ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯಲ್ಲಿ ನಡೆಯುತ್ತಿರುವ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ ಕೂವಲೆರ ಚಿಟ್ಟಡೆ ಕಪ್ನಲ್ಲಿ ಶುಕ್ರವಾರ ಒಟ್ಟು 9 ತಂಡಗಳು ಮುನ್ನಡೆ ಸಾಧಿಸಿದವು.

ಕೂವಲೆರ ಕುಟುಂಬದ ಆತಿಥ್ಯದಲ್ಲಿ ಚಿಟ್ಟಡೆ ಜುಮಾ ಮಸೀದಿ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿ ಮೊದಲ ಸುತ್ತಿನ ಪಂದ್ಯಗಳಲ್ಲಿ ಚಿಮ್ಮಿಚಿರ ಎ, ಕತ್ತಣಿರ ಮತ್ತು ಬಲ್ಯತ್ ಕಾರಂಡ ತಂಡಗಳು 2ನೇ ಸುತ್ತನ್ನು ಪ್ರವೇಶಿಸಿದರೆ, ಪೊಟ್ಟಂಡ, ಮೀತಲತಂಡ ಎ, ಆಲೀರ ಎ, ಹರಿಶ್ಚಂದ್ರ, ಚೆಂಬಾರಂಡ ಮತ್ತು ಚಿಟ್ಟಡೆ ಕೂವಲೆರ ಬಿ ತಂಡಗಳು ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ 3ನೇ ಸುತ್ತಿಗೆ ಪ್ರವೇಶ ಪಡೆದವು.

ಮೊದಲ ಸುತ್ತಿನ ಪಂದ್ಯದಲ್ಲಿ ಪೊಟ್ಟಂಡ ತಂಡವು ಕನ್ನಡಿಯಂಡ ಬಿ ತಂಡವನ್ನು 2-1ಸೆಟ್ಗಳಿಂದ ಸೋಲಿಸಿದರೆ, ಮೀತಲತಂಡ ಎ ತಂಡ ಕರತೊರೆರ ತಂಡವನ್ನು ನೇರ 2-0ಸೆಟ್ಗಳಿಂದ ಮಣಿಸಿತು. ಆಲೀರ ಎ ತಂಡವು ಮೀತಲತಂಡ ಬಿ ತಂಡವನ್ನು 2-1ಸೆಟ್ಗಳಿಂದ ಪರಾಭವಗೊಳಿಸಿದರೆ, ಚಿಟ್ಟಡೆ ಕೂವಲೆರ ಬಿ ತಂಡವು ನೇರೂಟ್ ಕಾರಂಡ ತಂಡವನ್ನು 2-1ಸೆಟ್ಗಳಿಂದ ಸೋಲಿಸಿತು.

ಚಿಮ್ಮಿಚಿರ ಎ ತಂಡವು ಮೀನಕ್ಕೆರ ತಂಡವನ್ನು 2-0ಸೆಟ್ನಿಂದ ಮಣಿಸಿದರೆ, ಚೆಂಬಾರಂಡ ತಂಡವು ಚೇನೋತಂಡ ತಂಡವನ್ನು 2-0ಸೆಟ್ಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಕತ್ತಣಿರ ತಂಡವು ಆಲೀರ ಬಿ ತಂಡವನ್ನು 2-0ಸೆಟ್ಗಳಿಂದ ಪರಾಭವಗೊಳಿಸಿದರೆ, ಬಲ್ಯತ್ ಕಾರಂಡ ತಂಡ ಮಂಡಿಯಂಡ ತಂಡವನ್ನು 2-0ಸೆಟ್ನಿಂದ ಸೋಲಿಸಿ 2ನೇ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

2ನೇ ಸುತ್ತಿನ ಪಂದ್ಯದಲ್ಲಿ ಪೊಟ್ಟಂಡ ತಂಡವು ಕಾಟ್ರಕೊಲ್ಲಿ ಆಲೀರ ತಂಡವನ್ನು 2-1ಸೆಟ್ಗಳಿಂದ ಪರಾಭವಗೊಳಿಸಿದರೆ, 2ನೇ ಪಂದ್ಯದಲ್ಲಿ ಮೀತಲತಂಡ ಎ ತಂಡವು ಅಂಬಟ್ಟಿ ಕಿಕ್ಕರೆ ತಂಡವನ್ನು 2-0ಸೆಟ್ಗಳಿಂದ ಮಣಿಸಿತು. ಆಲೀರ ಎ ತಂಡವು ಕೂರುಳಿಕಾರಂಡ ತಂಡವನ್ನು 2-1ಸೆಟ್ಗಳಿಂಜ ಪರಾಭವಗೊಳಿಸಿ 3ನೇ ಸುತ್ತಿಗೆ ಪ್ರವೇಶಿಸಿತು.

ಹರಿಶ್ಚಂದ್ರ ತಂಡವು ಚಿಮ್ಮಿಚ್ಚಿರ ಎ ತಂಡವನ್ನು 2-0ಸೆಟ್ಗಳಿಂದ ಸೋಲಿಸಿದರೆ, ಚೆಂಬಾರಂಡ ತಂಡವು ಪೇರಿಯಂಡ ತಂಡವನ್ನು 2-0ಸೆಟ್ಗಳಿಂದ ಮಣಿಸಿತು. ಚಿಟ್ಟಡೆ ಕೂವಲೆರ ಬಿ ತಂಡವು ಚಾಮಿಯಾಲ ಕೂವಲೆರ ಎ ತಂಡವನ್ನು 2-1ಸೆಟ್ಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ತಡರಾತ್ರಿವರೆಗೂ ನಡೆದ ಈ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನತೆ ಚಳಿಯನ್ನೂ ಲೆಕ್ಕಿಸದೆ ವೀಕ್ಷಿಸಿದರು. ಚಿಟ್ಟಡೆ ಕೂವಲೆರ ಕುಟುಂಬದ ಅಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಕೂವಲೆರ ಫಕ್ರುದ್ದೀನ್, ತಾಂತ್ರಿಕ ಸಮಿತಿ ಮುಖ್ಯಸ್ಥ ಕೂವಲೆರ ಪೈಜ್ಹು ಸಜೀರ್, ಕೂವಲೆರ ಅಬ್ದುಲ್ ಘನಿ ಮೊದಲಾದವರು ಪಂದ್ಯಾವಳಿಯ ಉಸ್ತುವಾರಿ ವಹಿಸಿದ್ದರು. ಎಡಪಾಲದ ಎರಟೇಂಡ ಜಂಶೀರ್ ವೀಕ್ಷಕ ವಿವರಣೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.