ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತದಾನ ಮಾಡದಿದ್ದರೆ ನಮ್ಮ ಅಸ್ಮಿತೆಯನ್ನೇ ಕಳೆದುಕೊಂಡಂತೆ’

Published 17 ಏಪ್ರಿಲ್ 2024, 5:45 IST
Last Updated 17 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

‘ಮತದಾನ ಮಾಡಿದಿದ್ದರೆ ನಮ್ಮ ಅಸ್ಮಿತೆಯನ್ನೇ ಕಳೆದುಕೊಂಡಂತೆ’

ಮತದಾನವು ಮುಖ್ಯವಾದ ಸಂಗತಿ. ಅದು ನಮ್ಮ ಹಕ್ಕು. ಮತದಾನ ಮಾಡದೇ ಸುಮ್ಮನಿರುವವರು ಅನೇಕ ಮಂದಿ ಇದ್ದಾರೆ. ಇದು ಸರಿಯಲ್ಲ. ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಮಾತ್ರವೇ ಭಾರತ ಅಭಿವೃದ್ಧಿಯಾಗುತ್ತದೆ.

ಮತದಾನ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಹಣ ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ, ಯಾವುದೇ ಪೂರ್ವಾಗ್ರಹ ಭಾವನೆಗಳಿಲ್ಲದೇ, ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು.

ಒಂದು ವೇಳೆ ಮತದಾನ ಮಾಡದೇ ಇದ್ದರೆ, ನಾವೇ ನಮ್ಮ ಅಸ್ಮಿತೆಯನ್ನು ಕಳೆದುಕೊಂಡಂತೆ. ಸೂಕ್ತ ಜನಪ್ರತಿನಿಧಿ ಆಯ್ಕೆಯಾಗದೇ ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ. ಹಾಗಾಗಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು.

–ಅಂಕಿತಾ ಸುರೇಶ್, ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರು. (ಕೊಡಗು ಜಿಲ್ಲೆಯ ಕಂಬಿಬಾಣೆಯ ನಿವಾಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT