೆ ಕಳೆ ಬಂದಿದ್ದು, ಈ ಬಾರಿ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಮಿತಿಗಳು ಸಾಮೂಹಿವಾಗಿ ಉತ್ಸವವನ್ನು ಆಚರಿಸಲಿವೆ. ಪಟ್ಟಣದ ಗಡಿಯಾರ ಕಂಬದ ಬಳಿಯ ಮಹಾಗಣಪತಿ ದೇವಾಲಯದಲ್ಲಿ ಆ.27ರಂದು ಬೆಳಿಗ್ಗೆ 11ಕ್ಕೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಬಳಿಕ ಉಳಿದ ಎಲ್ಲ ಸಮಿತಿಗಳು ತಮ್ಮತಮ್ಮ ವೇದಿಕೆಗಳಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಿವೆ.

ನಿತ್ಯ ಸಮಿತಿಗಳಿಂದ ಉತ್ಸವಮೂರ್ತಿಗಳಿಗೆ ತ್ರಿಕಾಲ ಪೂಜೆ ನಡೆಯಲಿದೆ. ಆಯಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳು ಸೇರಿದಂತೆ ಇತರ ಪರಿಕರಗಳಿಂದ ಅಲಂಕಾರವನ್ನು ಕೈಗೊಂಡಿದೆ. ಇದರಿಂದ ವಿರಾಜಪೇಟೆ ಪಟ್ಟಣವು ನವವಧುವಿನಂತೆ ಶೃಂಗಾರಗೊಂಡು ಕಂಗೊಳಿಸುತ್ತಿದೆ. ಕೆಲ ಸಮಿತಿಗಳ ವೇದಿಕೆಗಳಲ್ಲಿ ಉತ್ಸವದ ಎಲ್ಲಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಿವೆ.

ವಿವಿಧ ಸಮಿತಿಗಳು ಉತ್ಸವದ ದಿನಗಳಂದು ಅನ್ನಸಂತರ್ಪಣೆ ಆಯೋಜಿಸಿವೆ. ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿನ ಬಾಲಾಂಜನೇಯ ಗಣಪತಿ ಸೇವಾ ಸಮಿತಿ ವತಿಯಿಂದ ಉತ್ಸವದ 11 ದಿನಗಳ ಕಾಲವು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಉತ್ಸವ ಮೂರ್ತಿಗಳ ವಿಸರ್ಜನೋತ್ಸವದಂದು ಶೋಭಯಾತ್ರೆಯು ಸೆ.6ರಂದು ಸಂಜೆ ಆರಂಭಗೊಂಡು ಮರುದಿನ ಮುಂಜಾನೆ ಮುಕ್ತಾಯಗೊಳ್ಳಲಿದೆ. ಈ ಬಾರಿ 22 ಪ್ರಮುಖ ಗಣೇಶೋತ್ಸವ ಸಮಿತಿಗಳು ಭಾಗವಹಿಸಲಿವೆ. ಶೋಭಯಾತ್ರೆಯ ಬಳಿಕ ಉತ್ಸವ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಗೌರಿಕೆರೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರ ಮುತುವರ್ಜಿಯಿಂದ ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗಿದೆ.

ಉತ್ಸವದ ಅಂಗವಾಗಿ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕೈಗೊಂಡಿದೆ. ಉತ್ಸವದ ದಿನಗಳು ಪಟ್ಟಣದ ಮಟ್ಟಿಗೆ ಜೀವಕಳೆಯನ್ನು ತಂದುಕೊಡುವ ನಿರೀಕ್ಷೆಯಿದೆ.

ಇದು ಭಾವೈಕ್ಯ, ಸಾಮರಸ್ಯದ ಉತ್ಸವ. ಆದ್ದರಿಂದಲೇ ಇಂದು ಊರ ಹಬ್ಬವಾಗಿದೆ. ಶಾಸಕರು ಸಹಕಾರ ನೀಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ನಾಡಿನ ಪಾರಂಪರಿಕ ಉತ್ಸವದ ಯಶಸ್ವಿಗೆ ಸಹಕರಿಸೋಣ
ಶಬರೀಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.