ಬುಧವಾರ, ಆಗಸ್ಟ್ 21, 2019
25 °C
ಕೋರಂಗಾಲದಲ್ಲಿ ರಕ್ಷಣೆಗೆ ಹೋದವರೇ ಶವವಾದರು, 300 ಮಂದಿ ರಕ್ಷಣೆ

ಭೀಕರ ಭೂಕುಸಿತ: ಕೊಡಗಿನಲ್ಲಿ 7 ಸಾವು, 8 ಮಂದಿ ಕಣ್ಮರೆ

Published:
Updated:

ಮಡಿಕೇರಿ: ಕೊಡಗಿನಲ್ಲಿ ಭೂಕುಸಿತಕ್ಕೆ ಶುಕ್ರವಾರ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತದಿಂದ ಮೃತಪಟ್ಟವರ ಪೈಕಿ, ಮೂವರು ರಕ್ಷಣೆಗೆ ಧಾವಿಸಿದವರು.

ಮನೆ ಮಾಲೀಕ ಯಶವಂತ್‌, ರಕ್ಷಣೆಗೆ ತೆರಳಿದ್ದ ಬಾಲಕೃಷ್ಣ, ಯಮುನಾ, ಉದಯ್‌ ಮೃತಪಟ್ಟವರು. ಮನೆಯಲ್ಲಿದ್ದ ದಿಗಂತ್‌, ಶಶಿಕಲಾ ಪಾರಾಗಿದ್ದಾರೆ. ಅದೇ ಸ್ಥಳದಲ್ಲಿ ಮತ್ತೊಬ್ಬರ ಮೃತದೇಹ ಪತ್ತೆಯಾಗಿದೆ.

ಮನೆಯವರನ್ನು, ಸುರಕ್ಷಿತ ಪ್ರದೇಶಕ್ಕೆ ಬರುವಂತೆ ಮನವೊಲಿಸಲು ತೆರಳಿದಾಗಲೇ ಭೂಕುಸಿತ ಸಂಭವಿಸಿದೆ.  

ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದಲ್ಲಿ ಮಮತಾ (40), ಲಿಖಿತಾ (15) ಭೂಕುಸಿತದಿಂದ ಮೃತಪಟ್ಟಿದ್ದಾರೆ. ಅದೇ ಸ್ಥಳದಲ್ಲಿ ಹಲವು ಮನೆಗಳು ನೆಲಸಮವಾಗಿವೆ. 8ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎನ್‌ಡಿಆರ್‌ಎಫ್‌ ಹಾಗೂ ಭಾರತೀಯ ಸೇನೆ ಸಿಬ್ಬಂದಿ ತೋರ ಗ್ರಾಮದಲ್ಲಿ 300 ಜನರನ್ನು ರಕ್ಷಿಸಿದ್ದಾರೆ.

Post Comments (+)