ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಕಾಫಿ ತೋಟ ಭೂಪರಿವರ್ತನೆ ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

Published 1 ಮೇ 2024, 15:36 IST
Last Updated 1 ಮೇ 2024, 15:36 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಸಿದ್ದಾಪುರದ ಕಾವೇರಿ ಜಲಾನಯನ ಪ್ರದೇಶದಲ್ಲಿ 2,400 ಎಕರೆ ಕಾಫಿ ತೋಟವನ್ನು ಭೂಪರಿವರ್ತನೆ ಮಾಡಬಾರದು ಎಂದು ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಯುನೆಸ್ಕೊದ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ದೊಡ್ಡ ಪ್ರಮಾಣದಲ್ಲಿ ಕಾಫಿ ತೋಟವನ್ನು ಭೂಪರಿವರ್ತನೆ ಮಾಡಿ ಅಲ್ಲಿ ಉಪನಗರ, ಮಿನಿನಗರಗಳು ಹಾಗೂ ಬಡಾವಣೆಗಳು ನಿರ್ಮಾಣವಾದರೆ ಮುಂದೆ ಭಾರಿ ಉತ್ಪಾತಕ್ಕೆ ಕಾರಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಫಿ ತೋಟ ಭೂಪರಿವರ್ತನೆ ಮಾಡಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸುವುದರಿಂದ ಸಾವಿರಾರು ಮರಗಳ ಹನನವಾಗುತ್ತದೆ; ಅಪೂರ್ವ ಜೀವವೈವಿಧ್ಯಗಳು ನಾಶವಾಗುತ್ತವೆ. ಹಸಿರು ಹೊದಿಕೆ ಇಲ್ಲವಾಗಿ ಪರಿಸರಕ್ಕೆ ತೊಂದರೆ ಆಗುತ್ತದೆ. ಹಲವು ತೊರೆಗಳು, ಜಲಮೂಲಗಳು ಬತ್ತಿ ಹೋಗಿ, ಅವು ಸೇರುವ ನದಿಗಳಲ್ಲಿ ನೀರು ಕಡಿಮೆಯಾಗುತ್ತದೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎನ್.ಯು.ನಾಚಪ್ಪ, ‘ಪತ್ರವನ್ನು ಪ್ರಧಾನಮಂತ್ರಿ, ರಾಷ್ಟ್ರಪ‍ತಿ ಸೇರಿದಂತೆ ಸಂಬಂಧಪಟ್ಟವರಿಗೆ ರವಾನಿಸಲಾಗಿದೆ. ಸದ್ಯದಲ್ಲೇ ಪ್ರತಿಭಟನೆಯನ್ನೂ ನಡೆಸಿ ಗಮನಸೆಳೆಯಲಾಗುವುದು’ ಎಂದು ಹೇಳಿದರು.

‘ದೊಡ್ಡ ಪ್ರಮಾಣದಲ್ಲಿ ಭೂಪರಿವರ್ತನೆ ಕೋರಿ ಯಾವುದೇ ಅರ್ಜಿಗಳು ಬಂದಿಲ್ಲ’ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT