ಮಂಗಳವಾರ, ಜೂನ್ 15, 2021
23 °C

ಕುಶಾಲನಗರದಲ್ಲಿ ಮೇ ಫ್ಲವರ್‌ ರಂಗು: ಕಣ್ಮನ ಸೆಳೆಯುವ ಗುಲ್‌ಮೊಹರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಗುಲ್ ಮೊಹರ್ ಮರಗಳು ಕೆಂಪು ಹೂಗಳನ್ನು ಬಿಟ್ಟು ಕಂಗೊಳಿಸುತ್ತಿವೆ.

ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರ, ಆನೆಕಾಡು ಅರಣ್ಯ ಪ್ರದೇಶದ ರಸ್ತೆಗಳು, ಕುಶಾಲನಗರ ಅರಣ್ಯ ಇಲಾಖೆಯ ಮರದ ಡಿಪೋ ಹಾಗೂ ಕೂಡಿಗೆ ಕೃಷಿ ಫಾರಂ ಆವರಣದಲ್ಲಿ ಗುಲ್‌ಮೊಹರ್‌ ಮರಗಳು ಹೂ ಬಿಟ್ಟಿದ್ದು, ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.

ಈ ರಸ್ತೆಗಳಲ್ಲಿ ಸಂಚರಿಸುವ ಜನರು ಗುಲ್‌ಮೊಹರ್‌ ಮರಗಳ ಸೌಂದರ್ಯವನ್ನು ಕಣ್ತುಂಬಿಕೊ ಳ್ಳುತ್ತಿದ್ದಾರೆ. ಕೆಂಪು ಹೂಗಳು ರಸ್ತೆ ಮೇಲೆ ಉದುರಿದ್ದು, ರಸ್ತೆಗಳು ಕೂಡ ಕೆಂಪಾಗಿ ಗೋಚರಿಸುತ್ತಿವೆ.

‘ಡೆಲೋನಿಕ್ಸ್ ರೆಜಿಯಾ ರಾಫ್’ ಅಥವಾ ‘ಡೆಲೋನಿಕ್ಸ್’ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ಮರವನ್ನು ಹಿಂದಿಯಲ್ಲಿ ಗುಲ್‌ಮೊಹರ್ ಎನ್ನುತ್ತಾರೆ. ಗುಲ್ ಎಂದರೆ  ಹೂವು, ಮೋರ್ ಅಂದರೆ ನವಿಲು ಎಂದರ್ಥ. ಇಂಗ್ಲಿಷ್‌ನಲ್ಲಿ ಫ್ಲಾಂಬೊಯಾಂಟ್, ರಾಯಲ್ ಗೋಲ್ಡ್ ಮೊಹರ್, ರಾಯಲ್ ಪೀಕಾಕ್‌ ಫ್ಲವರ್, ಫೈರ್ ಟ್ರೀ ಮೊದಲಾದ ಹೆಸರುಗಳಿವೆ. ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಈ ಹೂ ಅರಳುವುದರಿಂದ ‘ಮೇ ಫ್ಲವರ್’ ಎನ್ನುತ್ತಾರೆ.

ಈ ಮರದ ಹೂಗಳನ್ನು ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ.

ಗ್ರಾಮೀಣ ಭಾಗದ ಮಕ್ಕಳು ಇದರ ಮೊಗ್ಗನ್ನು ‘ಕೋಳಿ ಜಗಳ’ ಆಟದಲ್ಲಿ ಬಳಸುತ್ತಾರೆ. ಜೊತೆಗೆ ಎಲೆಗಳು ಆರ್ಯುವೇದ ಔಷಧೀಯ ಗುಣಗಳನ್ನು ಹೊಂದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು