ಮಡಿಕೇರಿ: ಸುಗ್ಗಿ ಹಬ್ಬ ಎಂದೇ ಹೆಸರಾದ ಪುತ್ತರಿ (ಹುತ್ತರಿ) ಹಬ್ಬಕ್ಕೆ ಕೊಡಗು ಸಜ್ಜಾಗಿದೆ. ಡಿ. 4ರಿಂದ ಇಲ್ಲಿ ಪುತ್ತರಿ ಹಬ್ಬ ಗರಿಗೆದರಲಿದ್ದು, ಎಲ್ಲೆಡೆ ಸಂಭ್ರಮ ಮೇಳೈಸಿದೆ.

ಈಗಾಗಲೇ ಇಗ್ಗುತ್ತಪ್ಪ ದೇಗುಲಗಳಲ್ಲಿ ಹಾಗೂ ಇಲ್ಲಿನ ಓಂಕಾರೇಶ್ವರ ದೇಗುಲ ಸೇರಿದಂತೆ ಅನೇಕ ದೇಗುಲಗಳಲ್ಲಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಇಲ್ಲಿನ ಗಾಂಧಿ ಮೈದಾನದಲ್ಲಿ ಪಟಾಕಿಗಳ ಮಾರಾಟ ಭರದಿಂದ ಸಾಗಿದೆ. ವಿವಿಧ ಬಗೆಯ ರಿಯಾಯಿತಿಗಳನ್ನು ಘೋಷಿಸಿರುವ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಬೇರೆ ಜಿಲ್ಲೆಗಳಲ್ಲಿದ್ದ ಕುಟುಂಬದ ಸದಸ್ಯರು, ಬಂಧು ಬಾಂಧವರು, ಸ್ನೇಹಿತರು ತಮ್ಮ ತಮ್ಮ ಊರಿಗೆ ಮರಳಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ. ಮತ್ತೊಂದಷ್ಟು ಜನರು ಇಂದು ಬರಲಿದ್ದಾರೆ. ಮನೆಮನೆಗಳಲ್ಲೂ ನವೋಲ್ಲಾಸ ಮೂಡಿದೆ.

ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಡಿ. 4ರಂದು ಗುರುವಾರ ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ ಹುತ್ತರಿ ಹಬ್ಬ ಆಚರಣೆ ನಡೆಯಲಿದೆ. ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಇದಕ್ಕೂ ಮುನ್ನ ಹಗಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.

ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ವತಿಯಿಂದ ಹುತ್ತರಿ ಹಬ್ಬವು ಡಿ. 4ರಂದು ರೋಹಿಣಿ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ನಡೆಯಲಿದೆ. ಅಂದು ರಾತ್ರಿ 8.40ಕ್ಕೆ ನೆರೆ ಕಟ್ಟುವುದು, ರಾತ್ರಿ 9.40ಕ್ಕೆ ಕದಿರು ಕುಯ್ಯುವುದು ನಂತರ ಪ್ರಸಾದ ವಿತರಣೆ ನಡೆಯಲಿದೆ.

ಹುತ್ತರಿ ಕೋಲಾಟವು ಡಿ. 5 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ನಡೆಯಲಿದೆ ಎಂದು ಓಂಕಾರೇಶ್ವರ ದೇವಾಲಯದ ಅಧ್ಯಕ್ಷ ಚುಮ್ಮಿ ದೇವಯ್ಯ ಅವರು ತಿಳಿಸಿದ್ದಾರೆ.

ಪುತ್ತರಿ ಹಬ್ಬ ಕಳೆದ ಬಳಿಕ ಭಾನುವಾರ ನಾಪೋಕ್ಲು ಸಮೀಪದ ಬಿದ್ದಾಟಂಡ ವಾಡೆಯಲ್ಲಿ ಪುತ್ತರಿ ಕೋಲಾಟ ನಡೆಯಲಿದೆ. ಮೂರ್ನಾಡು, ಭಾಗಮಂಡಲದ ನಾಡು ಮಂದ್ಗಳಲ್ಲೂ ಪುತ್ತರಿ ಕೋಲಾಟಕ್ಕೆ ಸಿದ್ದತೆಗಳು ನಡೆದಿವೆ.

ಪುತ್ತರಿ ಸಂಭ್ರಮಕ್ಕೆ ನಾಲ್ಕುನಾಡು ಸಜ್ಜು

ನಾಪೋಕ್ಲು: ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವ ಹಲವು ಹಬ್ಬಗಳ ಸಾಲಿನಲ್ಲಿ ತನ್ನದೇ ಆದ ವೈಶಿಷ್ಟ್ಯದೊಂದಿಗೆ ಆಚರಿಸುವ ಪುತ್ತರಿ ಕಾವೇರಿ ತವರಿನ ಸಿರಿ ಹಬ್ಬ. ರೈತರ ಪರಿಶ್ರಮಕ್ಕೆ ಕಾವೇರಿ ಮಾತೆ ನೀಡುವ ಕಾಣಿಕೆ ಇದು. ಪುತ್ತರಿ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬ. ಇಂದು ಹುಣ್ಣಿಮೆಯ ದಿನ ಕೊಡಗಿನಲ್ಲಿ ಸಿರಿ ಹಬ್ಬದ ಸಂಭ್ರಮ. ಕೊಡಗಿನಾದ್ಯಂತ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಹಬ್ಬ ಪುತ್ತರಿ. ಪುತ್ತರಿ ಆಚರಣೆಗೆ ನಾಲ್ಕುನಾಡು ಸಜ್ಜಾಗಿದೆ. ‘ಪೊಲಿ ಪೊಲಿಯೇ ದೇವಾ’ ಎಂದು ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯನ್ನು ತುಂಬಿಕೊಳ್ಳುವ ವಿಧಿವತ್ತಾದ ಆಚರಣೆ ಪುತ್ತರಿ ಹಬ್ಬದಲ್ಲಿನ ಅಡುಗೆಯೂ ವೈವಿಧ್ಯಮಯವಾಗಿದೆ. ಬಾಳೇಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’ ಘಮಘಮಿಸುವ ಏಲಕ್ಕಿ ಪುಟ್ ಆಗತಾನೇ ಗದ್ದೆಯಿಂದ ಕುಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿ ಪಾಯಸ ಪುತ್ತರಿ ಗೆಣಸಿನ ಸಾಂಬಾರು. ಹೀಗೆ ಹತ್ತಾರು ವೈವಿಧ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಗದ್ದೆಗಳು ಇಳಿಮುಖ ಮೊದಲೆಲ್ಲಾ ಪುತ್ತರಿ ಆಚರಣೆಗೆ ಪ್ರತಿ ಕುಟುಂಬಕ್ಕೆ ಭತ್ತದ ಗದ್ದೆಗಳಿದ್ದವು. ಇತ್ತೀಚೆಗೆ ಹಬ್ಬದ ಆಚರಣೆಗೆ ಅಗತ್ಯವಿರುವ ಭತ್ತದ ಗದ್ದೆಗಳು ಇಳಿಮುಖಗೊಂಡಿವೆ. ಭತ್ತದ ತೆನೆಗಳಿಗಾಗಿ ಇರುವ ಸೀಮಿತ ಗದ್ದೆಗಳಿಗೆ ತೆರಳುವ ಪರಿಸ್ಥಿತಿ ಬಂದೊದಗಿದೆ. ಏರುತ್ತಿರುವ ಖರ್ಚುವೆಚ್ಚಗಳಿಂದಾಗಿ ಭತ್ತ ಬೆಳೆಯುವ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಅಲ್ಲಲ್ಲಿ ಭತ್ತ ಬೆಳೆಯುತ್ತಿರುವ ರೈತರಿಗೆ ಕಾಡುಹಂದಿಗಳ ಕಾಡಾನೆಗಳ ಕಾಟ ಸಮಸ್ಯೆಯಾಗಿ ಕಾಡುತ್ತಿದೆ. ಭತ್ತದ ಬೆಳೆ ಕೊಯ್ಲು ಸಂದರ್ಭದಲ್ಲಿ ಕಾಡುಪ್ರಾಣಿಗಳ ಉಪಟಳದಿಂದಾಗಿ ಪೈರುಗಳ ಸಂರಕ್ಷಣೆಗೆ ರೈತರು ಹತ್ತು ಹಲವು ಮಾರ್ಗೋಪಾಯಗಳನ್ನು ಹುಡುಕುವ ಪರಿಸ್ಥಿತಿ ಬಂದೊದಗಿದೆ. ವರ್ಷದಿಂದ ವರ್ಷಕ್ಕೆ ಭತ್ತಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಬಿಳೂರು ಗ್ರಾಮದಲ್ಲಿ ಸಿಎನ್ಸಿಯಿಂದ ‘ಪುತ್ತರಿ ನಮ್ಮೆ’ ಇಂದು

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 31ನೇ ವರ್ಷದ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯನ್ನು ಡಿ. 4ರಂದು ಬೆಳಿಗ್ಗೆ 10 ಗಂಟೆಗೆ ಬಾಳೆಲೆ ಹೋಬಳಿಯ ಪತ್ತ್ ಕಟ್ ನಾಡ್ನ ಬಿಳೂರು ಗ್ರಾಮದಲ್ಲಿ ಆಚರಿಸಲಾಗುತ್ತದೆ. ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ನೇತೃತ್ವದಲ್ಲಿ ಕದಿರು ತೆಗೆಯುವ ಮೂಲಕ ‘ಪುತ್ತರಿ ನಮ್ಮೆ’ಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.