ಕೊಡಗು ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದಚಿತ್ರ
ಮಾಹಿತಿಗೆ ದೂ: 08272-225531 ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ₹ 3 ಸಾವಿರ, ತೃತೀಯ ₹ 2 ಸಾವಿರ ನಗದು ಬಹುಮಾನ
ಆನ್‌ಲೈನ್ ರಸಪ್ರಶ್ನೆ
‘ಸಂವಿಧಾನ ಜಾಗೃತಿ ಜಾಥಾ’ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಭಾರತ ಸಂವಿಧಾನದ ಕುರಿತಂತೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಫಾರ್ಮ್‌ನಲ್ಲಿ ಕೋರಿರುವ ಮಾಹಿತಿಯನ್ನು ಭರ್ತಿ ಮಾಡಿ ನೀಡಿರುವ ಬಹು ಆಯ್ಕೆ ಮಾದರಿಯ ಪ್ರಶ್ನಾವಳಿಗಳಿಗೆ ಉತ್ತರಿಸಬಹುದು. ಕೊಡಗು ಜಿಲ್ಲಾ ಆಡಳಿತ ವತಿಯಿಂದ ಆಯೋಜಿಸಲಾಗಿರುವ ಈ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳು ಸಾರ್ವಜನಿಕರು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಗೂಗಲ್ ಫಾರ್ಮ್: https://docs.google.com/forms/d/e/1FAIpQLSeMwBb4X2QOcFl8T2g6bpg1o_rolbeY4puf5a8WIq0DIfqfMQ/viewform?usp=sf_link
21ರಂದು ಮಡಿಕೇರಿಗೆ
‘ಸಂವಿಧಾನ ಜಾಗೃತಿ ಜಾಥಾ’ ಜಿಲ್ಲಾಡಳಿತದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ’ ಫೆ. 21ರಂದು ಮಡಿಕೇರಿಗೆ ಆಗಮಿಸಲಿದೆ. ಜಾಥಾದಲ್ಲಿ ಭಾಗಿಯಾಗಿರುವ ಸ್ತಬ್ದಚಿತ್ರಕ್ಕೆ ಸ್ವಾಗತ ಕೋರಿ ಕಾವೇರಿ ಕಲಾಕ್ಷೇತ್ರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.