ಮಡಿಕೇರಿ: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆ ಉದ್ದೇಶದಿಂದ ಆರಂಭವಾಗಿರುವ ಕೊಡಗು ವಿಕಸನ ಸಂಸ್ಥೆಯ ಲಾಂಛನವನ್ನು ಭಾನುವಾರ ಬಿಡುಗಡೆಗೊಂಡಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಲಾಂಛನ ಬಿಡುಗಡೆ ಮಾಡಿದರು.

‘ತಮ್ಮ ಕ್ಷೇತ್ರದಲ್ಲಿ ಕೂಡಾ ವಿಕಸನ ಸಂಸ್ಥೆ ಹಲವು ವರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕೊಡುಗೆ ನೀಡುತ್ತಿದೆ. ಅದರಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ವಿಕಸನಕ್ಕೆ ವಿಶೇಷವಾಗಿ ನೆರವಾಗುತ್ತಿದೆ. ಈ ಕಾರ್ಯದಲ್ಲಿ ಉತ್ತಮ ಯಶಸ್ಸನ್ನೂ ಕಾಣುತ್ತಿದ್ದೇವೆ. ಅದೇ ಸದುದ್ದೇಶದಿಂದ ಕೊಡಗಿನಲ್ಲಿ ಸಂಸ್ಥೆ ಹುಟ್ಟು ಹಾಕಿರುವುದು ಸ್ವಾಗತಾರ್ಹ ನಡೆ’ ಎಂದರು.

‘ಕೊಡಗಿನಲ್ಲಿ ಹಲವು ರೀತಿಯ ವಿಕಸನದ ಅಗತ್ಯವಿದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಮಾಡಬೇಕು. ಪರೀಕ್ಷೆ ರಣಾಂಗಣವಲ್ಲ, ಅದೊಂದು ಕ್ರೀಡಾಂಗಣದಂತೆ. ಲವಲವಿಕೆ, ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಅಭಿಲಾಷೆ. ಆ ದಿಸೆಯಲ್ಲಿ ಕೊಡಗು ವಿಕಸನ ಕೂಡಾ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜಾಜಿನಗರದ ವಿಕಸನ ಸಂಸ್ಥೆಯಿಂದ ಕೂಡಾ ಅಗತ್ಯ ನೆರವು ನೀಡುತ್ತೇನೆ’ ಎಂದು ಸಚಿವರು ತಿಳಿಸಿದರು.

ಮಡಿಕೇರಿಯ ರೋಹಿತ್ ಕಲ್ಲೇಗ ಲೋಗೋ ವಿನ್ಯಾಸ ಮಾಡಿದ್ದಾರೆ. ಬಿಡುಗಡೆ ಸಂದರ್ಭ ಕೊಡಗು ವಿಕಸನ ಬಳಗದ ಚೈಯ್ಯಂಡ ಸತ್ಯ ಗಣಪತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿಶೋರ್ ರೈ ಕತ್ತಲೆಕಾಡು, ಶೇಖರ್, ರಾಜಾಜಿನಗರ ವಿಕಸನ ಪದಾಧಿಕಾರಿಗಳಾದ ಯುವಮೋರ್ಚಾ ಲಿಂಗರಾಜು, ಸುನೀಲ್ ಶಿವಾನಂದ ಇದ್ದರು.

11ಕ್ಕೆ ಮೊದಲ ಕಾರ್ಯಕ್ರಮ

‘ಕೊಡಗು ವಿಕಸನ’ ಸಂಸ್ಥೆಯ ಮೊದಲ ಕಾರ್ಯಕ್ರಮ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜ.11ರಂದು ನಡೆಯಲಿದೆ. ಮಡಿಕೇರಿಯ ಸಂತ ಜೋಸೆಫ್ ವಿದ್ಯಾಸಂಸ್ಥೆ ಸಭಾಂಗಣ ಹಾಗೂ ನಾಪೋಕ್ಲುವಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಅಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಅಂತರರಾಷ್ಟ್ರೀಯ ಅಥ್ಲೀಟ್ ಹಾಗೂ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ತೀತಮಾಡ ಅರ್ಜುನ್ ದೇವಯ್ಯ ಉಪನ್ಯಾಸ ಹಾಗೂ ಸಂವಾದ ನಡೆಸಲಿದ್ದಾರೆ. ನಂತರದಲ್ಲಿ ಪ್ರತಿ ಫೆಬ್ರುವರಿ ಅಂತ್ಯದವರೆಗೆ ಪ್ರತಿ ಶನಿವಾರ ಬೆಂಗಳೂರಿನ ವಿಷಯ ತಜ್ಞರಿಂದ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ. ಎರಡು ವಿಭಾಗಕ್ಕೊಳಪಟ್ಟ ವ್ಯಾಪ್ತಿಯ ಶಾಲೆಗಳ ಎಸ್ಸೆಸ್ಸೆಲ್ಸಿ ಹಾಗೂ ಶಿಕ್ಷಕರು ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.