ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸ ಜಯಂತಿ | ಸಮಾನತೆ ಸಂದೇಶ ಸಾರಿದ ಸಂತ: ಕಿರಣ್ ಗೌರಯ್ಯ

ತಾಲ್ಲೂಕು ಆಡಳಿತದಿಂದ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ
Published 1 ಡಿಸೆಂಬರ್ 2023, 4:49 IST
Last Updated 1 ಡಿಸೆಂಬರ್ 2023, 4:49 IST
ಅಕ್ಷರ ಗಾತ್ರ

ಕುಶಾಲನಗರ: ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ ಸಮಾರಂಭ ಮುಳ್ಳುಸೋಗೆ ವಾಲ್ಮೀಕಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಕಿರಣ್ ಗೌರಯ್ಯ, ‘ಸಮಾನತೆ ಸಂದೇಶ ಸಾರಿದ ಕನಕದಾಸರ ದೈವಭಕ್ತಿಗೆ ಸಾಕ್ಷಿ ಇಂದಿಗೂ ಉಡುಪಿಯಲ್ಲಿನ‌ ಶ್ರೀಕೃಷ್ಣ ದೇವಾಲಯದಲ್ಲಿ ಕಾಣಬಹುದು. ದಾಸರ ಸಾಮಾಜಿಕ ಚಿಂತನೆಗಳನ್ನು ಅರಿತು ಅದರಂತೆ ಜೀವನ ನಡೆಸುವ ಅಗತ್ಯವಿದೆ’ ಎಂದರು.

ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ‘ಸಮುದಾಯವು ಅತ್ಯಂತ ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದು ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿತುಕೊಂಡು ಸಧೃಢರಾಗಬೇಕಿದೆ. ವಿದ್ಯಾಭ್ಯಾಸದ‌ ಮೂಲಕ ಸಮಾಜದ ಉನ್ನತ ಸ್ಥಾನ‌ ಅಲಂಕರಿಸಬೇಕಿದೆ’ ಎಂದು ಕರೆ ನೀಡಿದರು.

ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ವಿಶೇಷ ಉಪನ್ಯಾಸ ನೀಡಿದರು. ಕನಕದಾಸರ ಜೀವನ ಚರಿತ್ರೆ ಬಗ್ಗೆ ಮಾಹಿತಿ ಒದಗಿಸಿದರು.

ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ‌ನರಗುಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಗೊಳ್ಳಿ‌ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯಿಂದ ಶೌರ್ಯ ಪ್ರಶಸ್ತಿ ವಿಜೇತ ಬಾಲಕ ದೀಕ್ಷಿತ್ ಸೇರಿದಂತೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಸಮಾಜಕ್ಕೆ ಉತ್ತಮ‌ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಉದಯಕುಮಾರ್,‌ ನಿರ್ದೇಶಕರಾದ ಪ್ರಸನ್ನ, ಮಲ್ಲೇಶ್, ಟಿ.ಕೆ.ಕುಮಾರ್, ದಿನೇಶ್, ಕೆ.ಆರ್.ರವಿ, ರಮೇಶ್, ಕರ್ನಾಟಕ‌ ಕುರುಬ ಸಂಘದ ನಿರ್ದೇಶಕಿ ಹೇಮಲತಾ ಮಂಜುನಾಥ್, ಡಿಎಸ್ಎಸ್‌ನ ಪ್ರಮುಖ ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT