ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌| ಎಲೈಟ್ ಸ್ಕ್ವಾಡ್ 2,ಮರಗೋಡಿಯನ್ಸ್‌ಗೆ ಗೆಲುವು

ರೋಚಕ ಕ್ಷಣಗಳಿಗೆ ಸಾಕ್ಷಿಯಾದ 2 ಪಂದ್ಯಗಳು
Published 21 ಏಪ್ರಿಲ್ 2024, 23:47 IST
Last Updated 21 ಏಪ್ರಿಲ್ 2024, 23:47 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಎಲೈಟ್ ಸ್ಕ್ವಾಡ್ ಮತ್ತು ದಿ ಮರಗೋಡಿಯನ್ಸ್ ತಂಡಗಳು ಜಯ ಸಾಧಿಸಿದವು.

ಎಲೈಟ್ ಸ್ಕ್ವಾಡ್ ಬಿ ಮತ್ತು ಕಾಫಿ ಕ್ರಿಕೆಟರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಎಲೈಟ್ ಸ್ಕ್ವಾಡ್ ಬಿ ತಂಡ 8 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು. ತಂಡದ ಪರ ತಳೂರು ವಿಕ್ಕಿ 19 ಎಸೆತಗಳಲ್ಲಿ 48 ರನ್ ಗಳಿಸಿದರು. ರಾಮ್‌ಸ್ವರೂಪ್ ದೊಡ್ಡಮನೆ 25 ಎಸೆತಗಳಲ್ಲಿ 37 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಎಲೈಟ್ ಸ್ಕ್ವಾಟ್ ಬಿ ತಂಡ 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಸಿ ವಿಜಯದ ನಗೆ ಬೀರಿತು. ಎಲೈಟ್ ತಂಡದ ಪರ ರಾಹುಲ್ 34 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ‘ಟೋಟಲ್ ಜಿಪಿಎಲ್ ಸೀಸನ್-2 ಪವರ್ಡ್ ಬೈ ತುಂತುರು’ವಿನ ಮೊದಲ ಮಹಿಳಾ ಬೌಲರ್ ಆಗಿ ಎಲೈಟ್ ತಂಡದ ಕಟ್ಟೆಮನೆ ಜಾಹ್ನವಿ ಒಂದು ಓವರ್ ಬೌಲ್ ಮಾಡಿದ್ದು ವಿಶೇಷ ಎನಿಸಿತು.

ದಿ ಮರಗೋಡಿಯನ್ಸ್ ಮತ್ತು ಕೂರ್ಗ್ ಹಾಕ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ದಿ ಮರಗೋಡಿಯನ್ಸ್ 5 ರನ್‌ಗಳ ರೋಚಕ ಜಯ ಗಳಿಸಿತು.

ಟಾಸ್ ಗೆದ್ದ ಹಾಕ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ‌ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಮರಗೋಡಿಯನ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ತಂಡದ ಪರ ಬೈಲೆ ಡ್ಯೂಕ್ ಕಾವೇರಿ 27 ಎಸೆತಕ್ಕೆ 58 ರನ್ ಗಳಿಸಿದರು. ವರುಣ್ ರಾಜ್ ಬೇಕಲ್ 37 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು‌.

ಗುರಿ ಬೆನ್ನಟ್ಟಿದ ಕೂರ್ಗ್ ಹಾಕ್ಸ್ ತಂಡ 7 ವಿಕೆಟ್ ನಷ್ಟಕ್ಕೆ 99 ಗಳಿಸಿ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು‌. ಮರಗೋಡಿಯನ್ಸ್ ತಂಡದ ಪರ ಶರ್ವಿನ 2 ವಿಕೆಟ್ ಪಡೆದರು. ದಿ ಎಲೈಟ್ ಸ್ಕ್ವಾಡ್ 2 ಮತ್ತು ಪ್ಲಾಂಟರ್ಸ್ ಕ್ಲಬ್, ಬಿಳಿಗೇರಿ ತಂಡದ ನಡುವೆ ನಡೆದ ಪಂದ್ಯದಲ್ಲಿ ದಿ ಎಲೈಟ್ ಸ್ಕ್ವಾಡ್ 2 ತಂಡ 8 ರನ್‌ಗಳ ರೋಚಕ ಜಯ ಗಳಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಿ ಎಲೈಟ್ ಸ್ಕ್ವಾಡ್ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ 109 ರನ್‌ಗಳ ಟಾರ್ಗೆಟ್ ನೀಡಿತು. ರಾಹುಲ್ 25 ಎಸೆತಗಳಿಗೆ 50 ರನ್ ದಾಖಲಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಇವರ ಎರಡನೇ ಅರ್ಧಶತಕ. ಪ್ಲಾಂಟರ್ಸ್ ಕ್ಲಬ್ ತಂಡದ ಪರ ದರ್ಶನ್ ಪರ್ಲಕೋಟಿ 2 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ 6 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ 8 ರನ್‌ಗಳ ಸೋಲೊಪ್ಪಿಕೊಂಡಿತು.

ವರುಣ್ ಮೂಲೆಮಜಲು 13 ಎಸೆತಕ್ಕೆ 27 ರನ್ ಗಳಿಸಿದರು. ದಿ ಎಲೈಟ್ ಸ್ಕ್ವಾಡ್ ಪರ ರಾಹುಲ್ ಎ.ಎಸ್. 2 ವಿಕೆಟ್ ಪಡೆದರು. ಇದರೊಂದಿಗೆ ಎಲೈಟ್ ಸತತ ಎರಡು ಪಂದ್ಯಗಳನ್ನು ಗೆದ್ದಿತು.

ಇಂದಿನ ಪಂದ್ಯಗಳು 9; ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಮತ್ತು ದಿ ಮರಗೋಡಿಯನ್ಸ್ 11;ದಿ ಎಲೈಟ್ ಸ್ಕ್ವಾಡ್ 2 ಮತ್ತು ಕೂರ್ಗ್ ಹಾಕ್ಸ್ 1;ದಿ ಮರಗೋಡಿಯನ್ಸ್ ಮತ್ತು ಕಾಫಿ ಕ್ರಿಕೆಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT